ಕ್ರೀಡೆ

ಚೆನ್ನೈಗೆ ಸೂಪರ್ ಜಯ

Published On :

ಹೈದರಾಬಾದ್: ಸನ್‌ರೈಸರ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 77 ರನ್ ಗೆಲವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್, 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು.
ಚೆನ್ನೈ ಭರ್ಜರಿ ಮೊತ್ತ: ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭವನ್ನು ಪಡೆಯಿತು.
ಆರಂಭಿಕರಾದ ಮೈಕ್ ಹಸ್ಸಿ ಹಾಗೂ ಮುರಳಿ ವಿಜಯ್ ಮೊದಲ ವಿಕೆಟ್‌ಗೆ 45 ರನ್ ಸೇರಿಸಿದರೆ, ಆನಂತರ, ಎರಡನೇ ವಿಕೆಟ್‌ಗೆ ಹಸ್ಸಿ ಹಾಗೂ ಸುರೇಶ್ ರೈನಾ 133 ರನ್‌ಗಳ ಅದ್ಭುತ ಜೊತೆಯಾಟವಾಡಿದರು. ಇದು ತಂಡದ ಮೊತ್ತ 220 ರನ್‌ಗಳ ಗಡಿ ದಾಟಲು ನೆರವಾಯಿತು.
18ನೇ ಓವರ್‌ನಲ್ಲಿ ಹಸ್ಸಿ ಔಟಾದರೆ, ಅದೇ ಓವರ್‌ನಲ್ಲಿ ಹಸ್ಸಿ ನಂತರ ಬಂದಿದ್ದ  ಧೋನಿ ಕೂಡಾ ಔಟಾದರು. ಆನಂತರ, ರವೀಂದ್ರ ಜಡೇಜಾ ಅವರೊಂದಿಗೆ ಇನಿಂಗ್ಸ್ ಮುಗಿಸಿದ ರೈನಾ,  ಅಜೇಯರಾಗಿ ಉಳಿದು 52 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಸಹಿತ 99 ರನ್ ಗಳಿಸಿದರು.
ಡೌನ್ ಆದ ರೈಸರ್ಸ್: ಚೆನ್ನೈ ನೀಡಿದ್ದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಕ್ರೀಸ್‌ಗೆ ಇಳಿದ ಸನ್‌ರೈಸರ್ಸ್ ಆರಂಭದಿಂದಲೇ ಒತ್ತಡಕ್ಕೆ ಸಿಲುಕಿತ್ತು. ಆರಂಭಿಕ ಶಿಖರ್ ಧವನ್ ಸೇರಿದಂತೆ, ಸಂಗಕ್ಕಾರ, ಹನುಮ ವಿಹಾರಿ, ಡರೇನ್ ಸಾಮಿ ಒಂದಂಕಿ ರನ್ ಗಳಿಸಿ ಔಟಾದರು. ಆರಂಭಿಕ ಪಾರ್ಥಿವ್ ಪಟೇಲ್ ಕೊಂಚ ಬಿರುಸಾಗಿ ಬ್ಯಾಟ್ ಬೀಸಿದರೂ, ಅವರ ಆರ್ಭಟ 9ನೇ ಓವರ್‌ಗೆ ಕೊನೆಗೊಂಡಿತು. ಮಧ್ಯಮ ಕ್ರಮಾಂಕದ ಪೆರೇರಾ ಹಾಗೂ ಕರಣ್ ಶರ್ಮಾ 35 ರನ್ ಜೊತೆಯಾಟವಾಡಿದರು. ಈ ಜೋಡಿ ಬೇರ್ಪಟ್ಟ ನಂತರ, ಸ್ಟೇಯ್ನ್ ಜೊತೆ ಸೇರಿದ ಕರಣ್ 33 ರನ್‌ಗಳ ಜೊತೆಯಾಟವಾಡಿದರಾದರೂ, ಪಂದ್ಯವನ್ನು ಗೆಲ್ಲಲಾಗಲಿಲ್ಲ.
ರೈನಾ ದಾಖಲೆ:  ಈ ಪಂದ್ಯದಲ್ಲಿ ಅಜೇಯ 99 ರನ್ ಗಳಿಸಿದ ರೈನಾ ಈ ಬಾರಿಯ ಐಪಿಎಲ್‌ನಲ್ಲಿ 400 ರನ್ ಗಡಿ ದಾಟಿದರು. ಅಲ್ಲದೇ, ಆರೂ ಐಪಿಎಲ್ ಆವೃತ್ತಿಗಳಲ್ಲಿ 400 ರನ್ ಗಡಿ ದಾಟಿದ ಆಟಗಾರ ಎಂಬ ದಾಖಲೆಯನ್ನು ರೈನಾ ಬರೆದರು.

ಸ್ಕೋರ್ ಬೋರ್ಡ್

ಸಿಎಸ್‌ಕೆ: 223/3 (20 ಓವರ್)
ಮೈಕ್ ಹಸ್ಸಿ ಬೌಲ್ಡ್ ಬಿ ಪರೇರಾ 67 (42), ಮುರಳಿ ವಿಜಯ್ ಸಿ ಪಟೇಲ್ ಬಿ ಪರೇರಾ 29 (20), ಸುರೇಶ್ ರೈನಾ ಅಜೇಯ 99 (52), ಮಹೇಂದ್ರ ಸಿಂಗ್ ಧೋನಿ ಸಿ ಕರಣ್ ಶರ್ಮಾ ಬಿ ಪೆರೇರಾ 4 (3), ರವೀಂದ್ರ ಜಡೇಜಾ ಅಜೇಯ 14 (6). ಇತರೆ 10.
ವಿಕೆಟ್ ಪತನ: 1-45, 2-178, 3-183.
ಬೌಲಿಂಗ್: ಸ್ಟೇಯ್ನ್ 4-1-17-0, ಇಶಾಂತ್ ಶರ್ಮಾ 4-0-66-0, ಪೆರೇರಾ 4-0-45-3, ಕರಣ್ ಶರ್ಮಾ 2-0-19-0, ಅಮಿತ್ ಮಿಶ್ರಾ 4-0-41-0, ಡರೇನ್ ಸಾಮಿ 2-0-33-0.

ಸನ್‌ರೈಸರ್ಸ್ : 146/8 (20 ಓವರ್)
ಪಾರ್ಥೀವ್ ಪಟೇಲ್ ಸಿ ವಿಜಯ್ ಬಿ ಶರ್ಮಾ 44 (30), ಶಿಖರ್ ಧವನ್ ರನೌಟ್ (ಧೋನಿ) 3 (3), ಸಂಗಕ್ಕಾರ ಸಿ ಮೋರಿಸ್ ಬಿ ಅಶ್ವಿನ್ 3 (9), ಹನುಮ ವಿಹಾರಿ ಸಿ ವಿಜಯ್ ಬಿ ರೈನಾ 3 (8), ಡರೇನ್ ಸಾಮಿ ಸಿ ಮೋರಿಸ್ ಬಿ ಶರ್ಮಾ 7 (3), ಪೆರೇರಾ ಸಿ ಬದ್ರಿನಾಥ್ ಬಿ ಬ್ರಾವೊ 23 (13), ಕರಣ್ ಶರ್ಮಾ ಅಜೇಯ 39 (33), ಅಮಿತ್ ಮಿಶ್ರಾ ರನೌಟ್ (ಜಡೇಜಾ) 6 (8), ಡೇಲ್ ಸ್ಟೇಯ್ನ್ ಸಿ ಹೋಲ್ಡರ್ ಬಿ ಮೋರಿಸ್ 14 (13), ಇಶಾಂತ್ ಶರ್ಮಾ ಅಜೇಯ 0 (0). ಇತರೆ 4.
ವಿಕೆಟ್ ಪತನ: 1-11, 2-46, 3-55, 4-62, 5-64, 6-99, 7-110, 8-143.
ಬೌಲಿಂಗ್: ಮೋಹಿತ್ ಶರ್ಮಾ 4-0-28-2, ಹೋಲ್ಡರ್ 3-0-28-0, ಅಶ್ವಿನ್ 4-0-23-1, ಸುರೇಶ್ ರೈನಾ 1-0-4-9, ಮೋರಿಸ್ 2-0-24-1, ಬ್ರಾವೊ 4-0-25-1, ರವೀಂದ್ರ ಜಡೇಜಾ 2-0-14-0.       

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.