ಆರ್ಸಿಬಿಗೆ ಸುಲಭ ಜಯ

ಪುಣೆ: ಡಿವಿಲಿಯರ್ಸ್ (ಅಜೇಯ 50) ಅರ್ಧ ಶತಕ ಮತ್ತು ಮೊಯ್ಸಿಸ್ ಹೆನ್ರಿಕೇಸ್ (ಅಜೇಯ 27) ಸ್ಫೋಟಕ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಪುಣೆ ವಾರಿಯರ್ಸ್ ವಿರುದ್ಧ 17 ರನ್ಗಳ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಪುಣೆ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 170 ರನ್ಗಳನ್ನು ಗಳಿಸಿತು.
ಪುಣೆ ತಂಡ ಈ ಮೊತ್ತವನ್ನು ಬೆನ್ನಟಲು ಆರಂಭಿಸಿದಾಗ ಆರಂಭಿಕರಿಂದ ಉತ್ತಮ ಕಾಣಿಕೆ ಸಿಗಲಿಲ್ಲ. ಆರಂಭದಲ್ಲಿ ಬಂದ ಫಿಂಚ್ (15), ಸುಮನ್ (11), ಯುವರಾಜ್ (16) , ಸ್ಮಿತ್ (4), ಮ್ಯಾಥ್ಯೂಸ್ (32), ನಾಯರ್ (1) ಹೆಚ್ಚು ರನ್ಗಳಿಸಲಿಲ್ಲ. ಹಾಗಾಗಿ ತಂಡ ಸೋಲನುಭವಿಸಲು ಪ್ರಮುಖ ಕಾರಣವಾಯಿತು.
ವ್ಯರ್ಥವಾದ ಉತ್ತಪ್ಪ ಹೋರಾಟ: ಆರಂಭಿಕರಾಗಿ ಕಣಕ್ಕಿಳಿದ ಉತ್ತಪ್ಪ ತಂಡದ ಗೆಲವಿಗಾಗಿ ಉತ್ತಮ ಹೋರಾಟ ನಡೆಸಿದರು. ಕೇವಲ 45 ಎಸೆತಗಳನ್ನು ಎದುರಿಸಿದ ಉತ್ತಪ್ಪ 5 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಸ್ಫೋಟಕ 75 ರನ್ಗಳಿಸಿದರು. ಆದರೆ 17.5ನೇ ಓವರ್ನಲ್ಲಿ ಔಟಾಗುವ ಮೂಲಕ ತಮ್ಮ ಹೋರಾಟವನ್ನು ಅಂತ್ಯಗೊಳಿಸಿ, ತಂಡವನ್ನು ಗೆಲವಿನ ದಡ ಸೇರಿಸುವಲ್ಲಿ ವಿಫಲರಾದರು. ಇದು ಪಂದ್ಯಕ್ಕೆ ಉತ್ತಮ ತಿರುವು ನೀಡಿತು.
ಇದ್ದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಆರಂಭಿಕ ಕುಸಿತದ ಹೊರತಾಗಿಯೂ ಪುಣೆಗೆ ಬೃಹತ್ ಮೊತ್ತ ದಾಖಲಿಸಿತು.
ತಂಡದ ಭರವಸೆಯ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್ (21), ವಿರಾಟ್ ಕೊಹ್ಲಿ (25) ರನ್ಗಳಿಸಿ ಬೇಗನೆ ನಿರ್ಗಮಿಸಿದರು. ನಂತರ ಸೌರಭ್ ತಿವಾರಿ (52), ಡಿವಿಲಿಯರ್ಸ್ (50) ಹೆನ್ರಿಕೇಸ್ (27) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಅಲ್ಲದೆ ದಿಂಡಾ ಪಂದ್ಯದ 20ನೇ ಓವರ್ ಮಾಡಿದ್ದು, ಆ ಓವರ್ನಲ್ಲಿ 26 ರನ್ ಗಳಿಸಿದ ಡಿವಿಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ಬೋರ್ಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 187/3 (20 ಓವರ್)
ಸೌರಬ್ ಸಿ ರಾಹುಲ್ ಬಿ ದಿಂಡಾ 52(45), ಗೇಯ್ಲ್ ಸಿ ಭುವನೇಶ್ವರ್ ಬಿ ಸುಮನ್ 21(21), ಕೊಹ್ಲಿ ಬಿ ದಿಂಡಾ 25(18), ಡಿವಿಲಿಯರ್ಸ್ ಅಜೇಯ 50(23), ಹೆನ್ರಿಕೇಸ್ ಅಜೇಯ 27(13), ಇತರೆ 12
ವಿಕೆಟ್ ಪತನ: 1-36, 2-99, 3-119
ಬೌಲಿಂಗ್: ಭುವನೇಶ್ವರ್ 3-0-20-0, ಮೆಂಡಿಸ್ 4-0-25-0, ಸುಮನ್ 2-0-15-1, ಮ್ಯಾಥ್ಯೂಸ್ 2-0-23-0, ರಾಹುಲ್ 4-0-36-0, ಯುವರಾಜ್ 1-0-15-0, ದಿಂಡಾ 4-0-52-2.
ಪುಣೆ ವಾರಿಯರ್ಸ್: 170/9 (20 ಓವರ್)
ರಾಬಿನ್ ಉತ್ತಪ್ಪ ಸಿ ಸಿಂಗ್ ಬಿ ಕಾರ್ತಿಕ್ 75 (45), ಫಿಂಚ್ ಬಿ ಹೆನ್ರಿಕೇಸ್ 15 (11), ಸುಮನ್ ರನೌಟ್ (ಮುರಳೀಧರನ್/ಅರುಣ್ ಕಾರ್ತಿಕ್) 11 (14), ಯುವರಾಜ್ ಸಿಂಗ್ ಸಿ ಡಿವಿಲಿಯರ್ಸ್ ಬಿ ವಿನಯ್ ಕುಮಾರ್ 16 (11), ಸ್ಮಿತ್ ಸಿ ಅರುಣ್ ಕಾರ್ತಿಕ್ ಬಿ ವಿನಯ್ ಕುಮಾರ್ 4 (4), ಏಂಜೆಲೊ ಮ್ಯಾಥ್ಯೂಸ್ 32 (19), ಅಭಿಷೇಕ್ ನಾಯರ್ 1 (3), ಭುವನೇಶ್ವರ್ ಕುಮಾರ್ ಸಿ ಕೊಹ್ಲಿ ಬಿ ಸಿಂಗ್ 2 (3), ಅಜಂತಾ ಮೆಂಡಿಸ್ ಎಲ್ಬಿಡಬ್ಲ್ಯೂ ಬಿ ಗೇಯ್ಲ್ 2 (4), ಅಶೋಕ್ ದಿಂಡಾ ಅಜೇಯ 6 (5), ರಾಹುಲ್ ಶರ್ಮಾ ಅಜೇಯ 0 (1). ಇತರೆ 6.
ವಿಕೆಟ್ ಪತನ: 1-20, 2-46, 3-77, 4-81, 5-144, 6-153, 8-159, 8-162, 9-165.
ಬೌಲಿಂಗ್: ಮುರಳಿ ಕಾರ್ತಿಕ್ 4-0-29-2, ಆರ್.ಪಿ. ಸಿಂಗ್ 4-0- 27-1, ಹೆನ್ರಿಕೆಸ್ 4-0-44-1, ವಿನಯ್ ಕುಮಾರ್ 4-0-31-3, ಮುರಳೀಧರನ್ 3-0-32-0, ಗೇಯ್ಲ್ 1-0-5-1.
ಡಿವಿಲಿಯರ್ಸ್ ದಭಾಂಗ್
ರನ್ 50
ಎಸೆತ 23
ಬೌಂಡರಿ 6
ಸಿಕ್ಸರ್ 2
ಐಪಿಎಲ್ ಅಂಕಪಟ್ಟಿ
ತಂಡ ಪಂದ್ಯ ಗೆಲವು ಸೋಲು ಅಂಕ ರನ್ರೇಟ್
ಸಿಎಸ್ಕೆ 11 9 2 18 0.737
ಆರ್ಸಿಬಿ 11 7 4 14 0.708
ರಾಜಸ್ಥಾನ್ 9 6 3 12 0.577
ಮುಂಬೈ 10 6 4 12 0.134
ಸನ್ರೈಸರ್ಸ್ 10 6 4 12 -0.102
ಪಂಜಾಬ್ 10 4 6 8 0.080
ಕೆಕೆಆರ್ 10 3 7 6 -0.104
ಡೆಲ್ಲಿ ಡೇರ್ಡೆವಿಲ್ 10 3 7 6 -0.599
ಪುಣೆ ವಾರಿಯರ್ಸ್ 11 2 9 4 -1.382
ಐಪಿಎಲ್ ಟಾಪರ್ಸ್
ಬ್ಯಾಟ್ಸ್ಮನ್ ಪಂದ್ಯ ರನ್ ಸರಾಸರಿ ಗರಿಷ್ಠ
ಕ್ರಿಸ್ಗೇಯ್ಲ್ 11 505 72.14 175
ಮೈಕಲ್ ಹಸ್ಸಿ 10 485 60.62 95
ವಿರಾಟ್ ಕೊಹ್ಲಿ 11 391 39.10 93
ರೋಹಿತ್ ಶರ್ಮಾ 10 375 53.57 79
ರೈನಾ 11 359 44.87 100
ಬೌಲರ್ ಪಂದ್ಯ ವಿಕೆಟ್ ಸರಾಸರಿ ಗರಿಷ್ಠ
ಡ್ವೇನ್ ಬ್ರಾವೊ 11 19 16.94 3/27
ವಿನಯ್ ಕುಮಾರ್ 11 18 18.88 3/18
ಜೇಮ್ಸ್ ಫಾಕ್ನರ್ 7 16 10.37 5/20
ಅಮಿತ್ ಮಿಶ್ರಾ 10 16 14.81 4/19
ನಾರಾಯಣ್ 10 15 15.33 4/13
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


