ದಿವಿಜ್- ಪುರವ ಜೋಡಿ ರನ್ನರ್ಸ್ ಅಪ್
ಜೋಹಾನ್ಸ್ಬರ್ಗ್: ಭಾರತದ ದಿವಿಜ್ ಶರಣ್ ಮತ್ತು ಪುರವ ರಾಜಾ ಜೋಡಿ ಜೋಹಾನ್ಸ್ಬರ್ಗ್ ಚಾಲೆಂಜರ್ ಎಟಿಪಿ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದೆ. ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ, ಭಾರ- ಅಮೆರಿಕ ಜೋಡಿಯಾದ ಪ್ರಕಾಶ್ ಅಮೃತ್ರಾಜ್ ಮತ್ತು ರಾಜೀವ್ ರಾಮ್ ಜೋಡಿ ವಿರುದ್ಧ 6-7 (1), 6-7 (1) ಸೆಟ್ಗಳಿಂದ ಸೋಲನುಭವಿಸಿತು. ಪ್ರಸಕ್ತ ಋತುವಿನಲ್ಲಿ ಮೂರನೇ ಫೈನಲ್ ಪಂದ್ಯವಾಡಿದ ದಿವಿಜ್ ಮತ್ತು ಪುರವ ಜೋಡಿ, ಪ್ರಶಸ್ತಿ ಗೆಲ್ಲಲು ಭಾರೀ ಸಾಹಸ ನಡೆಸಿತು. ಆದರೆ, ಅದೃಷ್ಟ ಭಾರತ ಮತ್ತು ಅಮೆರಿಕ ಜೋಡಿಯ ಪರವಾಗಿತ್ತು. ಮಾರ್ಚ್ ತಿಂಗಳಲ್ಲಿ ಕೀಟೋ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದುಕೊಂಡ ಭಾರತದ ಜೋಡಿ, ಕಳೆದ ತಿಂಗಳು ಲಿಯೋನ್ನಲ್ಲಿ ನಡೆದ ಮೆಕ್ಸಿಕೋ ಪಂದ್ಯಾವಳಿಯಲ್ಲೂ ರನ್ನರ್ಸ್ ಅಪ್ಗೆ ತೃಪ್ತಿಪಟ್ಟಿತ್ತು.ಪ್ರಕಾಶ್ ಮತ್ತು ರಾಜೀವ್ ರಾಮ್ ಜೋಡಿಗೆ ಡಬಲ್ಸ್ ವಿಭಾಗದಲ್ಲಿ ಇದು ಮೊದಲನೇ ಪ್ರಶಸ್ತಿಯಾಗಿದೆ. ರಾಮ್ ಕೆಲ ಸಮಯ ಭಾರತದ ರೋಹನ್ ಬೋಪಣ್ಣ ಅವರೊಂದಿಗೂ ಜತೆಯಾಗಿ ಡಬಲ್ಸ್ನಲ್ಲಿ ಆಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

