ಕ್ರೀಡೆ

ಭೂಪತಿ- ಬೋಪಣ್ಣ ಕ್ವಾರ್ಟರ್‌ಫೈನಲ್‌ಗೆ

Published On :

ಮ್ಯಾಡ್ರಿಡ್: ಭಾರತದ ಹಿರಿಯ ಟೆನಿಸ್ ತಾರೆ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ ಮ್ಯಾಡ್ರಿಡ್ ಓಪನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಆದರೆ, ಲಿಯಾಂಡರ್ ಪೇಸ್ ಮತ್ತು ಸಾನಿಯಾ ಮಿರ್ಜಾ ಅವರು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. 6ನೇ ಶ್ರೇಯಾಂಕ ಪಡೆದಿರುವ ಭೂಪತಿ ಮತ್ತು ಬೋಪಣ್ಣ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸುವ ಮುನ್ನ ನಡೆದ ಪಂದ್ಯದಲ್ಲಿ ಅರ್ಜೆಂಟೀನಾದ ಜೂವಾನ್ ಮೋನಾಕೊ ಮತ್ತು ಹೋರಾಸಿಯೋ ಜೆಬಾಲ್ಲೋಸ್ ಜೋಡಿಯನ್ನು 6-3, 3-6, 10-5 ಸೆಟ್‌ಗಳ ಅಂತರದಿಂದ ಸೋಲಿಸಿತು. ಈ ಪಂದ್ಯಾವಳಿಯನ್ನು ಫ್ರೆಂಚ್ ಓಪನ್ ಅಭ್ಯಾಸವೆಂದೇ ಭಾವಿಸಲಾಗಿದೆ. ಆದರೆ, ಭಾರತದ ಇನ್ನೊಬ್ಬ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ಆಸ್ಟ್ರೇಲಿಯಾದ ಜರ್ಗನ್ ಮೆಲ್ಜರ್ ಜೋಡಿಗೆ ನಿರಾಸೆದಾಯಕ ದಿನವಾಗಿತ್ತು. ಭಾರತ- ಆಸ್ಟ್ರೇಲಿಯಾ ಜೋಡಿ ಜರ್ಮನಿ ಮತ್ತು ಜೆಕ್ ಜೋಡಿಯನ್ನು 7-5, 6-1 ನೇರ ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿತು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ 5ನೇ ಸೀಡ್ ಪಡೆದಿದ್ದ ಸಾನಿಯಾ ಮತ್ತು ಬೇಥನೀ ಮಾಟೆಕ್ ಸ್ಯಾಂಡ್ಸ್ ಜೋಡಿ, ರಷ್ಯಾದ ಅನಾಸ್ತಾಸಿಯಾ ಪವ್ಲುಚೆಕೋವಾ ಮತ್ತು ಲೂಸಿಯಾ ಸಫಾರೋವ್ ಜೋಡಿ ವಿರುದ್ಧ 7-5, 6-1 ನೇರ ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.