ಯುಪಿ ವಿರುದ್ಧವೂ ಡ್ರಾ

ಬೆಂಗಳೂರು: ರಾಜ್ಯ ಹಾಕಿ ಮೈದಾನದಲ್ಲಿ ನಡೆಯುತ್ತಿರುವ ರಂಗಸ್ವಾಮಿ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ನ ಗುರವಾರದ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಉತ್ತರ ಪ್ರದೇಶದ ವಿರುದ್ಧ 3-3 ಗೋಲುಗಳ ಅಂತರದಿಂದ ಡ್ರಾ ಸಾಧಿಸಿತು.
ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ನಡೆದ ಪ್ರದರ್ಶನವೇ ಈ ಪಂದ್ಯದಲ್ಲಿ ಮರುಕಳಿಸಿದ್ದು ವಿಶೇಷವಾಗಿತ್ತು. ಮೊದಲು 3-1 ಅಂತರದಿಂದ ಮುನ್ನಡೆ ಸಾಧಿಸಿದ್ದ ರಾಜ್ಯ ತಂಡ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅಂತ್ಯದಲ್ಲಿ ಮತ್ತೆರಡು ಗೋಲು ದಾಖಲಿಸಿದ ಯುಪಿ ಡ್ರಾ ಕಂಡುಕೊಳ್ಳುವಲ್ಲಿ ಯಶಸ್ವಿಯಾಯಿತು. ಮುಂಬೈ ವಿರುದ್ಧದ ಪಂದ್ಯದಲ್ಲೂ ಇದೇ ರೀತಿಯ ಫಲಿತಾಂಶ ಹೊರಬಿದ್ದಿತ್ತು.
ಪಂದ್ಯದ 17ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಬಿಜು ಗೋಲು ದಾಖಲಿಸುವ ಮೂಲಕ ಕರ್ನಾಟಕ ಮುನ್ನಡೆ ಪಡೆದುಕೊಂಡಿತು. ಆದರೆ, 23ನೇ ನಿಮಿಷದಲ್ಲಿ ಎದುರಾಳಿ ತಂಡದ ಇಮ್ರಾನ್ ಖಾನ್ ಗೋಲು ದಾಖಲಿಸುವ ಮೂಲಕ ಯುಪಿ ಸಮಬಲ ಸಾಧಿಸಿತು.
ನಂತರ 32ನೇ ನಿಮಿಷದಲ್ಲಿ ಬಿಜು ಮತ್ತು 46ನೇ ನಿಮಿಷದಲ್ಲಿ ದೀಪಕ್ ಬೆಜಿವಾಡ್ ಗೋಲು ದಾಖಲಿಸುವುದರೊಂದಿಗೆ ಕರ್ನಾಟಕ 3-1ರಿಂದ ಮುನ್ನಡೆ ಕಂಡುಕೊಂಡಿತು. ಆದರೆ, ಪಂದ್ಯದ 54 ಮತ್ತು 58ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಯುಪಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು.
ಇದಕ್ಕೂ ಮುನ್ನ ನಡೆದ ದಿನದ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಪಂಜಾಬ್ ತಂಡ ಹಾಲಿ ಚಾಂಪಿಯನ್ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಸಾಧಿಸಿತು.
ಪಂಜಾಬ್ ಪರ ಪಂದ್ಯದ 4ನೇ ನಿಮಿಷದಲ್ಲಿ ರಂಜಿತ್ ಸಿಂಗ್, 24ನೇ ನಿಮಿಷದಲ್ಲಿ ಗುರ್ಜೀತ್ ಸಿಂಗ್ ಹಾಗೂ 69ನೇ ನಿಮಿಷದಲ್ಲಿ ರಂಜೀತ್ ಸಿಂಗ್ ಗೋಲು ದಾಖಲಿಸಿದರು. ಆದರೆ, ಮುಂಬೈ ಪರ 36ನೇ ನಿಮಿಷದಲ್ಲಿ ಜಯಂತ್ ಮೆಟಿ ಮಾತ್ರ ಗೋಲು ದಾಖಲಿಸಿದರು. ಶುಕ್ರವಾರ ಒಂದು ಪಂದ್ಯ ಮಾತ್ರ ನಡೆಯಲಿದ್ದು, ಜಾರ್ಖಂಡ್ ಮತ್ತು ಮಣಿಪುರ ಜಯಕ್ಕಾಗಿ ಕಾದಡಲಿವೆ. ಸಂಜೆ 4:30ರಿಂದ ಪಂದ್ಯ ಆರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


