ಕ್ರೀಡೆ

ಕಿರಿಯರ ವೇಟ್‌ಲಿಫ್ಟಿಂಗ್: ಮೀರಾಗೆ ಮೂರು ಕಂಚು

ಕಿರಿಯರ ವೇಟ್‌ಲಿಫ್ಟಿಂಗ್: ಮೀರಾಗೆ ಮೂರು ಕಂಚು
Published On :

ನವದೆಹಲಿ: ಕಿರಿಯರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸಾಯಿಖಾಮ್ ಮೀರಾಬಾಯಿ ಚಾನು ಅವರು ಮಹಿಳೆಯರ 48ಕೆಜಿ ವಿಭಾಗದಲ್ಲಿ ಮೂರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಚಾಂಪಿಯನ್‌ಷಿಪ್ ಲೀಮಾದ ಪೇರುನಲ್ಲಿ ಭಾನುವಾರ ಆರಂಭವಾಗಿದೆ. ಮೀರಾಬಾಯಿ ಸ್ನ್ಯಾಚ್ (72ಕೆಜಿ) ಹಾಗೂ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ (93ಕೆಜಿ) ಮೂರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಮೂರು ವಿಭಾಗಗಳಲ್ಲಿ ಮೀರಾ ಒಟ್ಟು 165ಕೆಜಿ ಭಾರ ಎತ್ತಿದರು. ಈ ಮೂರು ವಿಭಾಗಗಲ್ಲಿ ಚೀನಾದ ಗುವಾನ ಚುನಾಯಿನ್ ಚಿನ್ನದ ಪದಕ ಬಾಚಿಕೊಂಡರು. ಗುವಾನಗೆ ಇದು ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿತ್ತು. ಬಾಲಕರ 56ಕೆಜಿ ವಿಭಾಗದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟ ಭಾರತದ ಅಪುರ್ಬಾ ಚೆಟಿಯಾ ಪದಕ ಗೆಲ್ಲುವುದರಿಂದ ವಂಚಿತರಾಗಿದ್ದಾರೆ. ಈ ವಿಭಾಗದ ಕ್ಲೀನ್ ಮತ್ತು ಜರ್ಕ್‌ನಲ್ಲಿ ಚೀನಾದ ವೀ ಕ್ಸಿಮೆಂಗ್ ಚಿನ್ನದ ಪದಕ ಗೆದ್ದುಕೊಂಡರೆ, ಸ್ನಾಚ್ ವಿಭಾಗದಲ್ಲಿ ಟರ್ಕಿಯ ಸಹಿನಾ ಮುಮ್ಮರ್ ಚಿನ್ನ ಗೆದ್ದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.