ಫೈನಲ್ಗೆ ಪುರುಷರ ಪಡೆ
ನವದಹೆಲಿ: ಭಾರತ ಪುರುಷರ ಟೇಬಲ್ ಟೆನಿಸ್ ತಂಡ 19ನೇ ಕಾಮನ್ವೆಲ್ತ್ ಚಾಂಪಿಯನ್ಷಿಪ್ನ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಪುರುಷರ ತಂಡ ಇಂಗ್ಲೆಂಡ್ ವಿರುದ್ಧ 3-2 ಪಾಯಿಂಟ್ಗಳ ಅಂತರದಿಂದ ಜಯ ಸಾಧಿಸಿದರೆ, ಮಹಿಳೆಯರ ತಂಡ ಇಂಗ್ಲೆಂಡ್ ವಿರುದ್ಧ 2-3 ಅಂಕಗಳ ಅಂತರದಿಂದ ಸೋಲನುಭವಿಸುವ ಮೂಲಕ ಕಂಚಿಗೆ ತೃಪ್ತಿಪಟ್ಟಿದೆ.
ಪುರುಷರ ತಂಡ ಬುಧವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ಸಿಂಗಾಪುರವನ್ನು ಎದುರಿಸಲಿದೆ. ಸಿಂಗಾಪುರ, ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿದೆ.
ಇಂಗ್ಲೆಂಡ್ಗಿಂತ ಅಗ್ರ ಶ್ರೇಯಾಂಕ ಪಡೆದಿದ್ದ ಆತಿಥೇಯ ಭಾರತ ತಂಡದ ಅಚಂತಾ ಶರತ್ ಕಮಲ್, ಮೊದಲ ಪಂದ್ಯದಲ್ಲಿ 545ನೇ ರ್ಯಾಂಕಿಂಗ್ ಆಟಗಾರ ಸ್ಯಮೂಯಲ್ ವಾಕರ್ ವಿರುದ್ಧ 12-10, 4-11, 12-10, 11-9 ಅಂತರದಿಂದ ಸೋಲನುಭವಿಸಿದರು. ಹೀಗಾಗಿ ಭಾರತ ಅರಂಭದಲ್ಲಿ 1-0 ಅಂತರದಿಂದ ಹಿನ್ನಡೆ ಅನುಭವಿಸಿತ್ತು.
ಆದರೆ, ನಂತರದ ಪಂದ್ಯದಲ್ಲಿ ಸೌಮ್ಯಜೀತ್ ಘೋಷ್ ಇಂಗ್ಲೆಂಡ್ನ ಪ್ರಮುಖ ಆಟಗಾರ ಆ್ಯಂಡ್ರ್ಯೂ ಬಗ್ಲೇ ಅವರನ್ನು ನೇರ ಸೆಟ್ಗಳಿಂದ ಸೋಲಿಸುವ ಮೂಲಕ ಭಾರತ ಸಮಬಲ ಸಾಧಿಸುವಂತೆ ನೋಡಿಕೊಂಡರು. ಐದು ಬಾರಿ ಕಾಮನ್ವೆಲ್ತ್ ಪದಕ ವಿಜೇತ ಆ್ಯಂಡ್ರ್ಯೂ ಅವರನ್ನು ಸೋಲಿಸಿದ ಘೋಷ್ ಅಚ್ಚರಿ ಮೂಡಿಸಿದರು.
ಇನ್ನು ನಿರ್ಣಾಯಕ ಮತ್ತು ರಿವರ್ಸ್ ಪಂದ್ಯದಲ್ಲಿ ವಾಕರ್ ವಿರುದ್ಧ ಸೆಣಿಸಿದ ಸೌಮ್ಯಜೀತ್ ಭಾರತ ಫೈನಲ್ ಪ್ರವೇಶಿಸುವಂತೆ ನೋಡಿಕೊಂಡರು. ರಿವರ್ಸ್ ಪಂದ್ಯದಲ್ಲಿ ಸೌಮ್ಯಜೀತ್ ಬಲಿಷ್ಠ ಹೋರಾಟ ನೀಡುವ ಮೂಲಕ ವಾಕರ್ ಅವರನ್ನು 11-7, 12-10, 11-6 ಸೆಟ್ಗಳ ಅಂತರದಿಂದ ಸೋಲಿಸಿದರು.
'ಶರತ್ ಮೊದಲ ಪಂದ್ಯದಲ್ಲಿ ಸೋಲನುಭವಿಸಿದಾಗ ನಾನು ಕೊಂಚ ನಿರಾಸೆಗೊಳಗಾಗಿದ್ದೆ. ಕಳೆದ ವರ್ಷ ವಿಶ್ವ ತಂಡ ಚಾಂಪಿಯನ್ಷಿಪ್ನಲ್ಲಿ ನಾನು ಆಂಡ್ರೂ ಅವರನ್ನು ಸೋಲಿಸಿದ್ದೆ. ಹೀಗಾಗಿ ಈ ಪಂದ್ಯದಲ್ಲಿ ಆತನನ್ನು ಸೋಲಿಸುವ ಬಗ್ಗೆ ನಾನು ವಿಶ್ವಾಸ ಹೊಂದಿದ್ದೆ. ಆ ವಿಶ್ವಾಸವೇ ನನಗೆ ಜಯ ತಂದುಕೊಟ್ಟಿತು' ಎಂದು ಪಂದ್ಯದ ನಂತರ ಸೌಮ್ಯಜೀತ್ ಘೋಷ್ ಹೇಳಿದರು.
ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರ ತಂಡ ಸೋಲನುಭವಿಸಿದರೂ, ದಿಟ್ಟ ಹೋರಾಟ ನೀಡಿತ್ತು. ಮೊದಲ ಪಂದ್ಯದಲ್ಲಿ ನೇಹಾ ಅಗರ್ವಾಲ್ ಇಂಗ್ಲೆಂಡ್ನ ಹನ್ನಾಹ ಹಿಕ್ಸ್ ವಿರುದ್ಧ 11-7,11-9 ನೇರ ಸೆಟ್ಗಳಿಂದ ಸೋಲನುಭವಿಸಿದರು.
ಆದರೆ, ನಂತರದ ಪಂದ್ಯದಲ್ಲಿ ಭಾರತದ ಮೌಮಾ ಇಂಗ್ಲೆಂಡ್ನ ಪಾರ್ಕರ್ ವಿರುದ್ಧ 11-4, 11-6, 11-3 ಸೆಟ್ಗಳಿಂದ ಜಯ ಸಾಧಿಸಿದರು.
ನಿರ್ಣಾಯಕ ಪಂದ್ಯದಲ್ಲಿ ಭಾರತದ ಮಧುರಿಕಾ ಇಂಗ್ಲೆಂಡ್ನ ಸಿಬ್ಲೇ ವಿರುದ್ಧ ಸೋಲನುಭವಿಸಿದರು. ಇದು ಭಾರತ ತಂಡ ಫೈನಲ್ ಪ್ರವೇಶಿಸುವ ಕನಸನ್ನು ಭಗ್ನಗೊಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

