ಕುತೂಹಲ ಘಟ್ಟಕ್ಕೆ ಮೊಹಾಲಿ ಟೆಸ್ಟ್

ಮೊಹಾಲಿ: ಮುರಳಿ ವಿಜಯ್ (153) ಸತತ ಎರಡನೇ ಶತಕ ಸಿಡಿಸಿದ ನಂತರ ಯುವ ವೇಗದ ಬೌಲರ್ ಭುವನೇಶ್ವರ ಕುಮಾರ್, ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾದ ಅಗ್ರಕ್ರಮಾಂಕದ ಮೂರು ವಿಕೆಟ್ ಕಬಳಿಸುವುದರೊಂದಿಗೆ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್ನಲ್ಲಿ 91 ರನ್ ಹಿನ್ನಡೆ ಅನುಭವಿಸಿದ್ದ ಪ್ರವಾಸಿ ಆಸೀಸ್, ನಂತರ ದ್ವಿತೀಯ ಇನಿಂಗ್ಸ್ನಲ್ಲಿ 75 ರನ್ಗಳಿಗೆ ಮಹತ್ವದ ಮೂರು ವಿಕೆಟ್ ಕಳೆದುಕೊಂಡಿದ್ದು ತೀವ್ರ ಸಂಕಷ್ಟದಲ್ಲಿ ಸಿಲುಕಿದೆ. ಆಸೀಸ್ನ ಆರಂಭಿಕರಾದ ಡೇವಿಡ್ ವಾರ್ನರ್ (2), ಎಡ್ ಕೋವನ್ (8) ಹಾಗೂ ಸ್ಟೀವನ್ ಸ್ಮಿತ್ (5) ದ್ವಿತೀಯ ಇನಿಂಗ್ಸ್ನಲ್ಲಿ ಬೇಗನೆ ವಿಕೆಟ್ ಒಪ್ಪಿಸಿದರು.
ಹೀಗಾಗಿ 4ನೇ ದಿನಾಂತ್ಯಕ್ಕೆ ಫಿಲಿಪ್ ಹ್ಯೂಸ್ (ಅಜೇಯ 53) ಹಾಗೂ ನೈಟ್ವಾಚ್ಮನ್ ನಥಾನ್ ಲೇಯಾನ್ (4) ಕ್ರೀಸ್ನಲ್ಲಿದ್ದಾರೆ.
ಹೀಗಾಗಿ 5ನೇ ಮತ್ತು ಅಂತಿಮ ಒಂದು ದಿನ ಮಾತ್ರ ಬಾಕಿ ಉಳಿದಿರುವ ಪಂದ್ಯದಲ್ಲಿ ಆಸೀಸ್ ಬ್ಯಾಟ್ಸ್ಮನ್ಗಳು ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗುವರೇ ಅಥವಾ ಭಾರತ ಗೆಲ್ಲುವುದೇ ಎಂಬ ಕುತೂಹಲ ಮೂಡಿದೆ.
ಭಾರತ ಈಗಾಗಲೇ 4 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ವಿಜಯ ಸಾಧಿಸಿದ್ದು, ಈ ಪಂದ್ಯದಲ್ಲಿ ಜಯ ಕಾಣುವ ಮೂಲಕ ಸರಣಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ.
ಫಾರ್ಮ್ ಕಳೆದುಕೊಂಡಿರುವ ಆಸೀಸ್ನ ಹ್ಯೂಸ್ 1 ಸಿಕ್ಸರ್ ಮತ್ತು 9 ಬೌಂಡರಿಗಳೊಂದಿಗೆ ಅರ್ಧ ಶತಕ ಪೂರೈಸುವ ಮೂಲಕ ಆಸೀಸ್ಗೆ ಭರವಸೆ ಮೂಡಿಸಿದರೆ. ಇನ್ನೊಂದೆಡೆ 25 ರನ್ಗಳಿಗೆ 3 ವಿಕೆಟ್ ಕಬಳಿಸಿದ ಭುವನೇಶ್ವರ ಭಾರತಕ್ಕೆ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.
ಇದಕ್ಕೂ ಮುನ್ನ, ಶನಿವಾರ ಯಾವುದೇ ವಿಕೆಟ್ ನಷ್ಟವಿಲ್ಲದೆ 283 ರನ್ ಗಳಿಸಿದ್ದ ಭಾರತ ದಿನದ ಆಟ ಆರಂಭಿಸಿತು. ಆದರೆ, ಆಸೀಸ್ನ ಪೀಟರ್ ಸಿಡ್ಲ್ ಮಾರಕ ದಾಳಿಗೆ ಸಿಲುಕುವ ಮೂಲಕ 499 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಈ ಮೊತ್ತದ ಶ್ರೇಯಸ್ಸು ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಶಿಖರ್ ಧವನ್ಗೆ (187) ಸಲ್ಲಬೇಕು. 174 ಎಸೆತಗಳನ್ನು ಎದುರಿಸಿದ ಧವನ್ ಮೊತ್ತದಲ್ಲಿ 2 ಸಿಕ್ಸರ್ 33 ಬೌಂಡರಿಗಳು ಸೇರಿದ್ದವು. ಇನ್ನು 414 ನಿಮಿಷಗಳ ಕಾಲ ಕ್ರೀಸ್ನಲ್ಲಿದ್ದು, 317 ಎಸೆತಗಳನ್ನು ಎದುರಿಸಿದ ವಿಜಯ್ ಮೊತ್ತದಲ್ಲಿ 3 ಸಿಕ್ಸರ್ ಮತ್ತು 19 ಬೌಂಡರಿಗಳು ಸೇರಿದ್ದವು. ವಿಜಯ್ ಇದುವರೆಗೂ ಟೆಸ್ಟ್ನಲ್ಲಿ 3 ಶತಕ ದಾಖಲಿಸಿದ್ದು, ಮೂರು ಶತಕಗಳನ್ನೂ ಆಸ್ಟ್ರೇಲಿಯಾ ವಿರುದ್ಧವೇ ದಾಖಲಿಸಿದ್ದಾರೆ.
ಒಂದು ಹಂತದಲ್ಲಿ ಬೃಹತ್ ಮೊತ್ತ ದಾಖಲಿಸುವ ಸೂಚನೆ ತೋರಿದ್ದ ಆತಿಥೇಯ ಭಾರತ ನಂತರ 500 ರನ್ ಪೂರೈಸುವುದರೊಳಗೆ ಆಲೌಟ್ ಆಯಿತು. ಎರಡನೇ ಹೊಸ ಚೆಂಡಿನೊಂದಿಗೆ ಮ್ಯಾಜಿಕ್ ಮೆರೆದ ಆಸೀಸ್ನ ಬೌಲರ್ಗಳಾದ ಸಿಡ್ಲ್ ಮತ್ತು ಸ್ಟಾರ್ಕ್, ಕೇವಲ 87 ರನ್ಗಳಿಗೆ ಭಾರತದ ಅಂತಿಮ ಏಳು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಭೋಜನ ವಿರಾಮದ ಹೊತ್ತಿಗೆ ಭಾರತ 3 ವಿಕೆಟ್ ನಷ್ಟಕ್ಕೆ 384 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ, ಭೋಜನ ವಿರಾಮದ ನಂತರ ಲುಗಬಗನೆ ವಿಕೆಟ್ ಕಬಳಿಸಿದ ಆಸ್ಟ್ರೇಲಿಯಾ ತಿರುಗೇಟು ನೀಡಿತು.
ಹೀಗಾಗಿ ಆರಂಭಿಕರ ನಂತರ ಬಂದವರಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (ಅಜೇಯ 67) ಅರ್ಧ ಶತಕ ಪೂರೈಸಿದರು. ಸಚಿನ್ ತೆಂಡೂಲ್ಕರ್ (37) ಸಹ ಹೋರಾಟ ನಡೆಸಲು ಪ್ರಯತ್ನಿಸಿದರು. ಆದರೆ, ಸ್ಮಿತ್ ಬೌಲಿಂಗ್ನಲ್ಲಿ ಎಡ್ ಕೋವನ್ಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ತೆರಳಿದರು.
ಆದರೆ, ಭರವಸೆಯ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ (1) ಸಿಡ್ಲ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂಗೆ ಬಲಿಯಾದರು.
ನಾಯಕ ಧೋನಿ ಸಹ ಸ್ಟಾಕ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂಗೆ ಬಲಾಯಿದರು.
ಸ್ಕೋರ್ ಬೋರ್ಡ್
ಮೊದಲ ಇನಿಂಗ್ಸ್:
ಆಸ್ಟ್ರೇಲಿಯಾ 408/10
ಭಾರತ 499/10 ಮುರಳಿ ವಿಜಯ್ ಎಲ್ಬಿಡಬ್ಲ್ಯೂ ಬಿ ಸ್ಟಾರ್ಕ್ 153, ಶಿಖರ್ ಧವನ್ ಸಿ ಕೋವನ್ ಬಿ ಸಿಡ್ಲ್ 187, ಚೇತೇಶ್ವರ ಪೂಜಾರ ಎಲ್ಬಿಡಬ್ಲ್ಯೂ ಬಿ ಸಿಡ್ಲ್ 1, ಸಚಿನ್ ತೆಂಡೂಲ್ಕರ್ ಸಿ ಕೊವನ್ ಬಿ ಸ್ಮಿತ್ 37, ವಿರಾಟ್ ಕೊಹ್ಲಿ ಅಜೇಯ 67, ಮಹೇಂದ್ರ ಸಿಂಗ್ ಧೋನಿ ಎಲ್ಬಿಡಬ್ಲ್ಯೂ 4, ರವಿಂದ್ರ ಜಡೇಜಾ ಸಿ ಹ್ಯಾಡಿನ್ ಬಿ ಸಿಡ್ಲ್ 8, ಆರ್. ಅಶ್ವಿನ್ ಸಿ ಹ್ಯಾಡಿನ್ ಬಿ ಸಿಡ್ಲ್ 4, ಭುವನೇಶ್ವರ ಕುಮಾರ್ ಸಿ ಹ್ಯಾಡಿನ್ ಬಿ ಹೆನ್ರೀಕೆಸ್ 18
ಇಶಾಂತ್ ಶರ್ಮಾ ಸಿ ಹ್ಯಾಡಿನ್ ಬಿ ಸಿಡ್ಲ್ 0, ಪ್ರಗ್ಯಾನ್ ಓಜಾ ಬಿ ಸಿಡ್ಲ್ 1, ಇತರೆ 19.
ವಿಕೆಟ್ ಪತನ: 1-289, 2-292, 3-384, 4-412, 5-416, 6-427, 7-431, 8-492, 9-493, 10-499.
ಬೌಲಿಂಗ್: ಮಿಚೆಲ್ ಸ್ಟಾರ್ಕ್ 23-5-74-2, ಪೀಟರ್ ಸಿಡ್ಲ್ 29.1-9-71-5, ಮೊಯ್ಸಿಸ್ ಹೆನ್ರೀಕೆಸ್ 15-1-62-1, ನಥನ್ ಲೇಯಾನ್ 31-4-124-1, ಜೇವಿಯರ್ ಡೊಹಾರ್ಟಿ 24-8-87-0, ಸ್ಟಿವೆನ್ ಸ್ಮಿತ್ 10-0-63-1.
ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ 75/3
ಡೇವಿಡ್ ವಾರ್ನರ್ ಸಿ ಧೋನಿ ಬಿ ಕುಮಾರ್ 2, ಎಡ್ ಕೋವನ್ ಎಲ್ಬಿಡಬ್ಯ್ಲೂ ಬಿ ಕುಮಾರ್ 8, ಫಿಲಿಪ್ ಹ್ಯೂಸ್ ಅಜೇಯ 53,
ಸ್ಟೀವನ್ ಸ್ಮಿತ್ ಬೌಲ್ಡ್ ಭುವನೇಶ್ವರ 5, ಲೇಯಾನ್ ಅಜೇಯ 4
ವಿಕೆಟ್ ಪತನ: 1-2, 2-35, 3-55.
ಬೌಲಿಂಗ್: ಭುವನೇಶ್ವರ 8-1-25-3, ಇಶಾಂತ್ 2-0-11-0, ಅಶ್ವಿನ್ 7-2-25-0, ಜಡೇಜಾ 2-1-11-0, ಓಜಾ 2-1-1-0.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


