ಕ್ರೀಡೆ

ಪುಣೆ ನಾಯಕ ಸ್ಥಾನದಿಂದ ಮ್ಯಾಥ್ಯೂಸ್ ಔಟ್

Published On :

ಮುಂಬೈ: ಫಾರ್ಮ್‌ನಲ್ಲಿಲ್ಲದ ಕಾರಣದಿಂದ ಶ್ರೀಲಂಕಾದ ಆಟಗಾರ ಏಂಜೆಲೋ ಮ್ಯಾಥ್ಯೂಸ್ ಅವರನ್ನು ಪುಣೆ ವಾರಿಯರ್ಸ್ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಸಿರುವ ಬಗ್ಗೆ ಶ್ರೀಲಂಕಾದ ಮಾಜಿ ಆಟಗಾರ ಸನತ್ ಜಯಸೂರ್ಯ್ ವಿಷಾದ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ರಾಷ್ಟ್ರೀಯ ತಂಡದ ಆಯ್ಕೆ ಮಂಡಳಿಯ ಅಧ್ಯಕ್ಷರೂ ಆಗಿರುವ ಸನತ್ ಜಯಸೂರ್ಯ, 'ಐಪಿಎಲ್ ತಂಡವಾದ ಪುಣೆ ವಾರಿಯರ್ಸ್ ನಾಯಕ ಸ್ಥಾನದಿಂದ ಏಂಜೆಲೊ ಮ್ಯಾಥ್ಯೂಸ್ ಅವರನ್ನು ಕೆಳಗಿಳಿಸಿರುವುದು ವಿಷಾದನೀಯ. ಪ್ರಸ್ತುತ ಶ್ರೀಲಂಕಾ ತಂಡಕ್ಕೆ ಟೆಸ್ಟ್ ಹಾಗೂ ಏಕದಿನ ಎರಡೂ ಮಾದರಿಗಳಲ್ಲಿ ನಾಯಕರಾಗಿರುವ ಅವರ ಬಗ್ಗೆನನಗೆ ಈಗಲೇ ದಿಗಿಲು ಉಂಟಾಗಿದೆ' ಎಂದು ತಿಳಿಸಿದರು.
ಆದರೆ, ಮ್ಯಾಥ್ಯೂಸ್ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಅವರು, 'ಏಂಜೆಲೊ ಅವರು ಕ್ರಿಕೆಟ್ ರಂಗದಲ್ಲಿ ಬಹಳ ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಕ್ರಿಕೆಟ್ ಜೀವನದಲ್ಲಿ ಇಂಥ ಏರು-ಪೇರುಗಳು ಸಾಮಾನ್ಯ ಎಂಬುದನ್ನು ಅವರು ಅರಿತಿದ್ದಾರೆ. ಇಂಥಾ ಕಹಿ ವಿಷಯಗಳನ್ನು ಮರೆತು ಅವರು ಪುನಃ ಯಶಸ್ಸು ಕಾಣಲಿದ್ದಾರೆಂದು ಆಶಿಸುತ್ತೇನೆ' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.