ಸನ್ ದಾಳಿಗೆ ಡೆವಿಲ್ಸ್ ಧೂಳೀಪಟ

ಹೈದರಾಬಾದ್: ತಿಸರಾ ಪೆರೇರಾ ಮತ್ತು ಡಾರೇನ್ ಸಾಮಿ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಡೆಲ್ಲಿ ಡೇರ್ಡೆವಿಲ್ಸ್ ಬ್ಯಾಟಿಂಗ್ ಪೆವಿಲಿಯನ್ ಪರೇಡ್ ನಡೆಸುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 81 ರನ್ಗಳ ಅಲ್ಪ ಮೊತ್ತದ ಸವಾಲೊಡ್ಡಿತು. ಪತ್ರಿಕೆ ಮುದ್ರಣಕ್ಕೆ ಹೋಗುವಾಗ ಸನ್ರೈಸರ್ಸ್ ಹೈದರಾಬಾದ್ ತಂಡದ ಇನಿಂಗ್ಸ್ ಆರಂಭವಾಗಿರಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಡೇರ್ಡೆವಿಲ್ಸ್ ತಂಡ, ನಿಗದಿತ ಓವರ್ಗಳಲ್ಲಿ 19.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 80 ರನ್ ಹಾಕಿತು.
ಆರಂಭಿಕರಾಗಿ ಅಂಗಣಕ್ಕಿಳಿದ ನಾಯಕ ಮಹೇಲ ಜಯವರ್ಧನೆ (11) ಮತ್ತು ವೀರೇಂದ್ರ ಸೆಹ್ವಾಗ್ (8) ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ವಿಫಲವಾದರು. ಈ ಇಬ್ಬರು ದಾಂಡಿಗರೂ ಹೈದರಾಬಾದ್ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ಸಂಪೂರ್ಣವಾಗಿ ವಿಫಲವಾದರು.
ರನ್ಗಾಗಿ ತಡಬಡಿಸುತ್ತಿದ್ದ ಜಯವರ್ಧನೆ 4ನೇ ಓವರ್ನಲ್ಲಿ ಇಶಾಂತ್ ಶರ್ಮಾ ಎಸೆದ ಎಸೆತದಲ್ಲಿ ಎಲ್ಬಿಗೆ ಬಲಿಯಾದರೆ, ಇನ್ನು 8ನೇ ಓವರ್ವರೆಗೂ ಕ್ರೀಸ್ನಲ್ಲಿ ತಾಳ್ಮೆಯಿಂದ ನಿಂತಿದ್ದ ಸೆಹ್ವಾಗ್, ಡಾರೇನ್ ಸಾಮಿ ಬೌಲಿಂಗ್ನಲ್ಲಿ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ಗೆ ಹೆಜ್ಜೆ ಹಾಕಿದರು.
ಕೊಂಚ ನಾಜೂಕಿನ ಬ್ಯಾಟಿಂಗ್ನ ಪ್ರದರ್ಶನಕ್ಕೆ ಮುಂದಾಗಿದ್ದ ಯುವ ಆಟಗಾರ ಉನ್ಮುಕ್ತ್ ಚಾಂದ್ (17) ಅಗ್ರ ಕ್ರಮಾಂಕದಲ್ಲಿ ತಂಡಕ್ಕೆ ಕೊಂಚ ಆಶ್ರಯವಾಗುತ್ತಿದ್ದಂತೆ, 11ನೇ ಓವರ್ನಲ್ಲಿ ಡೇಯ್ಲ್ ಸ್ಟೇನ್ ಎಸೆತದಲ್ಲಿ ಎಲ್ಬಿಗೆ ಬಲಿಯಾದರು.
ನಂತರ ಬಂದ ಡೇವಿಡ್ ವಾರ್ನರ್ (8), ಜೀವನ್ ಮೆಂಡೀಸ್ (11), ಕೇದಾರ ಜಾದವ್ (3), ಇರ್ಫಾನ್ ಪಠಾಣ್ (13), ಜಾನ್ ಬೋಥಾ (1), ಶಹಬಾಜ್ ನದೀಂ (0), ಆಶಿಶ್ ನೆಹ್ರಾ (0) ಹಾಗೂ ಉಮೇಶ್ ಯಾದವ್ (ಅಜೇಯ 2) ರೈಸರ್ಸ್ ಬೌಲಿಂಗ್ ದಾಳಿಗೆ ಬೆದರಿದ್ದು ತಂಡ 100 ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ.
ಸನ್ರೈಸರ್ಸ್ ಪರ ಬಲಿಷ್ಠ ಬೌಲಿಂಗ್ ದಾಳಿ ಪ್ರದರ್ಶಿಸಿದ ಡೇಯ್ಲ್ ಸ್ಟೇಯ್ನ್ ಮತ್ತು ಡಾರೇನ್ ಸಾಮಿ ಹಾಗೂ ತಿಸರಾ ಪೆರೇರಾ ತಲಾ 2 ವಿಕೆಟ್ ಕಬಳಿಸಿದರೆ, ಇಶಾಂತ್ ಶರ್ಮಾ, ಕರಣ್ ಶರ್ಮಾ ಹಾಗೂ ಅಮಿತ್ ಮಿಶ್ರಾ ತಲಾ 1 ವಿಕೆಟ್ ಪಡೆದರು.
ಸ್ಕೋರ್ ಬೋರ್ಡ್ (ಅಪೂರ್ಣ)
ಡೆಲ್ಲಿ ಡೇರ್ಡೆವಿಲ್ಸ್ 80(19.1 ಓವರ್)
ಜಯವರ್ಧನೆ ಎಲಬಿಡಬ್ಲ್ಯೂ ಬಿ ಇಶಾಂತ್ 11(12), ಸೆಹ್ವಾಗ್ ಬಿ ಸ್ಯಾಮಿ 8(17), ಚಾಂದ್ ಬಿ ಸ್ಟೇಯ್ನ್ 17(24), ವಾರ್ನರ್ ಸ್ಟಂಪ್ ಪಟೇಲ್ ಬಿ ಮಿಶ್ರಾ 8(15), ಜೀವನ್ ಮೆಂಡಿಸ್ ಸಿ ಇಶಾಂತ್ ಬಿ ಸ್ಯಾಮಿ 11(9), ಜಾಧವ್ ಸಿ ಮತ್ತು ಬಿ ಕರಣ್ 3(4), ಇರ್ಫಾನ್ ಬಿ ಸ್ಟೇಯ್ನ್ 13(19), ಬೋತಾ ಸಿ ಪಟೇಲ್ ಬಿ ಪೆರೇರಾ 1(7), ನದೀಂ ರನೌಟ್ (ವಿಹಾರಿ/ಸಾಮಿ) 0(2), ನೆಹ್ರಾ ಬಿ ಪೆರೇರಾ 0(1), ಯಾದವ್ ಅಜೇಯ 2(5), ಇತರೆ 6
ವಿಕೆಟ್ ಪತನ: 1-13, 2-32, 3-50, 4-52, 5-57, 6-70, 7-73, 8-77, 9-78, 10-80
ಬೌಲಿಂಗ್: ಸ್ಟೇಯ್ನ್ 4-0-21-2, ಶರ್ಮಾ 3-1-11-1, ಪೆರೇರಾ 3.1-0-11-2, ಸಾಮಿ 3-0-10-2, ಕರಣ್ 2-0-9-1, ಮಿಶ್ರಾ 4-0-16-1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


