ಕ್ರೀಡೆ

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ಚಿನ್ನ ಗೆದ್ದ ಪೂವಮ್ಮ

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ಚಿನ್ನ ಗೆದ್ದ ಪೂವಮ್ಮ
Published On :

ಚೊಂಬುರಿ: ಏಷ್ಯನ್ ಅಥ್ಲೆಟಿಕ್ಸ್‌ನ ಎರಡನೇ ಹಂತದಲ್ಲಿ ಉತ್ತಮ ನೀಡಿರುವ ಭಾರತೀಯ ಅಥ್ಲಿಟ್‌ಗಳು ತಮ್ಮ ಪದಕದ ಬೇಟೆಯನ್ನು ಮುಂದುವರಿಸಿದ್ದಾರೆ. ಮಹಿಳಾ ವಿಭಾಗದ 400 ಮಿ. ಓಟದಲ್ಲಿ ಎಂ.ಆರ್ ಪೂವಮ್ಮ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬುಧವಾರ ನಡೆದ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲಿಟ್‌ಗಳು ನಾಲ್ಕು ಚಿನ್ನ ಸೇರಿದಂತೆ ಒಟ್ಟು 10 ಪದಕಗಳನ್ನು ಪಡೆದುಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ಪೂವಮ್ಮ (400 ಮಿ.) ಚಿನ್ನದ ಪದಕ, ಕೃಷ್ಣ ಪೂನಿಯಾ (ಡಿಸ್ಕಸ್) ಬೆಳ್ಳಿ ಪದಕ ಹಾಗೂ ಅನು ಮರಿಯಮ ಜೋಸ್ (400 ಮಿ.) ಕಂಚಿನ ಪದಕ ಗಳಿಸಿದ್ದಾರೆ.  ಪುರುಷರ ವಿಭಾಗದಲ್ಲಿ ರಾಜೀವ್ ಅರೋಕಾಯ್ (400 ಮಿ.), ಜಿತಿನ್ ಥಾಮಸ್ (ಹೈ ಜಂಪ್) ಮತ್ತು ನಿತಿನ್ ರಾವತ್ (3000 ಮಿ.) ಚಿನ್ನದ ಪದಕ ಗೆದ್ದಿದ್ದಾರೆ. ಖೇತಾ ರಾಮ್ (5000 ಮಿ.) ಮತ್ತು ರಂಜಿತ್ ಮಹೇಶ್ವರಿ (ಟ್ರಿಪ್ಪಲ್ ಜಂಪ್) ಬೆಳ್ಳಿ ಪದಕ ಪಡೆದಿದ್ದಾರೆ. ಸಿದ್ಧನಾಥ್ (ಹರ್ಡಲ್ಸ್) ಮತ್ತು ಅರ್ಪಿಂದರ್ ಸಿಂಗ್ (ಟ್ರಿಪ್ಪಲ್ ಜಂಪ್) ಕಂಚಿನ ಪದಕ ಪಡೆದಿದ್ದಾರೆ.   ಭಾರತೀಯ ಅಥ್ಲಿಟ್‌ಗಳು ಮೇ 4 ರಂದು ನಡೆದಿದ್ದ ಮೊದಲ ಹಂತದಲ್ಲಿ 12 ಪದಕಗಳನ್ನು ಬಾಚಿಕೊಂಡಿದ್ದರು. ಕಳೆದ ಬಾರಿ ಪೂನಿಯಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರಾದರೂ ಈ ಬಾರಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.