ಕ್ರೀಡೆ

ಗೋವಾ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

Published On :

ಕ.ಪ್ರ.ವಾರ್ತೆ   ಶಿವಮೊಗ್ಗ   ಮಾ.17-
ಇಲ್ಲಿನ ಪೆಸಿಟ್ ಕಾಲೇಜಿನ ಅಬ್ದುಲ್ ಕಲಾಂ ಕ್ರೀಡಾಂಗಣದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ-20 (ದಕ್ಷಿಣ ವಲಯ) ಕ್ರಿಕೆಟ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನದಿಂದಾಗಿ ಕರ್ನಾಟಕ ತಂಡ ಗೋವಾ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಈ ಜಯದ ಮೂಲಕ, 2 ಅಂಕವನ್ನು ತನ್ನ ಮಡಿಲಿಗೆ ಕರ್ನಾಟಕ ಹಾಕಿಕೊಂಡಿತು. ರಾಜ್ಯ ತಂಡದ ಮಯಾಂಕ್ ಅಗರವಾಲ್ ಮತ್ತು ಮನೀಷ್ ಪಾಂಡೆ (ಅಜೇಯ) ಅರ್ಧಶತಕ ಪಂದ್ಯದ ಹೈಲೈಟ್ ಆಗಿತ್ತು.
ಟಾಸ್ ಗೆದ್ದ ಕರ್ನಾಟಕ ಮೊದಲು ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಬೌನ್ಸಿ ಪಿಚ್ನ ಲಾಭ ಪಡೆದ ವಿನಯ್ ಸಾರಥ್ಯದ ಕರ್ನಾಟಕ ಬೌಲಿಂಗ್ ಪಡೆ ಯಾವುದೇ ಹಂತದಲ್ಲಿ ಗೋವಾ ತಂಡದ ಮೇಲುಗೈ ಕಾಣಲು ಅವಕಾಶ ಕೊಡಲೇ ಇಲ್ಲ. ಅಂತಿಮವಾಗಿ 18.3 ಓವರ್ಗಳಲ್ಲಿ 116 ರನ್ಗಳಿಗೆ ಎದುರಾಳಿ ತಂಡವನ್ನು ಆಲೌಟ್ ಮಾಡಿತು. ಗೋವಾ ತಂಡ ಪರ ಕೆ.ಎ.ವಾಜ್ 33 ಎಸೆತಗಳಲ್ಲಿ ಒಂದು ಸಿಕ್ಸರ್ ಸಹಿತ 41 ರನ್ ಗಳಿಸಿ ಆಸರೆಯಾದರು.  ಉಳಿದಂತೆ ಪಿಂಟೋ ಹಾಗೂ ಶುಕ್ಲ 20ರನ್ ಗಡಿ ದಾಟಿದ್ದು ಬಿಟ್ಟರೆ ಉಳಿದವರ್ಯಾರೂ ಎರಡಂಕಿಯನ್ನೂ ಮುಟ್ಟಲಿಲ್ಲ. ಕರ್ನಾಟಕ ಪರ ವಿನಯ್, ಮಿಥುನ್ ತಲಾ 2 ವಿಕೆಟ್ ಪಡೆದುಕೊಂಡರೆ, ಬಿನ್ನಿ, ಮನೀಷ್ ಪಾಂಡೆ, ಗೌತಮ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ಸುಲಭ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡ ಮೊದಲ ವಿಕೆಟ್ಗೆ 108 ರನ್ಗಳ ಭದ್ರ ಬುನಾದಿ ಬಿತ್ತು. ತಾಳ್ಮೆಯುತವಾಗಿ ಬ್ಯಾಟ್ ಬೀಸಿದ ಆರಂಭಿಕರಾದ ಮಾಯಾಂಕ್ ಅಗರ್ವಾಲ್ ಹಾಗೂ ಮನೀಷ್ ಪಾಂಡೆ ಆಗಿಂದಾಗೆ ಬಾಲನ್ನು ಬೌಂಡರಿ ಗೆರೆಯತ್ತ ದಾಟಿಸುತ್ತಾ ತಂಡದ ಮೊತ್ತವನ್ನು ಏರಿಸಿದರಲ್ಲದೇ ಪ್ರೇಕ್ಷಕರನ್ನು ರಂಜಿಸಿದರು. ಎಸ್.ಜೆ. ಬುದ್ಧಿಜುಮಾಮ ಅವರ ಎಸೆತಕ್ಕೆ ಬೌಲ್ಡ್ ಆಗುವ ಮುನ್ನ ಮಾಯಾಂಕ ಅಗರ್ವಾಲ್ 48 ಎಸೆತಗಳಲ್ಲಿ 55 ರನ್ ಗಳಿಸಿದ್ದರು. ಇದರಲ್ಲಿ 4 ಬೌಂಡರ್, ಎರಡು ಆಕರ್ಷಕ ಸಿಕ್ಸರ್ ಸಹಿತ ಸೇರಿತ್ತು.
ಅಜೇಯರಾಗಿ ಉಳಿದ ಮನೀಷ್ ಪಾಂಡೆ 57 ಎಸೆತಗಳಲ್ಲಿ 55 ರನ್ ಗಳಿಸಿ ತಂಡವನ್ನು ವಿಜಯದ ಗಡಿಗೆ ತಲುಪಿಸಿದರು. ಇವರ ವೈಯಕ್ತಿಕ ಮೊತ್ತದಲ್ಲಿ ಮೂರು ಸಿಕ್ಸರ್ ಎರಡು ಬೌಂಡರಿ ಸೇರಿತ್ತು. ಇನ್ನೊಂದು ತುದಿಯಲ್ಲಿ 3 ರನ್ ಗಳಿಸಿದ ಕೆ.ಎಲ್. ರಾಹುಲ್ ಅಜೇಯರಾಗಿ ಉಳಿದರು.


ಕೇರಳಕ್ಕೆ ಅಚ್ಚರಿ ಜಯ
ಶಿವಮೊಗ್ಗದ ಜೆಎನ್ಎನ್ಸಿ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಪ್ರಬಲ ಹೈದ್ರಾಬಾದ್ ತಂಡದ ವಿರುದ್ಧ ಕೇರಳ ತಂಡ ಎರಡು ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ಗಳ ಅಚ್ಚರಿ ಜಯ ದಾಖಲಿಸಿತು. ಟಾಸ್ ಗೆದ್ದ ಕೇರಳ ತಂಡ ಕ್ಷೇತ್ರ ರಕ್ಷಣೆ ಆಯ್ದುಕೊಂಡಿತು. ನಿಗದಿತ 20 ಓವರ್ಗಳಲ್ಲಿ ಹೈದ್ರಾಬಾದ್ 6 ವಿಕೆಟ್ ನಷ್ಟಕ್ಕೆ 133 ರನ್ ಕಲೆ ಹಾಕುವುದಕ್ಕೆ ಸೀಮಿತಗೊಂಡಿತು. ತಂಡದ ಪರವಾಗಿ ಜಿ.ಎಚ್. ವಿಹಾರಿ 34 ರನ್, ರವಿತೇಜ 28 ಹಾಗೂ ಟಿ.ಎಲಲ್ಸುಮನ್ 23 ರನ್ಗ್ಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಕೇರಳ ತಂಡ 19.4 ಓವರ್ಗಳಲ್ಲಿ ಗೆಲುವಿನ ಗುರಿಯನ್ನು ಮುಟ್ಟಿತು. ಆರಂಭಿಕ ಆಟಗಾರ ಸುರೇಂದ್ರನ್ 53 ರನ್ ಗಳಿಸಿದರೆ ನಾಯಕ ಸಚಿನ್ ಬೇಬಿ 37 ಹಾಗೂ ಸ್ಯಾಮ್ಸನ್ 30 ರನ್ಗಳಿಸಿ ತಂಡದ ಗೆಲುವಿಗೆ ನೆರವಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.