ಕ್ರೀಡೆ

ಧವನ್‌ಗೆ ಶಿಖಾರಿಯಾದ ಮುಂಬೈ

ಧವನ್‌ಗೆ ಶಿಖಾರಿಯಾದ ಮುಂಬೈ
Published On :

ಹೈದರಾಬಾದ್: ಶಿಖರ್ ಧವನ್ (ಅಜೇಯ 73) ಆಕರ್ಷಕ ಅರ್ಧ ಶತಕದ ನೆರವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್ ಅಂತರದಿಂದ ಪರಾಭವಗೊಳಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್, ಹೈದರಾಬಾದ್‌ನ ಬಲಿಷ್ಠ ಬೌಲಿಂಗ್ ದಾಳಿಗೆ ತತ್ತರಿಸುವ ಮೂಲಕ ನಿಗದಿತ ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 129 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು.
ನಂತರ ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ಇನ್ನೂ 12 ಎಸೆತಗಳು ಬಾಕಿ ಇರುವಂತೆಯೇ 130 ರನ್ ಪೇರಿಸಿ ಜಯದ ಕೇಕೆ ಹಾಕಿತು.
55 ಎಸೆತಗಳನ್ನು ಎದುರಿಸಿದ ಧವನ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 9 ಬೌಂಡರಿಗಳು ಸೇರಿದ್ದವು.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ದಾಖಲೆ ಸೃಷ್ಟಿಸಿದ್ದ ಆರಂಭಿಕ ಆಟಗಾರ ಧವನ್, ಹನುಮ ವಿಹಾರಿ (25) ಅವರೊಂದಿಗೆ 3ನೇ ವಿಕೆಟ್‌ಗೆ ಒಟ್ಟು 9.2 ಓವರ್‌ಗಳಲ್ಲಿ 74 ರನ್ ರನ್ ಗಳಿಸಿದರು.
ಶಿಖರ್ ಧವನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ ಈ ಆವೃತ್ತಿಯ ತಮ್ಮ ಮೊದಲ ಪಂದ್ಯದಲ್ಲಿ ಅಜೇಯ 63 ರನ್ ಗಳಿಸಿದ್ದರು.
ಈ ಪಂದ್ಯ ಗೆಲ್ಲುವುದರೊಂದಿಗೆ ಹೈದರಾಬಾದ್ ತಂಡ ಆಡಿದ 10 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿದಂತಾಯಿತು. ಆದರೆ, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಇನ್ನು ಪಂದ್ಯದಲ್ಲಿ ಸೋತ ಮುಂಬೈ ತಂಡ ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿ 12 ಅಂಕ ಗಳಿಸುವುದರೊಂದಿಗೆ 4ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡದ ಮಿಚೆಲ್ ಜಾನ್ಸನ್, ಧವಳ್ ಕುಲಕರ್ಣಿ ಹಾಗೂ ಹರ್ಭಜನ್ ಸಿಂಗ್ ತಲಾ ಒಂದು ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭಿಕ ಆಟಗಾರ ಡ್ವೈನ್ ಸ್ಮಿತ್ (38), ರಾಯುಡು (ಅಜೇಯ 34) ತಂಡ 129 ರನ್ ಗಳಿಸಲು ಕಾರಣವಾಗಿದ್ದರು. ಇನಿಂಗ್ಸ್ ಅಂತ್ಯದಲ್ಲಿ ರಾಯುಡು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸದಿದ್ದರೆ, ಮುಂಬೈ 120 ರನ್ ಗಡಿ ದಾಟಲು ಕಷ್ಟವಾಗುತ್ತಿತ್ತು.

ಸ್ಕೋರ್ ಬೋರ್ಡ್
ಮುಂಬೈ ಇಂಡಿಯನ್ಸ್ 129/4 (20 ಓವರ್)
ಸ್ಮಿತ್ ಎಲ್‌ಬಿಡಬ್ಲ್ಯೂ ಬಿ ಮಿಶ್ರಾ 30(40), ಸಚಿನ್ ಬಿ ಇಶಾಂತ್ 14(12), ಕಾರ್ತಿಕ್ ಸಿ ಕರಣ್ ಬಿ ಇಶಾಂತ್ 0(2), ರೋಹಿತ್ ಸಿ ಇಶಾಂತ್ ಬಿ ಮಿಶ್ರಾ 22(22), ಪೊಲಾರ್ಡ್ ಅಜೇಯ 14(19), ರಾಯುಡು ಅಜೇಯ 34(27), ಇತರೆ 7
ವಿಕೆಟ್ ಪತನ: 1-32, 2-32, 3-74, 4-79
ಬೌಲಿಂಗ್: ಕರಣ್ 4-0-25-0, ಸ್ಟೇಯ್ನ್ 4-0-27-0, ಇಶಾಂತ್ 4-1-15-2, ಪೆರೇರಾ 4-0-37-0, ಮಿಶ್ರಾ 4-0-24-2
ಸನ್‌ರೈಸರ್ಸ್ ಹೈದರಾಬಾದ್ 130/3 (18 ಓವರ್)
ಆಶಿಶ್ ಸಿ ಸ್ಮಿತ್ ಬಿ ಜಾನ್ಸನ್ 7(9), ಧವನ್ ಅಜೇಯ 73 (55), ಸಂಗಕ್ಕಾರ ಸಿ ಮತ್ತು ಬಿ ಹರ್ಭಜನ್ 21(21), ವಿಹಾರಿ ಸಿ ರಾಯುಡು ಬಿ ಕುಲಕರ್ಣಿ 25(23), ಸಾಮಿ ಅಜಡೇಯ 1(1), ಇತರೆ 3.
ವಿಕೆಟ್ ಪತನ: 1-16, 2-53, 3-127
ಬೌಲಿಂಗ್: ಜಾನ್ಸನ್ 3-0-21-1, ಕುಲಕರ್ಣಿ 2-0-13-1, ಹರ್ಭಜನ್ 4-0-35-1, ಮಾಲಿಂಗಾ 3-0-23-0, ಓಜಾ 4-0-18-0, ಶರ್ಮಾ 1-0-5-0, ಸ್ಮಿತ್ 1-0-15-0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.