ಕ್ರೀಡೆ

ಜಾರ್ಖಂಡ್‌ಗೆ ರೋಚಕ ಗೆಲವು

Published On :

ಬೆಂಗಳೂರು: ಪಂದ್ಯದ ಕೊನೆಯ ಹತ್ತು ನಿಮಿಷಗಳಲ್ಲಿ ಗಳಿಸಿದ ಎರಡು ಗೋಲುಗಳ ನೆರವಿನಿಂದಾಗಿ, ರಂಗಸ್ವಾಮಿ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಶುಕ್ರವಾರದ ಪಂದ್ಯದಲ್ಲಿ ಜಾರ್ಖಂಡ್ ತಂಡ, ಮಣಿಪುರ ತಂಡದ ವಿರುದ್ಧ 4-2 ಗೋಲುಗಳ ರೋಚಕ ಜಯ ದಾಖಲಿಸಿತು.
ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದ ಮೊದಲಾರ್ಧದಲ್ಲಿ ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ.
ಆದರೆ, ಬ್ರೇಕ್‌ನ ನಂತರ, ಪಂದ್ಯ ಶುರುವಾದಾಗ, ಎರಡೂ ತಂಡಗಳು ತಮ್ಮ ಗೋಲ್‌ನ ಖಾತೆಯನ್ನು ತೆರೆದವು.
ಇತ್ತಂಡಗಳ ಆಟಗಾರರು ತೀವ್ರ ಪೈಪೋಟಿ ನಡೆಸಿದರು. ಈ ಪೈಪೋಟಿಯಲ್ಲಿ ಮೊದಲು ಯಶಸ್ಸು ಕಂಡಿದ್ದು ಮಣಿಪುರ ತಂಡ. ಪಂದ್ಯದ 37ನೇ ನಿಮಿಷದಲ್ಲಿ ಮಣಿಪುರ ತನ್ನ ಮೊದಲ ಗೋಲು ಗಳಿಸಿತು. ಆಟಗಾರನ ಸ್ಟಿಕ್‌ಗೆ ತಗುಲಿದ ಚೆಂಡು ನೇರವಾಗಿ ಗೋಲ್ ಪೆಟ್ಟಿಗೆಯೊಳಗೆ ನುಗ್ಗಿತು.
ಆದರೆ, ಅತ್ತ, ಜಾರ್ಖಂಡ್ ತಂಡ ಹಿಂದೆ ಬೀಳಲಿಲ್ಲ. ಪಂದ್ಯದ 39ನೇ ನಿಮಿಷದಲ್ಲಿ ತಾನೂ ಒಂದು ಗೋಲು ಗಳಿಸುವ ಮೂಲಕ, ಜಾರ್ಖಂಡ್ ತನ್ನ ಗೋಲ್‌ನ ಖಾತೆಯನ್ನು ತೆರೆಯಿತು.
ಅದೃಷ್ಟದ ಗೋಲು: ಇದಾದ ಮೇಲೆ, ಮಣಿಪುರ ತಂಡ ಪಂದ್ಯ ದ56ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿಕೊಂಡು, ಅಂತರವನ್ನು 2-1ಕ್ಕೆ ಹೆಚ್ಚಿಸಿಕೊಂಡಿತು. ಆದರೆ, ಈ ಗೋಲು ಸ್ವಯಾರ್ಜಿತವಾಗಿರಲಿಲ್ಲ.
ಜಾರ್ಖಂಡ್ ತಂಡದ ಆಟಗಾರನೊಬ್ಬ ಅಚಾತುರ್ಯದಿಂದ ಜಾರ್ಖಂಡ್ ಗೋಲು ಪೆಟ್ಟಿಗೆಯೊಳಗೆ ಚೆಂಡು ಅಕಸ್ಮಾತ್ ಆಗಿ ನುಗ್ಗಿದ್ದರಿಂದ, ಈ 'ಸೆಲ್ಫ್ ಗೋಲ್‌' ಮಣಿಪುರಕ್ಕೆ ಅನಾಯಾಸವಾಗಿ ಲಭಿಸಿತು.
ದ್ವಿತೀಯಾರ್ಧದ ಅಂತಿಮ ಹಂತದವರೆಗೂ ಇದೇ ರೀತಿಯ ಅಂತರ ಮುಂದುವರೆಯಿತು. ಎರಡೂ ತಂಡಗಳ ಆಟಗಾರರು ಗೋಲ್‌ಗಾಗಿ ತೀವ್ರವಾಗಿ ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ಸು ಕಾಣಲಿಲ್ಲ.
ಅತ್ತ, 56ನೇ ನಿಮಿಷದಲ್ಲಿ ಅನಾಯಾಸವಾಗಿ ಬಂದಿದ್ದ ಗೋಲ್‌ನಿಂದಾಗಿ ಜಾರ್ಖಂಡ್ ಆಟಗಾರರೂ ಖುಷಿಯಲ್ಲಿದ್ದರು.
ಆದರೆ, ಪಂದ್ಯದ ಅಂತಿಮ ಹಂತದ 10 ನಿಮಿಷಗಳು ಮಣಿಪುರ ಆಟಗಾರರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದವು. ಆದರೆ, ಪಂದ್ಯ ಮುಗಿಯಲು ಹತ್ತು ನಿಮಿಷಗಳು ಬಾಕಿಯಿದ್ದಾಗ, ಜಾರ್ಖಂಡ್‌ನ ರಬೀಂದ್ರ ಕುಜುರ್ ಹಾಗೂ ಸುಮನ್ ಟಿರ್ಕೆ ತಲಾ ಒಂದು ಗೋಲು ಗಳಿಸಿದರು. ಇದರಿಂದ ಜಾರ್ಖಂಡ್ ತಂಡಕ್ಕೆ 4-2 ಅಂತರದ ಜಯ ತಂದುಕೊಟ್ಟರು.


ಇಂದಿನ ಪಂದ್ಯಗಳು:

ಪಂಜಾಬ್ ಮತ್ತು ಯುಪಿ - ಮಧ್ಯಾಹ್ನ 12:30 ಗಂಟೆಗೆ
ಮಣಿಪುರ್ ಮತ್ತು ಕರ್ನಾಟಕ - ಮಧ್ಯಾಹ್ನ 2:30ಕ್ಕೆ
ಜಾರ್ಖಂಡ್ ಮತ್ತು ಮುಂಬೈ - ಸಂಜೆ 4:30ಕ್ಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.