ಕ್ರೀಡೆ

ಪಂಜಾಬ್‌ಗೆ ಸ್ಪರ್ಧಾತ್ಮಕ ಸವಾಲು

Published On :

ಚಂಡೀಗಢ:  ಆರಂಭಿಕ ಪಾರ್ಥೀವ್ ಪಟೇಲ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ತಿಸಾರಾ ಪರೇರಾ ಅವರ ಬಿರುಸಿನ ಆಟದ ನೆರವಿನಿಂದಾಗಿ, ಸನ್‌ರೈಸರ್ಸ್ ಹೈದರಾಬಾದ್ ತಂಡ, ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 7 ವಿಕೆಟ್ ನಷ್ಟಕ್ಕೆ 150 ರನ್ ಪೇರಿಸಿತು.
ಪತ್ರಿಕೆ ಮುದ್ರಣಕ್ಕೆ ಹೋಗುವಾಗ ಪಂಜಾಬ್ ತಂಡದ ಇನಿಂಗ್ಸ್ ಇನ್ನೂ ಆರಂಭವಾಗಿರಲಿಲ್ಲ.
ಟಾಸ್ ಗೆದ್ದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಮೊದಲು ಸನ್‌ರೈಸರ್ಸ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ಪಾರ್ಥೀವ್ ಪಟೇಲ್ ಹಾಗೂ ಶಿಖರ್ ಧವನ್ ಇಬ್ಬರೂ ಉತ್ತಮವಾಗಿ ಇನಿಂಗ್ಸ್ ಆರಂಭಿಸಿದರೂ, ಮೊದಲ ವಿಕೆಟ್‌ಗೆ ಕೇವಲ 28 ರನ್ ಸೇರಿಸುವಷ್ಟರಲ್ಲಿ ಈ ಜೋಡಿ ಬೇರ್ಪಟ್ಟಿತು.
ಶಿಖರ್ ಧವನ್ ಹರ್ಮೀತ್ ಸಿಂಗ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ನಿರ್ಗಮಿಸಿದರು. ಶಿಖರ್ ವಿಕೆಟ್ ಬೀಳುತ್ತಲೇ, ಸನ್‌ರೈಸರ್ಸ್ ತಂಡ ಮೂರನೇ ಕ್ರಮಾಂಕದ ಹನುಮ ವಿಹಾರಿ ವಿಕೆಟ್ ಒಪ್ಪಿಸಿದರು.
ಏಳನೇ ಓವರ್‌ನ ಅಂತ್ಯಕ್ಕೆ ಎರಡು ವಿಕೆಟ್‌ಗಳನ್ನು (ಕೆಮೆರೂನ್ ವೈಟ್ ಹಾಗೂ ಸಾಮಾಂತ್ರೇ) ಕಳೆದುಕೊಂಡ ಸನ್‌ರೈಸರ್ಸ್, 8ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮತ್ತೊಂದು ವಿಕೆಟ್ (ಡರೇನ್ ಸಾಮಿ) ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ, ತಂಡದ ಮೊತ್ತ ಕೇವಲ 52 ರನ್.
ಹೀಗೆ, ಪಟಪಟನೇ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಸನ್‌ರೈಸರ್ಸ್‌ಗೆ ದೊಡ್ಡ ಮೊತ್ತ ಪೇರಿಸುವ ಕನಸು ಕೈಗೂಡಲಿಲ್ಲ. ಆದರೂ, ಕರಣ್ ಶರ್ಮಾ ತಂಡದ ಮೊತ್ತ ಹೆಚ್ಚಿಸಲು ಕೊಂಚ ಪ್ರಯತ್ನಿಸಿದರಾದರೂ, ಎದುರಾಳಿ ತಂಡದ ಪರ್ವಿಂದರ್ ಆವಾನಾ ಅದಕ್ಕೆ ಅವಕಾಶ ನೀಡಲಿಲ್ಲ. ಆವಾನಾ ಬೌಲಿಂಗ್‌ನಲ್ಲಿ ಕೀಪರ್ ಗಿಲ್‌ಕ್ರಿಸ್ಟ್‌ಗೆ ಕ್ಯಾಚಿತ್ತ ಶರ್ಮಾ, ಕ್ರೀಸ್‌ನಿಂದ ಆಚೆ ನಡೆದರು. ಆಗ, ತಂಡ 105 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು.  ಶರ್ಮಾ ವಿಕೆಟ್ ಉರುಳಿದ ನಂತರ, ಪೆರೇರಾ ಅವರು ಬಿರುಸಿನ ಬ್ಯಾಟಿಂಗ್ ನಡೆಸಿದರು. ಕೇವಲ 19 ಎಸೆತಗಳಲ್ಲಿ, ಅಜೇಯ 32 ರನ್ ಬಾರಿಸಿದ ಪೆರೇರಾ ಅವರ ಮೊತ್ತದಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ಅವರ ಈ ಉತ್ತಮ ಪ್ರದರ್ಶನದಿಂದಾಗಿ, ಸನ್‌ರೈಸರ್ಸ್ ತಂಡ 150 ರನ್ ಗಡಿ ಮುಟ್ಟಿತು.
ಸ್ಕೋರ್ ಬೋರ್ಡ್
ಸನ್‌ರೈಸರ್ಸ್ ಹೈದರಾಬಾದ್ 150/7 (20 ಓವರ್)
ಪಟೇಲ್ ರನೌಟ್ (ಸತೀಶ್/ಹರ್ಮಿತ್) 61(47), ಧವನ್ ಸಿ ಮತ್ತು ಬಿ ಹರ್ಮಿತ್ ಸಿಂಗ್ 15(14), ವಿಹಾರಿ ಸಿ ಮಿಲ್ಲರ್ ಬಿ ಸಂದೀಪ್ 5(7), ವೈಟ್ ಎಲ್‌ಬಿಡಬ್ಲ್ಯೂ ಬಿ ಸಂದೀಪ್ 10(8), ಸಮಂತ್ರೆ ಬಿ ಸಂದೀಪ್ 0(1), ಸಾಮಿ ಎಲ್‌ಬಿಡಬ್ಲ್ಯೂ ಬಿ ಚಾವ್ಲಾ 0(3), ಕರಣ್ ಸಿ ಗಿಲ್‌ಕ್ರಿಸ್ಟ್ ಬಿ ಅವಾನ 22(18), ಪೆರೇರಾ ಅಜೇಯ 33(19), ಸ್ಟೇಯ್ನ್ ಅಜೇಯ 1(3)
ವಿಕೆಟ್ ಪತನ: 1-28, 2-33, 3-51, 4-51, 5-52, 6-94, 7-142
ಬೌಲಿಂಗ್: ಪ್ರವಿಣ್ 4-0-32-0, ಅವಾನ 4-0-35-1, ಹರ್ಮಿತ್ 4-0-39-1, ಸಂದೀಪ್ 4-0-21-3, ಚಾವ್ಲಾ 4-0-20-1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.