ಬೆಳ್ಳಿಗೆ ತೃಪ್ತಿಪಟ್ಟ ಭಾರತ

ನವದೆಹಲಿ: ಪ್ರಶಸ್ತಿ ಸುತ್ತಿನಲ್ಲಿ ಕಳಪೆ ಪ್ರದರ್ಶನ ನೀಡಿದ ಭಾರತ ಪುರುಷರ ತಂಡ 19ನೇ ಕಾಮನ್ವೆಲ್ತ್ ಟೇಬಲ್ ಟೆನಿಸ್ ಚಾಂಮಪಿಯನ್ಷಿಪ್ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ.
ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಭಾರತದ ಆಟಗಾರರು ಫೈನಲ್ ಪ್ರವೇಶಿಸುವರೆಗೂ ಪ್ರತಿಭಾನ್ವಿತ ಪ್ರದರ್ಶನ ನೀಡಿದ್ದರು. ಆದರೆ, ಅಂತಿಮ ಪಂದ್ಯದಲ್ಲಿ ಸಿಂಗಾಪುರ ವಿರುದ್ಧ 3-0 ಅಂತರದಿಂದ ಕೈಚೆಲ್ಲುವ ಮೂಲಕ ಪ್ರಶಸ್ತಿಯಿಂದ ವಂಚಿತರಾದರು.
ಶರತ್ ಕಮಲ್ ಹಾಗೂ ಸೌಮ್ಯಜೀತ್ ಘೋಷ್ ಸೋಲನುಭವಿಸಿದಾಗಲೇ ಭಾರತ ಪ್ರಶಸ್ತಿ ಕನಸು ಭಗ್ನಗೊಂಡಿತ್ತು. ನಂತರ ಅಂತಿಮ ಪಂದ್ಯದಲ್ಲಿ ಯುವ ಆಟಗಾರ ಸನಿಲ್ ಶೆಟ್ಟಿ ಸಹ ಸಿಂಗಾಪುರದ ಲಿಯಾಂಗ್ ಮಾ ವಿರುದ್ಧ ಸೋಲನುಭವಿಸಿದರು.
ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಅದ್ಭುತ ಜಯ ಸಾಧಿಸಿದ್ದ ಸೌಮ್ಯಜೀತ್ ಘೋಷ್, ಫೈನಲ್ ಪಂದ್ಯದಲ್ಲಿ ವಿಶ್ವದ ನಂ.26 ಆಟಗಾರ ಝಾನ್ ಜೈನ್ ವಿರುದ್ಧ 11-13, 8-11, 4-11 ಸೆಟ್ಗಳ ಅಂತರದಿಂದ ಪರಾಭವ ಹೊಂದಿದರು.
ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಅಗ್ರ ರ್ಯಾಂಕಿಂಗ್ ಆಟಗಾರ ಅಚಂತಾ ಶರತ್ ಕಮಲ್ ಸಿಂಗಾಪುರದ ಲೀ ಹೂ ವಿರುದ್ಧ 11-4, 11-4, 11-8 ಸೆಟ್ಗಳಿಂದ ಸೋಲನುಭವಿಸಿದರು.
ಇನ್ನು ಮಹತ್ವದ ಮೂರನೇ ಪಂದ್ಯದಲ್ಲಿ ಸನಿಲ್ ಶೆಟ್ಟಿ ಸಿಂಗಾಪುರದ ಮಾ ಲಿಯಾಂಗ್ ವಿರುದ್ಧ 8-11, 11-9, 11-8, 9-11, 7-11 ಸೆಟ್ಗಳ ಅಂತರದಿಂದ ಹಿನ್ನಡೆ ಅನುಭವಿಸಿದರು.
ಹೀಗಾಗಿ ಎಲ್ಲ ಪಂದ್ಯಗಳಲ್ಲೂ ಸೋತ ಭಾರತ ಸಿಂಗಾಪುರಕ್ಕೆ ಪ್ರಶಸ್ತಿಯನ್ನು ಬಿಟ್ಟುಕೊಟ್ಟಿತು. 'ಸಿಂಗಾಪುರ ತಂಡದಲ್ಲಿ ಚೀನಾ ಆಟಾಗರರೇ ತುಂಬಿದ್ದಾರೆ. ಇದು ಚೀನಾದ ಬಿ ತಂಡವಿದ್ದಂತೆ. ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿತಾದರೂ ಜಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ಭಾರತ ತಂಡದ ತರಬೇತುದಾರ ಕಮಲೇಶ್ ಮೆಹ್ತಾ ತಿಳಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ್ದ ಭಾರತದ ವನಿತೆಯರ ತಂಡ ಮಂಗಳವಾರ ಕಂಚಿಗೆ ತೃಪ್ತಿಪಟ್ಟಿತ್ತು. ಪುರುಷರ ತಂಡವಾದರೂ ಪ್ರಶಸ್ತಿ ಗೆಲ್ಲುತ್ತದೆಯೇ ಎಂಬ ಭರವಸೆಯನ್ನು ಅಭಿಮಾನಿಗಳು ಹೊಂದಿದ್ದರು. ಆದರೆ, ಅದೂ ಯಶಸ್ವಿಯಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


