ಕ್ರೀಡೆ

ಸಿಂಗಲ್ಸ್‌ನಲ್ಲಿ ಭಾರತ ಶುಭಾರಂಭ

Published On :

ನವದೆಹಲಿ: ಆಕರ್ಷಕ ಆಟ ಪ್ರದರ್ಶಿಸಿದ ಭಾರತ ನಾಲ್ವರು ಪುರುಷ ಮತ್ತು ನಾಲ್ವರು ಮಹಿಳಾ ಆಟಗಾರ್ತಿಯ 19ನೇ ಕಾಮನ್ವೆಲ್ತ್ ಟೇಬಲ್ ಟೆನಿಸ್ ಪಂದ್ಯಾವಳಿಯ ಸಿಂಗಲ್ಸ್‌ನಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಜುಬಿನ್ ಕುಮಾರ್, ಅಚಂತಾ ಶರತ್ ಕಮಲ್, ಸೌಮ್ಯಜೀತ್ ಘೋಷ್ ಹಾಗೂ ಅಂತೋನಿ ಅಮಲ್ರಾಜ್ ಆರಂಭಿಕ ಸುತ್ತಿನಲ್ಲಿ ಜಯ ಕಾಣುವ ಮೂಲಕ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೌಮಾ ದಾಸ್, ಕೆ ಶ್ಯಾಮಿನಿ, ಮಾಧುರಿಕಾ ಹಾಗೂ ನೇಹಾ ಅಗರ್ವಾಲ್ ಅವರು ದ್ವಿತೀಯ ಸುತ್ತಿಗೆ ಲಗ್ಗೆ ಹಾಕಿದ್ದಾರೆ.
ಜುಬಿನ್ ಮೊದಲ ಪಂದ್ಯದಲ್ಲಿ ಸಿಂಗಾಪುರದ ಲಿಯಾಂಗ್ ಮಾ ವಿರುದ್ಧ 4-3 ಅಂತರದಿಂದ ಜಯ ಸಾಧಿಸಿದರು. ಜುಬಿನ್ ತಮಗಿಂತ ಅಗ್ರ ರ್ಯಾಂಕಿಂಗ್ ಆಟಗಾರನ ವಿರುದ್ಧ ಅದ್ಭುತ ಆಟ ಪ್ರದರ್ಶಿಸಿದರು. ಹೀಗಾಗಿ ಈ ಪಂದ್ಯ ಹೆಚ್ಚು ಗಮನ ಸೆಳೆಯಿತು.
ಭಾರತದ ಇನ್ನೊಬ್ಬ ಆಟಗಾರ ಸೌರವ್ ಸಾಹ ಸಹ ಸಿಂಗಾಪುರದ ಫೆಂಗ್ ಚೆನ್ ವಿರುದ್ಧ ಬಲಿಷ್ಠ ಪ್ರದರ್ಶನ ತೋರಿದ್ದರು. ಆದರೆ, ಅಂತಿಮವಾಗಿ 3-4 ಅಂತರದಿಂದ ಸೋಲೊಪ್ಪಿಕೊಂಡರು.
ಇನ್ನು ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಮೌಮಾ ದಾಸ್ ಮತ್ತು ಸೌಮ್ಯಜೀತ್ ಘೋಷ್ ಜೋಡಿ ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಈ ಜೋಡಿ ಸಿಂಗಾಪುರದ ಜಿ ಯಾಂಗ್ ಮತ್ತು ಮೆಂಗ್ಯಾ ಯು ಜೋಡಿಯನ್ನು ಎದುರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.