ಕ್ರೀಡೆ

ಭೂಪತಿ- ಬೋಪಣ್ಣ ಸವಾಲು ಅಂತ್ಯ

ಭೂಪತಿ- ಬೋಪಣ್ಣ ಸವಾಲು ಅಂತ್ಯ
Published On :

ಮ್ಯಾಡ್ರಿಡ್: ಭಾರತದ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ, ಮ್ಯಾಡ್ರಿಡ್ ಓಪನ್‌ನಲ್ಲಿ ತಮ್ಮ ಸವಾಲನ್ನು ಅಂತ್ಯಗೊಳಿಸಿದೆ.
ಭಾರತದ ಜೋಡಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶ್ರೇಯಾಂಕ ಪಡೆಯದ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಮತ್ತು ಪೊಲೆಂಡ್‌ನ ಲೂಕಾಸ್ ಕೂಬಾಟ್ ಜೋಡಿ ವಿರುದ್ಧ 2-6, 4-6 ನೇರ ಸೆಟ್‌ಗಳ ಅಂತರದಿಂದ ಸೋಲನುಭವಿಸಿತು.
ಭಾರತದ ಇನ್ನೊಬ್ಬ ಹಿರಿಯ ಆಟಗಾರ ಲಿಯಾಂಡರ್ ಮತ್ತು ಆಸ್ಟ್ರೇಲಿಯಾದ ಜರ್ಗನ್ ಮೇಲ್ಜರ್ ಜೋಡಿ ದ್ವಿತೀಯ ಸುತ್ತಿನಲ್ಲೇ ಸೋಲನುಭವಿಸಿತ್ತು. ಇನ್ನು ವನಿತೆಯರ ವಿಭಾಗದಲ್ಲಿ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥನೀ ಮಾಟೆಕ್ ಸ್ಯಾಂಡ್ಸ್ ಜೋಡಿ ದ್ವಿತೀಯ ಸುತ್ತಿನಲ್ಲೇ ಸೋಲನುಭಿಸಿದೆ.
ದಿವಿಜ್- ಪುರವ ಜೋಡಿಗೆ ಸೋಲು: ಭಾರತದ ದಿವಿಜ್ ಶರಣ್ ಮತ್ತು ಪುರುವ ರಾಜಾ ಜೋಡಿ ಕನ್ಮಿಂಗ್ ಚಾಲೆಂಜರ್ ಎಟಿಪಿ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಸೋಲನುಭವಿಸಿತು.
ಭಾರತದ ಜೋಡಿ ಸೆಮೀಸ್‌ನಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ ಆಸ್ಟ್ರೇಲಿಯಾದ ಸ್ಯಾಮ್ಯೂಯಲ್ ಗ್ರೋತ್ ಮತ್ತು ಜಾನ್ ಪ್ಯಾಟ್ರಿಕ್ ಸ್ಮಿತ್ ಜೋಡಿ ವಿರುದ್ಧ 2-6, 6-7(5) ಸೆಟ್‌ಗಳಿಂದ ಪರಾಭವ ಅನುಭವಿಸಿತು.
ಪುರವ ರಾಜಾ ಕುತ್ತಿಗೆ ನೋವಿನಿಂದ ಬಳಲುತ್ತಿದ್ದರಿಂದ ಪಂದ್ಯದಲ್ಲಿ ಭಾರತದ ತಂಡ ಬಲಿಷ್ಠ ಪ್ರದರ್ಶನ ನೀಡಲಾಗಲಿಲ್ಲ. ಇದು ಸೋಲಿಗೆ ಪ್ರಮುಖ ಕಾರಣವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.