ಕ್ರೀಡೆ

ತವರಲ್ಲೇ ಸೋತ ಕಿಂಗ್ಸ್

Published On :

ಚಂಡೀಗಢ: ಡೇರೇನ್ ವೈಟ್ ಅವರ ಆಕ್ರಮಣಕಾರಿ ಬೌಲಿಂಗ್ ಹಾಗೂ ಪಾರ್ಥೀವ್ ಪಟೇಲ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ, ಪಂಜಾಬ್ ತಂಡವನ್ನು 30 ರನ್‌ಗಳ ಅಂತರದಲ್ಲಿ ಸೋಲಿಸಿತು.
ಮೊದಲು ಬ್ಯಾಟ್ ಮಾಡಿದ್ದ ಸನ್‌ರೈಸರ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್, 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಲಷ್ಟೇ ಶಕ್ತವಾಯಿತು.
ಸನ್‌ರೈಸರ್ಸ್ ನೀಡಿದ್ದ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್, ಆರಂಭದಲ್ಲೇ ಮನದೀಪ್ ಸಿಂಗ್ ಅವರನ್ನು ಕಳೆದುಕೊಂಡಿತು. ಆದರೂ, ಮತ್ತೊಬ್ಬ ಆರಂಭಿಕ ಗಿಲ್‌ಕ್ರಿಸ್ಟ್ (26), ಮೂರನೇ ಕ್ರಮಾಂಕದ ಶೇನ್ ಮಾರ್ಷ್ ಜೊತೆ 2ನೇ ವಿಕೆಟ್‌ಗೆ 44 ರನ್ ಸೇರಿಸಿದರು. ಆದರೆ, 8ನೇ ಓವರ್‌ನಲ್ಲಿ ಈ ಇಬ್ಬರೂ ಔಟಾದರು.
ಆನಂತರ, ತಂಡದ ಪರವಾಗಿ ಪೊಮರ್‌ಬ್ಯಾಚ್ (33), ರಾಜಗೋಪಾಲ್ ಸತೀಶ್ (25) ಬಿರುಸಾಗಿ ಬ್ಯಾಟ್ ಬೀಸಿದರಾದರೂ, ಅವರಿಗೆ ಕ್ರೀಸ್‌ನಲ್ಲಿ ಉತ್ತಮ ಬೆಂಬಲ ಲಭ್ಯವಾಗಲಿಲ್ಲ. ಅಂತಿಮವಾಗಿ, ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 120 ರನ್ ಮಾತ್ರ ಗಳಿಸಿತು.
ಇದಕ್ಕೂ ಮುನ್ನ ಟಾಸ್ ಗೆದ್ದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಮೊದಲು ಸನ್‌ರೈಸರ್ಸ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ಪಾರ್ಥೀವ್ ಪಟೇಲ್ ಹಾಗೂ ಶಿಖರ್ ಧವನ್ ಇಬ್ಬರೂ ಉತ್ತಮವಾಗಿ ಇನಿಂಗ್ಸ್ ಆರಂಭಿಸಿದರೂ, ಮೊದಲ ವಿಕೆಟ್‌ಗೆ ಕೇವಲ 28 ರನ್ ಸೇರಿಸುವಷ್ಟರಲ್ಲಿ ಈ ಜೋಡಿ ಬೇರ್ಪಟ್ಟಿತು.
ಶಿಖರ್ ಧವನ್ ಹರ್ಮೀತ್ ಸಿಂಗ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ನಿರ್ಗಮಿಸಿದರು. ಶಿಖರ್ ವಿಕೆಟ್ ಬೀಳುತ್ತಲೇ, ಸನ್‌ರೈಸರ್ಸ್ ತಂಡ ಮೂರನೇ ಕ್ರಮಾಂಕದ ಹನುಮ ವಿಹಾರಿ ವಿಕೆಟ್ ಒಪ್ಪಿಸಿದರು.
ಏಳನೇ ಓವರ್‌ನ ಅಂತ್ಯಕ್ಕೆ ಎರಡು ವಿಕೆಟ್‌ಗಳನ್ನು (ಕೆಮೆರೂನ್ ವೈಟ್ ಹಾಗೂ ಸಾಮಾಂತ್ರೇ) ಕಳೆದುಕೊಂಡ ಸನ್‌ರೈಸರ್ಸ್, 8ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮತ್ತೊಂದು ವಿಕೆಟ್ (ಡರೇನ್ ಸಾಮಿ) ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ, ತಂಡದ ಮೊತ್ತ ಕೇವಲ 52 ರನ್.
ಪೆರೇರಾ ಆರ್ಭಟ: ಹೀಗೆ, ಅಲ್ಲಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಸಾಗಿದ ಸನ್‌ರೈಸರ್ಸ್‌ಗೆ ಆಸರೆಯಾಗಿದ್ದು, ಮಧ್ಯಮ ಕ್ರಮಾಂಕದ ತಿಸರಾ ಪೆರೇರಾ.
ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು, ಕೇವಲ 19 ಎಸೆತಗಳಲ್ಲಿ, 32 ರನ್ ಬಾರಿಸಿ ತಂಡದ ಮೊತ್ತ 150 ಗಡಿಗೆ ಬಂದು ನಿಲ್ಲಲು ಸಹಕರಿಸಿದರು.

ಸ್ಕೋರ್ ಬೋರ್ಡ್



ಸನ್‌ರೈಸರ್ಸ್ ಹೈದರಾಬಾದ್ 150/7 (20 ಓವರ್)
ಪಟೇಲ್ ರನೌಟ್ (ಸತೀಶ್/ಹರ್ಮಿತ್) 61(47), ಧವನ್ ಸಿ ಮತ್ತು ಬಿ ಹರ್ಮಿತ್ ಸಿಂಗ್ 15(14), ವಿಹಾರಿ ಸಿ ಮಿಲ್ಲರ್ ಬಿ ಸಂದೀಪ್ 5(7), ವೈಟ್ ಎಲ್‌ಬಿಡಬ್ಲ್ಯೂ ಬಿ ಸಂದೀಪ್ 10(8), ಸಮಂತ್ರೆ ಬಿ ಸಂದೀಪ್ 0(1), ಸಾಮಿ ಎಲ್‌ಬಿಡಬ್ಲ್ಯೂ ಬಿ ಚಾವ್ಲಾ 0(3), ಕರಣ್ ಸಿ ಗಿಲ್‌ಕ್ರಿಸ್ಟ್ ಬಿ ಅವಾನ 22(18), ಪೆರೇರಾ ಅಜೇಯ 33(19), ಸ್ಟೇಯ್ನ್ ಅಜೇಯ 1(3)
ವಿಕೆಟ್ ಪತನ: 1-28, 2-33, 3-51, 4-51, 5-52, 6-94, 7-142
ಬೌಲಿಂಗ್: ಪ್ರವಿಣ್ 4-0-32-0, ಅವಾನ 4-0-35-1, ಹರ್ಮಿತ್ 4-0-39-1, ಸಂದೀಪ್ 4-0-21-3, ಚಾವ್ಲಾ 4-0-20-1.
ಕಿಂಗ್ಸ್ ಇಲೆವೆನ್ ಪಂಜಾಬ್ 120/9 (20 ಓವರ್)
ಗಿಲ್‌ಕ್ರಿಸ್ಟ್ ಬಿ ಸಾಮಿ 26(22), ಮಂದೀಪ್ ಸಿ ವೈಟ್ ಬಿ ಸ್ಟೇಯ್ನ್ 0(2), ಮಾರ್ಷ್ ಸಿ ಪೆರೇರಾ ಬಿ ಸಾಮಿ 18(20), ಪೊಮರ್ಸ್‌ಬ್ಯಾಚ್ ಅಜೇಯ 33(40), ಮಿಲ್ಲರ್ ಸಿ ವೈಟ್ ಬಿ ಸಾಮಿ 6(7), ಸತೀಶ್ ರನೌಟ್ (ಪೆರೇರಾ/ಪಟೇಲ್) 25(18), ಚಾವ್ಲಾ ಸಿ ಧವನ್ ಬಿ ಪೆರೇರಾ 0(2), ಪ್ರವಿಣ್ ಬಿ ಸ್ಟೇಯ್ನ್ 1(3), ಹರ್ಮಿತ್ ರನೌಟ್ (ಇಶಾಂತ್/ಸಾಮಿ), ಅವಾನ ಸಿ ಇಶಾಂತ್ ಬಿ ಸಾಮಿ 0(1), ಸಂದೀಪ್ ಅಜೇಯ 0(1)
ವಿಕೆಟ್ ಪತನ: 1-1, 2-45, 3-45, 4-51, 5-102
ಬೌಲಿಂಗ್: ಸ್ಟೇಯ್ನ್ 4-0-20-2     , ಇಶಾಂತ್ 3-0-22-0, ಪೆರೇರಾ 4-0-19-1, ವಿಹಾರಿ 2-0-5-0, ಸಾಮಿ 4-0-22-4, ಕರಣ್ 1-0-6-0, ಮಿಶ್ರಾ 2-0-20-0.
ಪಂದ್ಯಶ್ರೇಷ್ಠ: ಪಾರ್ಥೀವ್ ಪಟೇಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.