ಕ್ರೀಡೆ

ಮಹೇಶ್ ಕ್ವಾರ್ಟರ್‌ಗೆ

Published On :

ಮುಂಬೈ: ನಗರದಲ್ಲಿ ಸ್ಕ್ವಾಷ್ ಚಾಲೆಂಜರ್‌ನಲ್ಲಿ ಭಾರತದ ಮಹೇಶ್ ಮಂಗಾವ್ಕರ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಆರಂಭಿಕ ಸುತ್ತಿನಲ್ಲಿ ಜೋರ್ಡಾನಿಯನ್ ಅಹ್ಮದ್ ಅಲ್ ಸರಜ್ ಅವರನ್ನು 11-3, 11-6, 11-4 ಸೆಟ್‌ಗಳಿಂದ ಸೋಲಿಸಿದ 19 ವರ್ಷದ ಮಂಗಾವ್ಕರ್ ಕ್ವಾರ್ಟರ್‌ಫೈನಲ್‌ಗೆ ಹೆಜ್ಜೆ ಹಾಕಿದರು. 'ಆರಂಭಿಕ ಸುತ್ತಿನಲ್ಲಿ ಜಯ ಸಾಧಿಸಿರುವುದು ನನಗೆ ಖುಷಿ ನೀಡಿದೆ. ಪಂದ್ಯದಲ್ಲಿ ನಾನು ಸಮರ್ಥ ಹೋರಾಟ ನೀಡಿದೆ. ಶುಕ್ರವಾರದ ಪಂದ್ಯದಲ್ಲಿ ವಿಶ್ವದ 30ನೇ ರ್ಯಾಂಕಿಂಗ್ ಆಟಗಾರ ಮೊಹ್ಮದ್ ಅಲಿಯನ್ನು ಎದುರಿಸಲಿದ್ದೇನೆ. ತವರಿನ ಅಂಗಣದಲ್ಲಿ ಅಂತಹ ಆಟಗಾರನ ವಿರುದ್ಧ ಹೋರಾಟಕ್ಕೆ ಅವಕಾಶ ಸಿಕ್ಕಿರುವುದು ಅತೀವ ಸಂತಸವಾಗುತ್ತಿದೆ' ಎಂದಿದ್ದಾರೆ ಮಹೇಶ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.