ಕ್ರೀಡೆ

ಸೆರೆನಾ, ನಡಾಲ್ ಚಾಂಪಿಯನ್ಸ್

ಸೆರೆನಾ, ನಡಾಲ್ ಚಾಂಪಿಯನ್ಸ್
ರಾಫೆಲ್ ನಡಾಲ್ , ಸೆರೆನಾ ವಿಲಿಯಮ್ಸ್
Published On :

ಮಾಡ್ರಿಡ್: ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಹಾಗೂ ಸ್ಪೇನ್‌ನ ರಾಫೆಲ್ ನಡಾಲ್ ಅವರು ಮ್ಯಾಡ್ರಿಡ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸೆರೆನಾ, ಮಾರಿಯಾ ಶರಪೊವಾ ಅವರನ್ನು 6-1, 6-4 ಅಂತರದಲ್ಲಿ ಸೋಲಿಸಿದರೆ, ನಡಾಲ್ ಅವರು ವಾವ್ರಿಂಕಾ ವಿರುದ್ಧ 6-2, 6-4 ಅಂತರದಲ್ಲಿ ಜಯ ಸಾಧ ಇದು ಸೆರೆನಾ ಅವರ ವೃತ್ತಿಜೀವನದಲ್ಲಿ ಅವರು ಗಳಿಸಿರುವ 50ನೇ ಪ್ರಶಸ್ತಿಯಾಗಿದೆ.
ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಸೆರೆನಾ, ಪಂದ್ಯದ ಆರಂಭದಿಂದಲೂ ಮಾರಿಯಾ ವಿರುದ್ಧ ಸಮರ ಸಾರಿದ್ದರು. ವಿಶ್ವದ ಎರಡನೇ ಶ್ರೇಯಾಂಕ ಹೊಂದಿರುವ ಮಾರಿಯಾಗೆ ಸೆರೆನಾ ಅವರನ್ನು ಎದುರಿಸಲು ಸಾಕಷ್ಟು ಕಷ್ಟಪಡಬೇಕಾಯಿತು.
ಮೊದಲ ಸೆಟ್‌ನಲ್ಲಿ ಆರ್ಭಟಿಸಿದ ಸೆರೆನಾ, ಮಾರಿಯಾ ವಿರುದ್ಧ 6-1ರ ಗೆಲವು ಪಡೆದರು.  ಆದರೆ, ಎರಡನೇ ಸೆಟ್‌ನಲ್ಲಿ ಮಾರಿಯಾ, ಸೆರೆನಾ ವಿರುದ್ಧ ತಿರುಗಿಬಿದ್ದರು. ಆದರೆ, ಮಾರಿಯಾ ಸುಲಭವಾಗಿ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ. ಮಾರಿಯಾಗೆ ಸೆಡ್ಡು ಹೊಡೆದ ಅವರು,ಪಂದ್ಯದಲ್ಲಿ ಜಯಬೇರಿ ಬಾರಿಸಿದರು. ಈ ಜಯದಿಂದ ಸೆರೆನಾ, ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
ನಡಾಲ್ ಜಯಭೇರಿ: ವಾವ್ರಿಂಕಾ ಅವರನ್ನು ಫೈನಲ್‌ನಲ್ಲಿ ಎದುರಿಸಿದ ನಡಾಲ್, 6-2, 6-4 ಅಂತರದ ಜಯ ಕಂಡುಕೊಂಡರು.
ಮೊಣಕಾಲು ಗಾಯದಿಂದ ಚೇತರಿಸಿಕೊಂಡು ವೃತ್ತಿಪರ ಟೆನಿಸ್‌ಗೆ ಈ ವರ್ಷ ವಾಪಸ್ಸಾದ ನಂತರ, ಅವರು ಗೆದ್ದಿರುವ ಐದನೇ ಪ್ರಶಸ್ತಿಯಿದು.
ಕ್ಲೇ-ಕೋರ್ಟ್‌ನಲ್ಲಿ ನಡೆದ ವಾವ್ರಿಂಕಾ ಹಾಗೂ ಅವರ ನಡುವೆ ನಡೆದ ಪಂದ್ಯ ರೋಚಕವಾಗಿತ್ತು. ಪಂದ್ಯದ ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದ ಅವರು, ಕೇವಲ 1 ಗಂಟೆ 11 ನಿಮಿಷಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.