ಕ್ರೀಡೆ

ಸುವರ್ಣ ನ್ಯೂಸ್‌ಗೆ ಆಚಾರ್ಯ ಕಪ್

Published On :

ಬೆಂಗಳೂರು: ಮಾಧ್ಯಮ ವಲಯದ ಸಂಸ್ಥೆಗಳಿಗಾಗಿಯೇ ಆಯೋಜಿಸಲಾಗಿದ್ದ ಆಚಾರ್ಯ ಮೀಡಿಯಾ ಕಪ್ ಅನ್ನು 'ಸುವರ್ಣ ನ್ಯೂಸ್ 24್ಗ7' ತಂಡ ಗೆದ್ದುಗೊಂಡಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸಮಯ ಟಿ.ವಿ. ತಂಡವನ್ನು 5 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ ಸುವರ್ಣ ನ್ಯೂಸ್ ತಂಡ, ಪ್ರಶಸ್ತಿಗೆ ಭಾಜನವಾಯಿತು. ತಲಾ 12 ಓವರ್‌ಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸಮಯ ಟಿ.ವಿ. ತಂಡ, 63 ರನ್ ಗಳಿಸಿ ಆಲೌಟ್ ಆಯಿತು.      ನಂತರ, ಬ್ಯಾಟಿಂಗ್‌ಗೆ ಇಳಿದ ಸುವರ್ಣ ನ್ಯೂಸ್ 5 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿ, ಜಯ ಗಳಿಸಿ, ರು. 30 ಸಾವಿರ ನಗದನ್ನು ಬಹುಮಾನವಾಗಿ ಪಡೆಯಿತು.  ರನ್ನರ್ ಆಪ್ ಆದ ಸಮಯ ಟಿ.ವಿ. ತಂಡ ರು. 20 ಸಾವಿರ ಮೊತ್ತ ಪಡೆದುಕೊಂಡಿತು.
ಸುವರ್ಣ ನ್ಯೂಸ್‌ನ ಸುಭಾಷಿತ್ ಅವರು 'ಪಂದ್ಯ ಶ್ರೇಷ್ಠ' ಗೌರವ ಪಡೆದರೆ, ಅಭಿಷೇಕ್ 'ಸರಣಿ ಶ್ರೇಷ್ಠ' ಪ್ರಶಸ್ತಿ ಪಡೆದರು. ಸುವರ್ಣ ನ್ಯೂಸ್‌ನವರೇ ಆದ ದಿಲಿಪ್ 'ಶ್ರೇಷ್ಠ ಬೌಲರ್‌', ಸಮಯ ಟಿ.ವಿ. ತಂಡದ ಲೋಕೇಶ್ 'ಶ್ರೇಷ್ಠ ಬ್ಯಾಟ್ಸ್‌ಮನ್‌' ಹಾಗೂ ಜನಶ್ರೀ ವಾಹಿನಿಯ ವಸಂತ್ ಅವರು 'ಶ್ರೇಷ್ಠ ಫೀಲ್ಡರ್‌' ಗೌರವಕ್ಕೆ ಪಾತ್ರರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.