ಕ್ರೀಡೆ

ರಾಜ್ಯಮಟ್ಟದ ಬ್ಯಾಡ್ಮಿಂಟನ್: ಆಶ್ಮಾ ಪಿಂಟೋಗೆ ಪ್ರಶಸ್ತಿ

Published On :

ಮಣಿಪಾಲ: ಮಣಿಪಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಶನಿವಾರ ಮತ್ತು ಭಾನುವಾರ ನಡೆದ 12ನೇ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್- 2013 ಪಂದ್ಯಾವಳಿಯ 14 ವರ್ಷದೊಳಗಿನ ಬಾಲಕಿಯ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಗ್ಲಾನ್ಸಿಯಾ ಆಶ್ಮಾ ಪಿಂಟೋ ಪ್ರಶಸ್ತಿ ಪಡೆದಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು ನೆರೆಯ ಮಂಗಳೂರು ಜಿಲ್ಲೆಯ ಅನ್ವಿತಾ ಶೆಟ್ಟಿ ಅವರನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರು. 13 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ತೇಜಸ್ ಸಂಜಯ್ ಕಲ್ಲೋಲ್ಕರ್ (ಬೆಳಗಾವಿ) ಪ್ರಥಮ, ಅಜಿಂಕ್ಯಾ ಜಿ. ಜೋಷಿ (ಬೆಳಗಾವಿ) ದ್ವಿತೀಯ ಸ್ಥಾನ ಪಡೆದರು. 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಗ್ಲಾನೀಶ್ ಆಶ್ಲೇ ಪಿಂಟೋ (ಉಡುಪಿ) ಪ್ರಥಮ ಹಾಗೂ ಅಭಯ್ ಪೈ (ಮಂಗಳೂರು) ದ್ವೀತಿಯ ಬಹುಮಾನ ಗಳಿಸಿದ್ದಾರೆ. 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅನೀಶ್ ಉಪಾಧ್ಯೆ (ಬೆಳಗಾವಿ) ಪ್ರಥಮ ಹಾಗೂ ಗ್ಲಾನೀಶ್ ಆಶ್ಲೇ ಪಿಂಟೋ (ಉಡುಪಿ) ದ್ವಿತೀಯ ಸ್ಥಾನ ಗಳಿಸಿದ್ದಾರೆ. 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅನೀಶ್ ಉಪಾಧ್ಯೆ (ಬೆಳಗಾವಿ) ಪ್ರಥಮ ಹಾಗೂ ಚಿರಾಗ್ ಶೆಟ್ಟಿ(ಮಂಗಳೂರು) ದ್ವಿತೀಯ, ಮಹಿಳಾ ಮುಕ್ತ ವಿಭಾಗದಲ್ಲಿ ರೋಶನಿ ಶೆಟ್ಟಿ (ಮಂಗಳೂರು) ಪ್ರಥಮ ಹಾಗೂ ನೇಹಾ ಜಿ. (ಮಂಗಳೂರು) ದ್ವಿತೀಯ ಸ್ಥಾನ ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.