ವಾರಿಯರ್ಸ್ಗೆ ಒಲಿಯದ ಜಯ
ಪುಣೆ: ಕೋಲ್ಕತಾ ನೈಟ್ ರೈಡರ್ಸ್ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಬೆದರಿದ ಪುಣೆ ವಾರಿಯರ್ಸ್ ತಂಡ 46 ರನ್ಗಳ ಅಂತರದಿಂದ ಸೋಲನುಭವಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತಾ ನೈಟ್ ರೈಡರ್ಸ್ ತಂಡ ನಿಗದಿತ ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 152 ರನ್ ಕಲೆ ಹಾಕಿತು.
ನಂತರ ಈ ಮೊತ್ತವನ್ನು ಬೆನ್ನಟ್ಟಿದ ಪುಣೆ ವಾರಿಯರ್ಸ್ ತಂಡ 19.3 ಓವರ್ಗಳಲ್ಲಿ ಕೇವಲ 106 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೈಚೆಲ್ಲಿತು.
ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ (31) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಎಂಜೆಲೋ ಮ್ಯಾಥ್ಯೂವ್ಸ್ (40) ಬಿಟ್ಟರೆ ಉಳಿದ ಪುಣೆ ಬಾಟ್ಸ್ಮನ್ಗಳಾರೂ ಎರಡಂಕಿ ದಾಟಲಿಲ್ಲ. ಇದರೊಂದಿಗೆ ಪುಣೆ ಆಡಿರುವ 13 ಪಂದ್ಯಗಳಲ್ಲಿ 11ರಲ್ಲಿ ಸೋಲನುಭವಿಸಿದೆ.
ಕೋಲ್ಕತಾ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಲಕ್ಷ್ಮೀಪತಿ ಬಾಲಾಜಿ ಕೇವಲ 19 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇಕ್ಬಾಲ್ ಅದ್ಬುಲ್ಲಾ, ಜಾಕ್ ಕಾಲಿಸ್ ಹಾಗೂ ಸುನಿಲ್ ನಾರಾಯಣ ತಲಾ 2 ವಿಕೆಟ್ ಕಬಳಿಸಿದರೆ, ಭಾಟಿಯಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ಪರ ಆಕರ್ಷಕ ಅರ್ಧ ಶತಕ ದಾಖಲಿಸಿದ ತಂಡದ ನಾಯಕ ಗೌತಮ್ ಗಂಭೀರ್ (50), ತಂಡದ ಮೊತ್ತ 150 ಗಡಿ ದಾಟುವಂತೆ ನೋಡಿಕೊಂಡರು.
ಗೌತಮ್ ಗಂಭೀರ್ ಮೊತ್ತದಲ್ಲಿ 6 ಬೌಂಡರಿಗಳು ಸೇರಿದ್ದವು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ರೇಯಾನ್ ಡಸ್ಕೆಟ್ 21 ಎಸೆತಗಳಲ್ಲಿ 31 ರನ್ ಗಳಿಸಿದರು. ಅವರ ಮೊತ್ತದಲ್ಲಿ 1 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದವು. ಅಂತಿಮ ಓವರ್ಗಳಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ರಜತ್ ಭಾಟಿಯಾ ಸಹ 5 ಎಸೆತಗಳಲ್ಲಿ 13 ರನ್ ಪೇರಿಸಿ ತಂಡಕ್ಕೆ ಆಶ್ರಯವಾದರು. ಗೌತಮ್ ಗಂಭೀರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ಬೋರ್ಡ್
ಕೋಲ್ಕತಾ ನೈಟ್ ರೈಡರ್ಸ್ 152/6 (20 ಓವರ್)
ಬಿಸ್ಲಾ ಸ್ಟಂಪ್ ರಾವತ್ ಬಿ ಭುವನೇಶ್ವರ 12 (13), ಗಂಭೀರ್ ಸಿ ಮ್ಯಾಥ್ಯೂವ್ಸ್ ಬಿ ಮಾರ್ಷ್ 50 (44), ಕಾಲಿಸ್ ಸಿ ಮ್ಯಾಥ್ಯೂವ್ಸ್ ಬಿ ರಸೂಲ್ 2 (6), ಮಾರ್ಗನ್ ಸಿ ಉತ್ತಪ್ಪ ಬಿ ಮಾರ್ಷ್ 15 (15), ಡೆಸ್ಕಟ್ ಸಿ ಉಪಾಧ್ಯಾಯ ಬಿ ಭುವನೇಶ್ವರ 31 (21), ಯೂಸುಫ್ ಪಠಾಣ್ ಸಿ ರಾವತ್ ಬಿ ಭುವನೇಶ್ವರ 3 (6), ತಿವಾರಿ ಅಜೇಯ 15 (10), ಭಾಟಿಯಾ ಅಜೇಯ 13 (5), ಇತರೆ 11.
ವಿಕೆಟ್ ಪತನ: 1-45, 2-52, 3-75, 4-90, 5-97, 6-135.
ಬೌಲಿಂಗ್: ಪರ್ನೆಲ್ 4-0-40-0, ಉಪಾಧ್ಯಾಯ 2-0-19-0, ಭವನೇಶ್ವರ 4-0-25-3, ರಸೂಲ್ 4-0-23-1, ಮ್ಯಾಥ್ಯೂವ್ಸ್ 4-0-31-0, ಮಾರ್ಷ್ 2-0-7-2.
ಪುಣೆ ವಾರಿಯರ್ಸ್ 106/10 (19.3 ಓವರ್)
ಉತ್ತಪ್ಪ ಸಿ ಗಂಭೀರ್ ಬಿ ಇಕ್ಬಾಲ್ 31(35), ಫಿಂಚ್ ಬೌಲ್ಡ್ ಕಾಲಿಸ್ 5 (5), ಯುವರಾಜ್ ಸಿ ಬಿಲ್ಸಾ ಬಿ ಬಾಲಾಜಿ 1 (2), ಬಿರ್ಲಾ ಬೌಲ್ಡ್ ಇಕ್ಬಾಲ್ 7 (14), ಮ್ಯಾಥ್ಯೂವ್ಸ್ ಸಿ ತಿವಾರಿ ಬಿ ನಾರಾಯಣ 40 (28), ಮಾರ್ಷ್ ಸಿ ತಿವಾರಿ ಬಿ ಭಾಟಿಯಾ 5 (8), ರಾವತ್ ಸಿ ಬಿಸ್ಲಾ ಬಿ ಕಾಲಿಸ್ 5 (11), ಪರ್ನೆಲ್ ಸಿ ತಿವಾರಿ ಬಿ ನಾರಾಯಣ 5 (7), ಭವನೇಶ್ವರ ಬೌಲ್ಡ್ ಬಾಲಾಜಿ 1 (3), ರಸೂಲ್ ಸಿ ಮತ್ತು ಬಿ ಬಾಲಾಜಿ 1 (4), ಉಪಾಧ್ಯಾಯ ಅಜೇಯ 1 (1) ಇತರೆ 4.
ವಿಕೆಟ್ ಪತನ: 1-20, 2-23, 3-39, 4-53, 5-78, 6-95, 7-103, 8-103, 9-105, 10-106.
ಬೌಲಿಂಗ್: ಇಕ್ಬಾಲ್ 4-0-26-2, ಬಾಲಾಜಿ 3.3-0-19-3, ಕಾಲಿಸ್ 4-0-27-2, ನಾರಾಯಣ 4-0-12-2, ಡಸ್ಕೆಟ್ 1-0-3-0, ಭಾಟಿಯಾ 3-0-19-1.
ಪಂದ್ಯ ಶ್ರೇಷ್ಠ: ಗೌತಮ್ ಗಂಭೀರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

