ಕ್ರೀಡೆ

ಸನ್‌ಗೆ ಸವಾಲಿನ ಮೊತ್ತ

Published On :

ಹೈದರಾಬಾದ್: ಸುರೇಶ್ ರೈನಾ (ಅಜೇಯ 99) ಮತ್ತು ಮೈಕಲ್ ಹಸ್ಸಿ (67) ಅವರ ಆಕರ್ಷಕ ಅರ್ಧ ಶತಕದ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 224 ರನ್‌ಗಳ ಬೃಹತ್ ಮೊತ್ತದ ಸವಾಲೊಡ್ಡಿದೆ.
ಪತ್ರಿಕೆ ಮುದ್ರಣಕ್ಕೆ ಹೋಗುವಾಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಆರಂಭವಾಗಿರಲಿಲ್ಲ.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ವಿಕೆಟ್ ಕಳೆದುಕೊಂಡು 223 ರನ್ ಕಲೆ ಹಾಕಿತು.
ಆರಂಭದಲ್ಲಿ ಅಬ್ಬರಿಸಿದ ಮುರಳಿ ವಿಜಯ್ (29) ಸ್ಫೋಟಕ ಹೊಡೆತಕ್ಕೆ ಮುಂದಾಗಿ ಪೆರೇರಾ ಬೌಲಿಂಗ್‌ನಲ್ಲಿ ಪಾರ್ಥೀವ್ ಪಟೇಲ್‌ಗೆ ಕ್ಯಾಚ್ ನೀಡಿ ಹೊರನಡೆದರು.
ಪಟೇಲ್ ನಂತರ ಬಂದ ಸುರೇಶ್ ರೈನಾ ಮೈಕಲ್ ಹಸ್ಸಿಗೆ ತಕ್ಕ ಸಾಥ್ ನೀಡುವ ಮೂಲಕ ಇಬ್ಬರ ಮುರಿಯದ ಜತೆಯಾಟದಲ್ಲಿ 2ನೇ ವಿಕೆಟ್‌ಗೆ 133 ರನ್ ಸೇರಿಸಿದರು. ಇದು ತಂಡದ ಮೊತ್ತ 220 ರನ್‌ಗಳ ಗಡಿ ದಾಟಲು ನೆರವಾಯಿತು.
42 ಎಸೆತಗಳನ್ನು ಎದುರಿಸಿದ ಮೈಕಲ್ ಹಸ್ಸಿ ಮೊತ್ತದಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. ಇನ್ನು 52 ಎಸೆತಗಳನ್ನು ಎದುರಿಸಿದ ರೈನಾ ಮೊತ್ತದಲ್ಲಿ 3 ಸಿಕ್ಸರ್ ಮತ್ತು 11 ಬೌಂಡರಿಗಳು ಸೇರಿದ್ದವು. ಕೂದಲೆಳೆಯಲ್ಲಿ ರೈನಾ ಶತಕದಿಂದ ವಂಚಿತರಾದರು. ಈ ಆವೃತ್ತಿಯಲ್ಲಿ 400 ರನ್ ಪೂರೈಸಿದ ಸುರೇಶ್ ರೈನಾ ಆರೂ ಐಪಿಎಲ್ ಆವೃತ್ತಿಗಳಲ್ಲಿ 400 ಪೂರೈಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್
ಸಿಎಸ್‌ಕೆ: 223/3 (20 ಓವರ್)
ರೈನಾ ಅಜೇಯ 99 (52), ಹಸ್ಸಿ 67 (42)
ಬೌಲಿಂಗ್: ಪೆರೇರಾ 45/3, ಸ್ಟೇಯ್ನ್ 17/0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.