ಮಿಯಾಮಿ ಮಾಸ್ಟರ್ಸ್: ಸಾನಿಯಾ ಜೋಡಿ ಕ್ವಾರ್ಟರ್ಫೈನಲ್ಗೆ
ವಿಯಾಮಿ: ಭಾರತದ ಸಾನಿಯಾ ಮಿರ್ಜಾ ಮತ್ತು ಅವರ ಜತೆಯಾಟಗಾರ್ತಿ ಅಮೆರಿಕದ ಬೆಥಾನೀ ಮಾಟೆಕ್ ಸ್ಯಾಂಡ್ಸ್ ಮಿಯಾಮಿ ಮಾಸ್ಟರ್ಸ್ ಎಟಿಪಿ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದ್ದಾರೆ. ಆದರೆ, ರೋಹನ್ ಬೋಪಣ್ಣ ಮತ್ತು ರಾಜೀವ್ ರಾಮ್ ಜೋಡಿ ಸೋಲುವುದರೊಂದಿಗೆ ಪುರುಷರ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಸಾನಿಯಾ ಮತ್ತು ಅಮೆರಿಕದ ಬೆಥಾನಿ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಜರ್ಮೈಲ್ ಗಾಡೋಸೋವಾ ಮತ್ತು ಸಬೀನಾ ಲಿಸಿಕಿ ಜೋಡಿಯನ್ನು 6-1, 3-6, 10-7 ಸೆಟ್ಗಳ ಅಂತರದಿಂದ ಸೋಲಿಸಿದರು. ಸಾನಿಯಾ -ಬೇಥಾನಿ ಜೋಡಿ ಈಗ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸರಾ ಎರ್ರಾನಿ ಮತ್ತು ರಾಬರ್ಟ್ ವಿನ್ಸಿ ಜೋಡಿಯನ್ನು ಎದುರಿಸಲಿದೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಶ್ರೇಯಾಂಕ ಪಡೆಯದ ಬೋಪಣ್ಣ ಮತ್ತು ರಾಮ್ ಜೋಡಿ, ದ್ವಿತೀಯ ಸುತ್ತಿನಲ್ಲಿ ಎರಡನೇ ಶ್ರೇಯಾಂಕ ಪಡೆದ ಮಾರ್ಸೆಲ್ ಗ್ರಾನೋಲ್ಲೆರ್ಸ್ ಹಾಗೂ ಮಾರ್ಕ್ ಲೋಪೆಜ್ ಜೋಡಿ ವಿರುದ್ಧ 6-4, 7-6(5) ಅಂತರದಿಂದ ಸೋಲನುಭವಿಸಿತು. ಇನ್ನು ಸಿಂಗಲ್ಸ್ ವಿಭಾಗದಲ್ಲಿ ಸೋಮ್ದೇವ್ ದೇವ್ವರ್ಮನ್ ವಿಶ್ವದ ನಂ.1 ಆಟಗಾರ ನೋವಾಕ್ ಜೊಕೊವಿಚ್ ವಿರುದ್ಧ ಕೈಚೆಲ್ಲಿದ್ದು, ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಸಹ ಪುರುಷರ ಡಬಲ್ಸ್ ವಿಭಾಗದಲ್ಲಿ ತಮ್ಮ ಜತೆಯಾಟಗರಾರೊಂದಿಗೆ ಪರಾಭವ ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

