ಮುಂಬೈ: ಈ ಬಾರಿಯ ಐಪಿಎಲ್ ಪಂದ್ಯಾವಳಿಯನ್ನು ಗೆಲ್ಲಲು ತಯಾರಿ ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ತಂಡವು, ಶುಕ್ರವಾರ ತಮ್ಮ ಅಭ್ಯಾಸವನ್ನು ಆರಂಭಿಸಿತು. ತಂಡದ ನಾಯಕ ರಿಕಿ ಪಾಂಟಿಂಗ್ ಗುರುವಾರ ರಾತ್ರಿ ತಂಡವನ್ನು ಸೇರಿಕೊಂಡ ಹಿನ್ನಲೆಯಲ್ಲಿ ಅಭ್ಯಾಸ ನಡೆಸಲಿಲ್ಲ. ಆದರೆ ತಂಡದ ಇತರೆ ಆಟಗಾರರ ಅಭ್ಯಾಸದ ವೇಳೆ ಹಾಜರಿದ್ದ ಪಾಂಟಿಂಗ್ ಆಟಗಾರರ ಅಭ್ಯಾಸವನ್ನು ಪರಿಶೀಲಿಸಿದರು. ತಂಡದಲ್ಲಿನ ಆಟಗಾರರು ಗುಂಪು ಗುಂಪುಗಳಾಗಿ ತಂಡವನ್ನು ಸೇರಿಕೊಳ್ಳುತ್ತಿದ್ದು, ಇನ್ನು ಕೆಲವು ಆಟಗಾರರು ತಂಡವನ್ನು ಮುಂದಿನ ಕೆಲ ದಿನಗಳಲ್ಲಿ ಸೇರಿಕೊಳ್ಳಲಿದ್ದು, ಮತ್ತೇ ಕೆಲವರು ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ತಂಡವನ್ನು ಸೇರಲಿದ್ದಾರೆ ಎಂದು ತಂಡದ ವಕ್ತಾರ ತಿಳಿಸಿದರು.