ಹಾಕಿ: ಪಾಕಿಸ್ತಾನ ಮಣಿಸಿದ ಭಾರತ
ಐಪೋ: ಡ್ರಾಗ್ ಫ್ಲಿಕರ್ ರೂಪಿಂದರ್ ಸಿಂಗ್ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಆತಿಥೇಯ ಭಾರತ ತಂಡ, ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ 4-2 ಅಂತರದಲ್ಲಿ ಜಯ ಸಾಧಿಸಿದೆ. ಪಂದ್ಯಾವಳಿಯ ಐದನೇ ಹಾಗೂ ಆರನೇ ಸ್ಥಾನಗಳಿಗಾಗಿ ಈ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಜಯ ಗಳಿಸಿದ್ದರಿಂದ ಟೂರ್ನಿಯಲ್ಲಿ, ಕೊನೆಯ ಸ್ಥಾನಕ್ಕೆ ಜಾರುವುದನ್ನು ಭಾರತ ತಪ್ಪಿಸಿಕೊಂಡಂತಾಗಿದೆ. ಪಂದ್ಯದ 9ನೇ ನಿಮಿಷದಲ್ಲಿ ಹಾಗೂ 62ನೇ ನಿಮಿಷದಲ್ಲಿ ರೂಪಿಂದರ್ ಸಿಂಗ್, ತಮಗ ಸಿಕ್ಕಿದ್ದ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಗೋಲು ಗಳಿಸಿದರು. ಭಾರತದ ಪರ ದಾಖಲಾದ ಮತ್ತೆರಡು ಗೋಲುಗಳು ಆಕಾಶ್ದೀಪ್ (35ನೇ ನಿಮಿಷ) ಹಾಗೂ ಮಾಲಕ್ ಸಿಂಗ್ (44ನೇ ನಿಮಿಷ) ಅವರಿಂದ ಬಂದವು. ಈ ಪಂದ್ಯದಲ್ಲಿನ ಸೋಲಿನ ಮೂಲಕ ಈ ಬಾರಿಯ ಪಂದ್ಯಾವಳಿಯಲ್ಲಿ ಕೊನೆಯ ಸ್ಥಾನವನ್ನು ಅಲಂಕರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

