2ನೇ ಸುತ್ತಿನಲ್ಲಿ ಭಾರತಕ್ಕೆ ಮಿಶ್ರಫಲ
ನವದೆಹಲಿ: 19ನೇ ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ದ್ವಿತೀಯ ಸುತ್ತಿಗೆ ಕಾಲಿಟ್ಟಿದ್ದ ಭಾರತೀಯ ಮಹಿಳೆಯರ ತಂಡ, ಸಿಂಗಾಪುರ್ ವಿರುದ್ಧ 1-3 ಅಂತರದಲ್ಲಿ ಸೋಲು ಕಂಡಿದೆ. ಸೋಮವಾರ ನಡೆದ ದ್ವಿತೀಯ ಸುತ್ತಿನ ಪಂದ್ಯಗಳಲ್ಲಿ ಮೌಮ ದಾಸ್ ಹೊರತುಪಡಿಸಿದಂತೆ, ಉಳಿದೆಲ್ಲಾ ಆಟಗಾರ್ತಿಯರೂ ಸೋಲು ಕಂಡು ಸಿಂಗಾಪುರ್ ಆಟಗಾರ್ತಿಯರಿಗೆ ಶರಣಾದರು.
ಸೋಮವಾರ ನಡೆದ ದ್ವಿತೀಯ ಸುತ್ತಿನ ಮೊದಲ ಪಂದ್ಯಗಳಲ್ಲಿ ಸ್ಕಾಟ್ಲೆಂಡ್ ವಿರುದ್ಧ 3-0 ಅಂತರದಲ್ಲಿ ಜಯ ಸಾಧಿಸಿದ್ದ ಭಾರತ, ನಂತರ ಸಿಂಗಾಪುರ್ ವಿರುದ್ಧ ಶರಣಾಗಿದೆ. ಇನ್ನೂ, ಮತ್ತೊಂದು ಹಂತದ ಪಂದ್ಯಗಳು ಬಾಕಿಯಿದ್ದು, ಆ ಪಂದ್ಯಗಳಲ್ಲಿ ವೇಲ್ಸ್ ತಂಡದ ಆಟಗಾರ್ತಿಯರನ್ನು ಭಾರತದ ಆಟಗಾರ್ತಿಯರು ಎದುರಿಸಲಿದ್ದಾರೆ.
ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಭಾರತೀಯ ಮಹಿಳಾ ಆಟಗಾರ್ತಿಯರಿಗೆ ಸಿಂಗಾಪುರ್ ವಿರುದ್ಧದ ಪಂದ್ಯಗಳು ಹೆಚ್ಚು ಕ್ಲಿಷ್ಟಕರವಾದ ಪಂದ್ಯಗಳೆಂದೇ ಪರಿಗಣಿಸಲ್ಪಟ್ಟಿತ್ತು. ಆದರೆ, ಮೊದಲ ಪಂದ್ಯದಲ್ಲಿ ಭಾರತದ ಮೌಮ ದಾಸ್ ಅವರು ಸಿಂಗಾಪುರ್ನ ಮೆಂಗ್ಯು ಫು ಅವರ ವಿರುದ್ಧ 11-7 ಅಂತರದ ಜಯ ಸಾಧಿಸುವ ಮೂಲಕ ಆಶಾಕಿರಣ ತಂದರು.
ಆದರೆ, ಮುಂದಿನ ಪಂದ್ಯದಲ್ಲೇ ಅವರು 11-5, 11-6 ಅಂತರದಲ್ಲಿ ಸೋಲು ಕಂಡರು.
ಇನ್ನು, ಮೂರನೇ ಪಂದ್ಯದಲ್ಲಿ ಮಧುರಿಕಾ ಪಾಟ್ಕರ್ ಅವರು, ಫೆಂಗ್ ಟಿಯಾನ್ವೈ ಅವರ ವಿರುದ್ಧ 2-11, 13-11, 2-11, 5-11 ಅಂತರದಲ್ಲಿ ಸೋಲುವ ಮೂಲಕ ಭಾರತಕ್ಕೆ ಎರಡನೇ ಹಿನ್ನಡೆ ತಂದರು.
ಮೂರನೇ ಪಂದ್ಯದಲ್ಲಿ ನೇಹಾ ಅಗರ್ವಾಲ್ ಅವರು ಯಿಹಾನ್ ಜೌ ಅವರ ವಿರುದ್ಧ ಸೆಣೆಸಿ, 11-6, 12-10, 7-11, 11-6 ಅಂತರದ ಜಯ ಸಾಧಿಸಿದರಲ್ಲದೇ, ಸಿಂಗಾಪುರ್ ವಿರುದ್ಧ ಭಾರತ ಸಮಬಲ ಸಾಧಿಸಲು ನೆರವಾದರು.
ಆದರೆ, ರಿವರ್ಸ್ ಮ್ಯಾಚ್ನಲ್ಲಿ ಸೆಣೆಸಿದ ಮೌಮ ಅವರು ಫೆಂಗ್ ಅವರ ವಿರುದ್ಧ 5-11, 11-8, 5-11 ಅಂತರದಲ್ಲಿ ಸೋತರು.
ಮುಂದಿನ ಹಂತಕ್ಕೆ ಸಾಗಬೇಕಾದರೆ, ಭಾರತ ತಂಡ, ದುರ್ಬಲ ತಂಡವಾದ ವೇಲ್ಸ್ ವಿರುದ್ಧ ಜಯಗಳಿಸಬೇಕಿದೆ.
ಸೆಮೀಸ್ಗೆ ಪುರುಷರ ತಂಡ
ಪುರುಷರ ವಿಭಾಗದಲ್ಲಿ ದ್ವಿತೀಯ ಸುತ್ತಿಗೆ ಕಾಲಿಟ್ಟಿದ್ದ ಪುರುಷರ ತಂಡ, ಉತ್ತರ ಐರ್ಲೆಂಡ್ ವಿರುದ್ಧ ಜಯಗಳಿಸಿ, ಸೆಮಿಫೈನಲ್ಗೆ ಕಾಲಿಟ್ಟಿದೆ. ಭಾರತದ ಉದಯೋನ್ಮುಖ ಆಟಗಾರರಾದ ಅಜಂತಾ ಶರತ್ ಕಮಲ್, ಸೌಮ್ಯಜಿತ್ ಘೋಷ್ ಹಾಗೂ ಸಾನಿಲ್ ಶೆಟ್ಟಿ ಅವರು ತಮ್ಮ ಪಂದ್ಯಗಳಲ್ಲಿ ಜಯ ಸಾಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

