ಸುದ್ದಿ ಸಂಕ್ಷೇಪ
ಅರ್ಹತಾ ಟೂರ್ನಿಗೆ ತಂಡ ಪ್ರಕಟ
ನವದೆಹಲಿ: ಏಷ್ಯನ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಟೂರ್ನಿಗೆ ತೆರಳಲಿರುವ ಭಾರತೀಯ ಮಹಿಳೆಯರ ತಂಡವನ್ನು ಹೆಸರಿಸಲಾಗಿದೆ. ಭಾರತೀಯ ಫುಟ್ಬಾಲ್ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿರುವ ಭಾರತೀಯ ಮಹಿಳೆಯರ ತಂಡಕ್ಕೆ ಪಶ್ಚಿಮ ಬಂಗಾಳದ ತುಳಿ ಗೂನ್ ಸಾರಥ್ಯವನ್ನು ವಹಿಸಿದ್ದಾರೆ. ರೇಲ್ವೇಸ್ ತಂಡದ ಮಿಡ್ ಫೀಲ್ಡರ್ ಸಸ್ಮಿತಾ ಮಲಿಕ್ ಅವರು ತಂಡದ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪಂದ್ಯಾವಳಿಗಾಗಿ ಬಹರೇನ್ಗೆ ತೆರಳಲಿರುವ ತಂಡ, ಅಲ್ಲಿ ಮೇ 14ರಿಂದ 16ರವರೆಗೆ ಪ್ರಿಪರೇಟರಿ ಪಂದ್ಯಗಳನ್ನು ಆಡಲಿದೆ.
ಮಾಜೆನ್ಗೆ ಸ್ಕ್ವಾಷ್ ಕಿರೀಟ
ನವದೆಹಲಿ: ನಗರದಲ್ಲಿ ನಡೆಯುತ್ತಿದ್ದ ಸಿಸಿಐ ಪಿಎಸ್ಎ ಸ್ಕ್ವಾಷ್ ಚಾಂಪಿಯನ್ಷಿಪ್ ಅನ್ನು ಮಾಜೆನ್ ಹಿಶಾಮ್ ಅವರು ಗೆದ್ದುಕೊಂಡಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು, ಈಜಿಪ್ಟ್ನ ಮಹಮ್ಮದ್ ಅಲಿ ಅನ್ವರ್ ಅವರನ್ನು 11-6, 11-9, 11-9 ಅಂತರದಲ್ಲಿ ಸೋಲಿಸಿದರು.
ಆರು ಕ್ರೀಡಾಳುಗಳ ವಿರುದ್ಧ ಕ್ರಮ
ನವದೆಹಲಿ: ಉದ್ದೀಪನಾ ಮದ್ದು ಸೇವನೆ ಗುಮಾನಿ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ಆರಂಭಗೊಳ್ಳಲಿರುವ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಬೇಕಿದ್ದ ಆರು ಕ್ರೀಡಾಳುಗಳನ್ನು ಭಾರತೀಯ ಕುಸ್ತಿ ಫೆಡರೇಷನ್ ಅನರ್ಹಗೊಳಿಸಿದೆ. ರಾಹುಲ್ ಪಾಲ್ (48 ಕೆಜಿ), ಅಮಿತ್ (74 ಕೆಜಿ), ಸಂದೀಪ್ (60 ಕೆಜಿ), ಸುನಿಲ್ ಕುಮಾರ್ (120 ಕೆಜಿ), ಅನೂಪ್ (84 ಕೆಜಿ) ಹಾಗೂ ಮಂಜೀತ್ (84 ಕೆಜಿ) ಅವರುಗಳು ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಷಿಪ್ನಿಂದ ವಂಚಿತರಾದ ಆಟಗಾರರು. ಉದ್ದೀಪನಾ ಮದ್ದು ಸೇವನೆ ಪರೀಕ್ಷೆಗೆ ರಕ್ತ ಹಾಗೂ ಮೂತ್ರದ ನಮೂನೆಗಳನ್ನು ಈ ಆಟಗಾರರು ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ, ಭಾರತೀಯ ಕುಸ್ತಿ ಫೆಡರೇಷನ್ ಈ ಕ್ರಮ ಕೈಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

