ಪುಣೆ: ಆಸೀಸ್‌ನ ಮೈಕಲ್ ಕ್ಲಾರ್ಕ್ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿ ಈ ಬಾರಿಯ ಐಪಿಎಲ್‌ನಿಂದ ಹಿಂದೆ ಸರಿದಿದ್ದು, ಈ ಹಿನ್ನಲೆಯಲ್ಲಿ ಪುಣೆ ವಾರಿಯರ್ಸ್ ತಂಡ ಕ್ಲಾರ್ಕ್ ಅವರ ಬದಲಿಗೆ ಆಸೀಸ್‌ನ ಮತ್ತೋರ್ವ ಆಟಗಾರ ಆ್ಯರನ್ ಫಿಂಚ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆಸೀಸ್‌ನ ಆರಂಭಿಕ ಆಟಗಾರನಾಗಿರುವ ಫಿಂಚ್, ನಾಳೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಪ್ರಯಾಣ ಮಾಡಲಿದ್ದಾರೆ. ಈ ಹಿಂದೆ ಫಿಂಚ್ ಐಪಿಎಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಆಡಿದ್ದರು. ಪುಣೆ ತಂಡ ಫಿಂಚ್ ಅವರಿಗೆ ಅವರ ಮೂಲ ಬೆಲೆ 1 ಕೋಟಿಗೆ ಒಪ್ಪಂದ ಮಾಡಿಕೊಂಡಿದೆ.