ಬೆಂಗಳೂರು: ಭಾರತ ಮತ್ತು ಇಂಡೋನೇಷಿಯಾ ನಡುವೆ ಏ.5 ರಿಂದ ಏ.7ರವರೆಗೆ ಏಷ್ಯಾ ಓಷಿಯಾನ್ ಡೆವಿಸ್ ಕಪ್ ಮೊದಲ ಗುಂಪಿನ ಪಂದ್ಯಗಳು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಗೆ ಟಿಕೆಟ್‌ಗಳನ್ನು ಶುಕ್ರವಾರದಿಂದ ಮಾರಾಟ ಮಾಡಲಾಗುವುದು. ಈ ಪಂದ್ಯಾವಳಿಗೆ ದಿನದ ಟಿಕೆಟ್‌ಗೆ 200 ರಿಂದ 600ವರೆಗೂ ನಿಗದಿ ಪಡಿಸಲಾಗಿದ್ದು, ಮೂರೂ ದಿನಗಳಿಗೆ ಸೇರಿದಂತೆ 750 ಕ್ಕೆ ಪೂರ್ಣ ಪ್ರಮಾಣದ ಟಿಕೆಟ್ ನೀಡಲಾಗುವುದು. ಟಿಕೆಟ್‌ಗಳನ್ನು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಕ್ರೀಡಾಂಗಣದಲ್ಲಿನ ಟಿಕೆಟ್ ಕೌಂಟರ್‌ನಲ್ಲಿ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ನೀಡಲಾಗುತ್ತದೆ. ಇನ್ನು ಆನ್‌ಲೈನ್ ಮೂಲಕ ಟಿಕೆಟ್ ಪಡೆಯಲು www.bookmyshow.com ಗೆ ಭೇಟಿ ನೀಡಬೇಕು.