ಕ್ರೀಡೆ

ಮುಂಬೈಗೆ ದೊಡ್ಡ ಗೆಲವು

Published On :

ಮುಂಬೈ: ಕರಾರುವಾಕ್ ಬೌಲಿಂಗ್ ದಾಳಿಯ ನೆರವಿನಿಂದಾಗಿ ಆತಿಥೇಯ ಮುಂಬೈ ಇಂಡಿಯನ್ಸ್ ತಂಡ, ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ 65 ರನ್‌ಗಳ ದೊಡ್ಡ ಜಯ ಗಳಿಸಿತು.
ಟಾಸ್ ಗೆದ್ದಿದ್ದ ಮುಂಬೈ ಮೊದಲು ಬ್ಯಾಟ್ ಮಾಡಿ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತಾ, 18.2 ಓವರ್‌ಗಳಲ್ಲಿ 105 ರನ್ ಗಳಿಸಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಮೊದಲು ಬ್ಯಾಟಿಂಗ್‌ಗೆ ಇಳಿದಿದ್ದ ಮುಂಬೈ ಪರವಾಗಿ, ಆರಂಭಿಕರಾದ ಡ್ವೈನ್ ಸ್ಮಿತ್ ಹಾಗೂ ಸಚಿನ್ ಇಬ್ಬರೂ ಮೊದಲ ವಿಕೆಟ್‌ಗೆ 93 ರನ್‌ಗಳ ಜೊತೆಯಾಟವಾಡಿದರು. ಭರ್ಜರಿ ಹೊಡೆತಗಳಿಗೆ ಕೈ ಹಾಕಿದ ಸಚಿನ್, ಅಭಿಮಾನಿಗಳಲ್ಲಿ ಮಿಂಚು ಹರಿಸಿದರು. ಕೇವಲ 28 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 48 ರನ್ ಬಾರಿಸಿದ ಸಚಿನ್, ಅರ್ಧ ಶತಕ ಗಳಿಸದೇ ಔಟಾಗಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ಅವರು ಪೆವಿಲಿಯನ್‌ಗೆ ನಡೆದ ಕೆಲವೇ ನಿಮಿಷಗಳಲ್ಲಿ 47 ರನ್ ಗಳಿಸಿ ಆಡುತ್ತಿದ್ದ ಡ್ವೈನ್ ಸ್ಮಿತ್ ಕೂಡ ನಿರ್ಗಮಿಸಿದರು. ಇವರಿಬ್ಬರ ನಂತರ ಇನಿಂಗ್ಸ್ ಜವಾಬ್ದಾರಿ ಹೊತ್ತ ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾ 3ನೇ ವಿಕೆಟ್‌ಗೆ ಕೇವಲ 31 ರನ್ ಸೇರಿಸಿ ಬೇರ್ಪಟ್ಟರು. ಆನಂತರ, ಪಟಪಟನೆ ಮೂರು ವಿಕೆಟ್‌ಗಳು ಉರುಳಿ ತಂಡ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಆರಂಭಿಕರ ಉತ್ತಮ ಜೊತೆಯಾಟ ಹಾಗೂ ದಿನೇಶ್ ಕಾರ್ತಿಕ್ ಸಿಡಿಸಿದ್ದ 34 ರನ್ (18 ಎಸೆತ) ನೆರವಿನಿಂದ, ತಂಡ 170 ರನ್ ಗಳಿಸಿತು.
ಮುಂಬೈ ನೀಡಿದ್ದ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತಾ, ಆರಂಭದಿಂದಲೇ ಮುಗ್ಗರಿಸುತ್ತಾ ಸಾಗಿತು. ಕೇವಲ 1 ರನ್ ಮೊತ್ತಕ್ಕೆ ಆರಂಭಿಕ ಗಂಭೀರ್ ಅವರನ್ನು ಕಳೆದುಕೊಂಡ ಅದು, ನಿಗದಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಜಾಕ್ ಕಾಲಿಸ್ ಹಾಗೂ ದೇವಬ್ರತಾ ದಾಸ್ ಇಬ್ಬರೂ ತಂಡವನ್ನು ಗೆಲವಿನ ಹಾದಿಗೆ ತರಲು ಪ್ರಯತ್ನಿಸಿದರಾದರೂ, ಅದು ಸಾಧ್ಯವಾಗಲಿಲ್ಲ. ಅವರಿಬ್ಬರ ವಿಕೆಟ್‌ಗಳು ಉರುಳಿದ ಮೇಲೆ ತಂಡದ ಪರವಾಗಿ ಗಟ್ಟಿಯಾಗಿ ನಿಂತು ಯಾರೂ ಆಡಲಿಲ್ಲ. ಅಂತಿಮವಾಗಿ, ಕೋಲ್ಕತಾ 18.2 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟ್ ಆಯಿತು.
ಸಚಿನ್ ತೆಂಡೂಲ್ಕರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸ್ಕೋರ್ ಬೋರ್ಡ್


ಮುಂಬೈ ಇಂಡಿಯನ್ಸ್: 170/6 (20 ಓವರ್)
ಡ್ವೈನ್ ಸ್ಮಿತ್ ಸಿ ಮೆಕ್‌ಲಾರೆನ್ ಬಿ ಇಕ್ಬಾಲ್ 47 (53), ಸಚಿನ್ ತೆಂಡೂಲ್ಕರ್ ಬೌಲ್ಡ್ ಭಾಟಿಯಾ 48 (28), ದಿನೇಶ್ ಕಾರ್ತಿಕ್ ಅಜೇಯ 34 (18), ರೋಹಿತ್ ಶರ್ಮಾ  ಸಿ ಮಾರ್ಗನ್ ಬಿ ಮೆಕ್‌ಲಾರೆನ್ 16 (11), ಪೊಲ್ಲಾರ್ಡ್ ಸಿ ನಾರಾಯಣ್ ಬಿ ಮೆಕ್‌ಲಾರೆನ್ 4 (4), ಅಂಬಟಿ ರಾಯುಡು ರನೌಟ್ (ಬಾಲಾಜಿ/ಬಿಸ್ಲಾ) 0 (0), ಹರ್ಭಜನ್ ಸಿಂಗ್ ರನೌಟ್ (ಪಠಾಣ್) 0 (0), ಜಾನ್ಸನ್ ಅಜೇಯ 10 (6). ಇತರೆ 5.
ವಿಕೆಟ್ ಪತನ: 1-93, 2-99, 3-130, 4-134, 5-135, 6-144.
ಬೌಲಿಂಗ್: ಬಾಲಾಜಿ 3-1-7-0, ಮೆಕ್‌ಲಾರೆನ್ 4-0-60-2, ಸುನಿಲ್ ನಾರಾಯಣ್ 4-0-29-0, ಜಾಕ್ ಕಾಲಿಸ್ 3-0-21-0, ಇಕ್ಬಾಲ್ ಅಬ್ದುಲ್ಲಾ 4-0-30-1, ಭಾಟಿಯಾ 2-0-22-1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.