ಕ್ರೀಡೆ

ಟ್ರಯಲ್ಸ್ ವೇಳೆ ಕುಸಿದು ಬಿದ್ದ ಶೂಟರ್

Published On :

ನವದೆಹಲಿ: ಜೂನಿಯರ್ ಶೂಟರ್‌ಗಳ ಟ್ರಯಲ್ಸ್ ವೇಳೆ, ಪುಷ್ಕರ್ ಎಂಬ ಶೂಟರ್ ಹಠಾತ್ತನೆ ಕುಸಿದುಬಿದ್ದ ಘಟನೆ ಬುಧವಾರ ಡಾ. ಕಾರ್ಣಿ ಸಿಂಗ್ ಶೂಟಿಂಗ್ ರೇಂಜ್ ಕ್ರೀಡಾಂಗಣದಲ್ಲಿ ನಡೆದಿದೆ.  ಮೂಲತಃ ಮಧ್ಯಪ್ರದೇಶದವರಾದ ಪುಷ್ಕರ್ ಅವರು, ಜೂನಿಯರ್ ಶೂಟರ್ ಟ್ರಯಲ್ಸ್‌ಗೆ ಕೆಲ ದಿನಗಳ ಹಿಂದೆಯಷ್ಟೇ ಬಂದು ಸೇರಿಕೊಂಡಿದ್ದರು. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಶೂಟರ್ ಜಸ್ಪಾಲ್ ರಾಣಾ ಅವರು ಜೂನಿಯರ್ ಶೂಟರ್‌ಗಳ ತರಬೇತುದಾರರಾಗಿದ್ದು, ಅವರ ಮೇಲುಸ್ತುವಾರಿಯಲ್ಲಿ ಈ ಟ್ರಯಲ್ಸ್ ಕ್ಯಾಂಪ್ ನಡೆಯುತ್ತಿದೆ. ಪುಷ್ಕರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಬಿಸಿಲಿನ ಝಳ ಹಾಗೂ ಒತ್ತಡದಿಂದಾಗಿ ಅವರು ಕುಸಿದು ಬೀಳಲು ಕಾರಣ ಎಂದು ವೈದ್ಯರು ತಿಳಿಸಿರುವುದಾಗಿ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಹೇಳಿದೆ. ಇದೀಗ, ಪುಷ್ಕರ್ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆಂದು ಸಂಸ್ಥೆ ಹೇಳಿದೆ.  ಆದರೆ, ಜೂನಿಯರ್ ಶೂಟರ್‌ಗಳ ಈ ಕ್ಯಾಂಪ್‌ನಲ್ಲಿ ಭಾಗವಹಿಸುತ್ತಿರುವ ಅಭ್ಯರ್ಥಿಗಳಿಗೆ ಸೂಕ್ತ ಸೌಕರ್ಯ ಒದಗಿಸದಿರುವುದು ಈ ಘಟನೆಗೆ ಕಾರಣವೆಂದು ಪುಷ್ಕರ್ ಅವರ ಪೋಷಕರು ದೂರಿದ್ದಾರೆಂದು ಕೆಲ ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.