ಕ್ರೀಡೆ

ಸೋಲು ತಪ್ಪಿಸಿಕೊಂಡ ಮುಂಬೈ

Published On :

ಬೆಂಗಳೂರು: 64ನೇ ರಂಗಸ್ವಾಮಿ ಕಪ್ ಸೀನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಕರ್ನಾಟಕ ಹಾಗೂ ಹಾಲಿ ಚಾಂಪಿಯನ್ ಮುಂಬೈ ನಡುವೆ ನಡೆದ ಈ ಪಂದ್ಯದಲ್ಲಿ ಇತ್ತಂಡಗಳೂ 2-2ರ ಸಮಬಲ ಸಾಧಿಸಿದವು.
ಪಂದ್ಯದ ಮೊದಲಾರ್ಧದಲ್ಲಿ ಕರ್ನಾಟಕ ತಂಡ ಎದುರಾಳಿಗಳ ಜೊತೆ ಪ್ರಾಬಲ್ಯ ಸಾಧಿಸಿತು. ಮುಂಬೈ ಎದುರು ಸಮರವನ್ನೇ ಸಾರಿದ್ದ ಕರ್ನಾಟಕ ತಂಡದೆದುರು ಮುಂಬೈ ತಂಡ ಕೊಂಚ ಮಂಕಾಗಿ ಗೋಚರಿಸಿತು.
ಇದರ ಲಾಭವನ್ನು ಪಡೆದ ಕರ್ನಾಟಕ, 26ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ, ತನ್ನ ಗೋಲು ಖಾತೆಯನ್ನು ತೆರೆಯಿತು. ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಕರ್ನಾಟಕ ತಂಡದ ನಾಯಕ ದೀಪಕ್ ಬೆಜವಾಡ, ತಮ್ಮ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು.
ಇದಾದ ನಂತರ, ಪಂದ್ಯದ 32ನೇ ನಿಮಿಷದಲ್ಲಿ, ದೀಪಕ್ ಅವರೇ ಮತ್ತೊಂದು ಗೋಲು ಗಳಿಸಿ, ತಮ್ಮ ತಂಡಕ್ಕೆ 2-0ಯ ಅಂತರವನ್ನು ತಂದಿತ್ತರು. ಈ ಗೋಲೂ ಕೂಡ ಪೆನಾಲ್ಟಿ ಕಾರ್ನರ್‌ನಿಂದ ಲಭಿಸಿತು.
ಮೊದಲಾರ್ಧ ಮುಗಿದಾಗಲೂ ಕರ್ನಾಟಕ 2-0 ಗೋಲುಗಳ ಅಂತರದಲ್ಲಿ ಮುನ್ನಡೆ ಪಡೆದಿತ್ತು. ಆದರೆ, ದ್ವಿತೀಯ ಹಂತದಲ್ಲಿ ಮುಂಬೈ ತಂಡ ತೀವ್ರವಾದ ಹೋರಾಟ ನೀಡಿತು.
55ನೇ ನಿಮಿಷದಲ್ಲಿ ಮುಂಬೈನ ರವಿ ಪರೀಕ್ ಅವರು ಗೋಲು ದಾಖಲಿಸುವ ಮೂಲಕ ತಮ್ಮ ತಂಡಕ್ಕೆ ಮೊದಲ ಗೋಲ್‌ನ ಸಂಭ್ರಮ ತಂದುಕೊಟ್ಟರು. 67ನೇ ನಿಮಿಷದಲ್ಲಿ ವಿಕ್ಟೊ ಸಂತೋಷ್, ಮುಂಬೈ ಪರ ಗೋಲು ಗಳಿಸಿ 2-2ರ ಸಮಬಲ ಸಾಧಿಸಲು ನೆರವಾದರು.
---
ಮೊದಲಾರ್ಧದಲ್ಲಿ  ಅಂಗಣಕ್ಕೆ ಹೊಂದಿಕೊಳ್ಳಲು ಪ್ರಯಾಸಪಟ್ಟ ಮುಂಬೈ, ದ್ವಿತೀಯಾರ್ಧದಲ್ಲಿ ಹೊಂದಿಕೊಂಡು ಮಿಂಚಿನ ಆಟವಾಡಿತು. ದ್ವಿತೀಯಾರ್ಧದಲ್ಲಿ ನಮ್ಮ ಆಟಗಾರರು ಮಾಡಿದ ಕೆಲ ತಪ್ಪುಗಳು ಜಯವನ್ನು ತಪ್ಪಿಸಿದವು'
- ದೀಪಕ್ ಬೆಜವಾಡ್
ಕರ್ನಾಟಕ ತಂಡದ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.