ಡೆವಿಲ್ಸ್ಗೆ ಪ್ರತಿಷ್ಠೆ, ಆರ್ಸಿಬಿಗೆ ಒತ್ತಡ
ನವದೆಹಲಿ: ಈ ಆವೃತ್ತಿಯ ಪ್ಲೇ ಆಫ್ ಸುತ್ತಿನ ಆಸೆ ಕೈ ಬಿಟ್ಟಿರುವ ಡೆಲ್ಲಿ ಡೇರ್ಡೆವಿಲ್ಸ್ ಹಾಗೂ ಪ್ಲೇ ಆಫ್ ಸುತ್ತಿನ ಪ್ರವೇಶ ಪಡೆಯಲು ಪೈಪೋಟಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣೆಸಾಡುತ್ತಿದ್ದು, ಈ ಪಂದ್ಯ ಡೆಲ್ಲಿಗೆ ಪ್ರತಿಷ್ಠೆಯ ಪಂದ್ಯವಾದರೆ ಆರ್ಸಿಬಿ ಗೆಲವಿನ ಒತ್ತಡದಲ್ಲಿ ಸಿಲುಕಿದೆ.
ಎರಡೂ ತಂಡಗಳು ಇದುವರೆಗೂ 12 ಪಂದ್ಯಗಳನ್ನಾಡಿದ್ದು, ಆರ್ಸಿಬಿ 7ರಲ್ಲಿ ಗೆಲವು ಸಾಧಿಸಿದರೆ ಡೆಲ್ಲಿ ತಂಡ ಕೇವಲ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಪಂದ್ಯಾವಳಿಯಲ್ಲಿ ಯಾವುದೇ ನಿರೀಕ್ಷೆಗಳಿಲ್ಲದೇ ಕಣಕ್ಕಿಳಿಯುತ್ತಿರುವ ಡೆಲ್ಲಿ ತಂಡ ಒತ್ತಡವಿಲ್ಲದೆ ಕಣಕ್ಕಿಳಿಯುತ್ತಿದೆ. ಇನ್ನು ಆರ್ಸಿಬಿ ಪ್ಲೇ ಆಫ್ ಹಂತಕ್ಕೆ ತಲುಪಲು ಮುಂಬೈ, ರಾಜಸ್ಥಾನ, ಹೈದರಾಬಾದ್, ಪಂಜಾಬ್ ತಂಡಗಳೊಂದಿಗೆ ಪೈಪೋಟಿ ನಡೆಸುತ್ತಿರುವ ಹಿನ್ನಲೆಯಲ್ಲಿ ಒತ್ತಡಕ್ಕೆ ಸಿಲುಕಿದೆ.
ಆರ್ಸಿಬಿ ಕಳೆದ ನಾಲ್ಕು ಪಂದ್ಯಗಳಲ್ಲಿ ಕೇವಲ 1 ಪಂದ್ಯದಲ್ಲಿ ಗೆಲವು ಸಾಧಿಸಿ 3 ಪಂದ್ಯಗಳಲ್ಲಿ ಸೇಲನುಭವಿಸಿರುವುದು ತಂಡದ ಮೇಲೆ ಒತ್ತಡ ಹೆಚ್ಚಲು ಪ್ರಮುಖವಾಗಿದೆ.
ಆರ್ಸಿಬಿ ತಂಡದಲ್ಲಿ ಗೇಯ್ಲ್, ಡಿವಿಲಿಯರ್ಸ್, ರಾಮ್ಪಾಲ್, ವಿನಯ್ ಕುಮಾರ್, ಕೋಹ್ಲಿಯಂತಹ ಪ್ರಮುಖ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದರು, ಪಂದ್ಯದ ವೇಳೆ ಮಾಡುವ ಕೆಲವು ಸಣ್ಣ ತಪ್ಪುಗಳಿಂದ ಪಂದ್ಯವನ್ನು ಕೈ ಚೆಲ್ಲುತ್ತಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕ್ರಿಸ್ ಗೇಯ್ಲ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದರೆ ಇನಿಂಗ್ಸ್ನ ಅಂತ್ಯದಲ್ಲಿ ಡಿವಿಲಿಯರ್ಸ್ ರನ್ಗತಿಯನ್ನು ಹೆಚ್ಚಿಸುತ್ತಿದ್ದು, ತಂಡದ ಬ್ಯಾಟಿಂಗ್ ವಿಭಾಗಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಎಲ್ಲಾ ಬೌಲರ್ಗಳು ಆರಂಭದಲ್ಲಿ ಉತ್ತಮವಾಗಿ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸಿದರೆ ಅಂತಿಮ ಓವರ್ಗಳಲ್ಲಿ ರನ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಕಳೆದ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ವಿಭಾಗದಲ್ಲಿನ ಕಳಪೆ ಪ್ರದರ್ಶನದಿಂದ ಪಂದ್ಯ ಕೈಜಾರಿರುವುದು ತಂಡದ ಮೇಲೆ ಒತ್ತಡ ಹೆಚ್ಚುವಂತೆ ಮಾಡಿದೆ.
ಇನ್ನು ಡೆಲ್ಲಿ ತಂಡ ಪ್ರತಿಷ್ಠೆಗಾಗಿ ಆಡುತ್ತಿರುವುದರಿಂದ ಖ್ಯಾತನಾಮ ಆಟಗಾರರಾದ ವೀರೇಂದ್ರ ಸೆಹ್ವಾಗ್, ನಾಯಕ ಮಹೇಲಾ ಜಯವರ್ಧನೆ, ಡೇವಿಡ್ ವಾರ್ನರ್ ಉತ್ತಮ ಪ್ರದರ್ಶನ ನೀಡಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವ ಅಗತ್ಯವಿದೆ.
ತಂಡಗಳು
ಆರ್ಸಿಬಿ: ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ಕೆ.ಪಿ ಅಪ್ಪಣ್ಣ, ಶ್ರೀನಾಥ್ ಅರವಿಂದ್, ಅರುಣ್ ಕಾರ್ತಿಕ್, ಕ್ರಿಸ್ಟೊಫರ್ ಬರ್ನ್ವೆಲ್, ಡೇನಿಯಲ್ ಕ್ರಿಸ್ಚಿಯನ್, ಎಬಿ ಡಿವಿಲಿಯರ್ಸ್, ತಿಲಕರತ್ನೆ ದಿಲ್ಶಾನ್, ಕ್ರಿಸ್ ಗೇಯ್ಲ್, ಮೊಯ್ಸಿಸ್ ಹೆನ್ರಿಕೇಸ್, ಶೆಲ್ಡನ್ ಜಾಕ್ಸನ್, ಮುರಳಿ ಕಾರ್ತಿಕ್, ಜಹೀರ್ ಖಾನ್, ಆ್ಯಂಡ್ರೂ ಮೆಕ್ಡೊನಾಲ್ಡ್, ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಮುತ್ತಯ್ಯ ಮುರಳಿಧರನ್, ಕರುಣ್ ನಾಯರ್, ಪಂಕಜ್ ಸಿಂಗ್, ಪಿ.ಪರಮೇಶ್ವರನ್, ಹರ್ಶದ್ ಪಟೇಲ್, ಚೇತೇಶ್ವರ ಪೂಜಾರ, ರವಿ ರಾಮ್ಪಾಲ್, ಸಂದೀಪ್ ವಾರಿಯರ್, ಆರ್.ಪಿ. ಸಿಂಗ್, ಸನ್ನಿ ಸೋಹೈಲ್, ಸೈಯದ್ ಮಹಮದ್, ಸೌರಬ್ ತಿವಾರಿ, ಜಯ್ದೇವ್ ಉನದ್ಕತ್, ಡೇನಿಯಲ್ ವೆಟ್ಟೊರಿ, ವಿನಯ್ ಕುಮಾರ್, ವಿಜಯ್ ಜೋಲ್.
ಡೇರ್ಡೆವಿಲ್ಸ್: ಮಹೇಲಾ ಜಯವರ್ಧನೆ (ನಾಯಕ), ವೀರೇಂದ್ರ ಸೆಹ್ವಾಗ್, ಡೇವಿಡ್ ವಾರ್ನರ್, ಮನ್ಪ್ರೀತ್ ಜುನೇಜಾ, ಅಜಿತ್ ಅಗರ್ಕರ್, ಗುಲಬ್ ಬೋಡಿ, ಜೊಹಾನ್ ಬೊತಾ, ಉನ್ಮುಕ್ತ್ ಚಂದ್, ರಾಯ್ಸ್ಟನ್ ಡಯಾಸ್, ಸಿ.ಎಂ.ಗೌತಮ್, ಕೇದಾರ್ ಜಾದವ್, ಸಿದ್ದಾರ್ತ್ ಕೌರ್, ಜೀವನ್ ಮೆಂಡಿಸ್, ಮಾರ್ನೆ ಮಾರ್ಕೆಲ್, ಶಹ್ನಾಬ್ ನದೀಂ, ಯೋಗೇಶ್ ನಾಯರ್, ಸುಜಿತ್ ನಾಯಕ್, ಪವನ್ ನೇಗಿ, ನಮನ್ ಓಜಾ, ಇರ್ಫಾನ್ ಪಠಾಣ್, ಆ್ಯಂಡ್ರೂ ರಸೆಲ್, ಅರ್ಷಿತ್ ಸಿಂಗ್ವಿ, ವಾನ್ ಡರ್ ಮರ್ವೆ, ವೇಣುಗೋಪಾಲ್ ರಾವ್, ಉಮೇಶ್ ಯಾದವ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

