ಕ್ರೀಡೆ

ವುಡ್ಹಿಲ್ ನೇಮಕಕ್ಕೆ ಅಸಮಾಧಾನ

Published On :

ಕರಾಚಿ: ಚಾಂಪಿಯನ್ಸ್ ಟ್ರೋಫಿಗಾಗಿ ತೆರಳಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಟ್ರೆಡ್ ವುಡ್ಹಿಲ್ ಅವರನ್ನು ನೇಮಿಸಿರುವ ಕುರಿತಾಗಿ ಮಾಜಿ ಕ್ರಿಕೆಟರ್ಗಳಾದ ಜಾವೇದ್ ಮಿಯಾಂದಾದ್ ಹಾಗೂ ವಾಸಿಂ ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸಹಾಯಕ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಟ್ರೆಡ್ ವುಡ್ಹಿಲ್ ಅವರನ್ನು ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೋಚ್ ಆಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇತ್ತೀಚೆಗಷ್ಟೇ ನೇಮಿಸಿತ್ತು. ಆದರೆ, ಒಂದಾದರೂ ಪ್ರಥಮ ದರ್ಜೆ ಕ್ರಿಕೆಟ್ ಆಡಿರದ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದ್ದಾರೆಂದು ಕೆಲ ಕ್ರಿಕೆಟಿಗರು ಮೂಗು ಮುರಿದಿದ್ದಾರೆ.
ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಆಟಗಾರ ಹಾಗೂ ಪಿಸಿಬಿಯ ಸಾಮಾನ್ಯ ಕ್ರಿಕೆಟ್ ಸಮಿತಿಯ ಮಹಾನಿರ್ದೇಶಕರೂ ಆಗಿರುವ ಜಾವೇದ್ ಮಿಯಾಂದಾದ್, 'ವುಡ್ಹಿಲ್ ನೇಮಕ ಪ್ರಕ್ರಿಯೆಯಲ್ಲಿ ನಾನು ಭಾಗಿಯಾಗಿಲ್ಲ. ಆದರೆ, ಹಿಲ್ ಅವರ ಆಯ್ಕೆ ಸಮಂಜಸವಾದುದಲ್ಲ' ಎಂದಿದ್ದಾರೆ.  ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಕ್ರಂ, 'ನಮ್ಮಲ್ಲೇ (ಪಾಕಿಸ್ತಾನ) ಹಲವಾರು ಮಾಜಿ ಕ್ರಿಕೆಟಿಗರಿದ್ದಾರೆ. ಅವರು ಪಾಕಿಸ್ತಾನ ತಂಡದ ಕೋಚ್ಗಳಾಗಿ ವುಡ್ಹಿಲ್ಗಿಂತಲೂ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲರಾಗಿದ್ದಾರೆ. ಆದರೆ, ಅವರನ್ನು ಕಡೆಗಣಿಸಿ ವಿದೇಶಿಗ ಹಾಗೂ ಅದರಲ್ಲೂ ಅಷ್ಟಾಗಿ ಅನುಭವವಿಲ್ಲದ ವ್ಯಕ್ತಿಯನ್ನು ನೇಮಿಸಿರುವುದು ಸರಿಯಲ್ಲ' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.