ಕ್ರೀಡೆ

ಆರ್‌ಸಿಬಿ ಹರಶಿವ

Published On :

ರಾಂಚಿ: ಮಂದಗತಿಯ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಮೇಲೆ ದಾಳಿ ಮಾಡಿದ ಕೋಲ್ಕತಾ ನೈಟ್‌ರೈಡರ್ಸ್ ಬೌಲರ್‌ಗಳು, ತಂಡ ಗೆಲವಿನ ನಗೆ ಬೀರುವಲ್ಲಿ ಪ್ರಮುಖ ಪಾತ್ರವಹಿಸಿದರು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ 20 ಓವರ್‌ಗಳಲ್ಲಿ ಆರ್‌ಸಿಬಿ ತಂಡವನ್ನು ಕೇವಲ 115 ರನ್‌ಗಳಿಗೆ ನಿಯಂತ್ರಿಸಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡ 19.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 116 ರನ್‌ಗಳಿಸಿ ಜಯದ ನಗೆ ಬೀರಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡದ ಪರ ಪೂಜಾರ (5), ಗೇಯ್ಲ್ (33), ಕೊಹ್ಲಿ (17), ಡಿವಿಲಿಯರ್ಸ್ (28), ಹೆನ್ರಿಕೇಸ್ (11), ಸೌರಬ್ (1) ರನ್‌ಗಳನಷ್ಟೇ ಗಳಿಸಿದರು. ಅಂತಿಮವಾಗಿ ವಿನಯ್ ಕುಮಾರ್ ಅಜೇಯ 14 ರನ್‌ಗಳಿಸಿದರು. ಹಾಗಾಗಿ ತಂಡ 120 ರನ್ ಗಡಿ ದಾಟಲು ವಿಫಲವಾಯಿತು.
ನಂತರ ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ಕಾಲಿಸ್ (41) ಹಾಗೂ ಮನೋಜ್ ತಿವಾರಿ (24) ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ ಗೆಲವಿನ ದಡ ಸೇರಿತು.
ಇನ್ನು 2.2ನೇ ಓವರ್‌ನಲ್ಲಿ ಕಾಲಿಸ್, ರಾಮ್‌ಪಾಲ್ ಎಸೆತದಲ್ಲಿ ಫೈನ್‌ಲೆಗ್ ಕಡೆ ಹೊಡೆದರು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಭಿಮನ್ಯು ಮಿಥುನ್ ಚೆಂಡನ್ನು ಸರಿಯಾಗಿ ಗ್ರಹಿಸದೆ ಕ್ಯಾಚ್ ಹಿಡಿಯುವ ಅವಕಾಶ ಕೈಚೆಲ್ಲಿದರು. ಈ ಒಂದು ತಪ್ಪು ತಂಡಕ್ಕೆ ಹೆಚ್ಚು  ಪರಿಣಾಮ ಬೀರಿತು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಆಲ್ರೌಂಡರ್ ಪ್ರದರ್ಶನ ನೀಡಿದ ಜಾಕ್ ಕಾಲಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಸ್ಕೋರ್ ಬೋರ್ಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 115/9 (20 ಓವರ್)
ಪೂಜಾರ ಸಿ ಬಾಲಾಜಿ ಬಿ ಸೇನನಾಯಕೆ 5(14), ಗೇಯ್ಲ್ ಸ್ಟಂಪ್ ಬಿಸ್ಲಾ ಬಿ ನಾರಾಯಣ್ 33(36), ಕೊಹ್ಲಿ ಬಿ ಕಾಲಿಸ್ 17(14), ಡಿವಿಲಿಯರ್ಸ್ ಸಿ ಬಿಸ್ಲಾ ಬಿ ಬಾಲಾಜಿ 28(22), ಹೆನ್ರಿಕೇಸ್ ಸಿ ತಿವಾರಿ ಬಿ ಕಾಲಿಸ್ 11(11), ಸೌರಬ್ ಎಲ್‌ಬಿಡಬ್ಲ್ಯೂ ಬಿ ನಾರಾಯಣ್ 1(3), ವಿನಯ್ ಅಜೇಯ 14(13), ರಾಮ್‌ಪಾಲ್ ಎಲ್‌ಬಿಡಬ್ಲ್ಯೂ ಬಿ ನಾರಾಯಣ್ 0(3), ಮಿಥುನ್ ಸಿ ತಿವಾರಿ ಬಿ ನಾರಾಯಣ್ 2(2), ಕಾರ್ತಿಕ್ ಬಿ ಬಾಲಾಜಿ 0(1), ಉನಾದ್ಕತ್ ಅಜೇಯ 1(1), ಇತರೆ 3
ವಿಕೆಟ್ ಪತನ: 1-15, 2-46, 3-70, 4-95, 5-96, 6-102, 7-106, 8-108, 9-112
ಬೌಲಿಂಗ್: ಸೇನನಾಯಕೆ 4-0-18-1, ಬಾಲಾಜಿ 4-0-22-2, ನಾರಾಯಣ್ 4-0-22-4, ಕಾಲಿಸ್ 4-0-17-2, ಡಸ್ಕೆಟ್ 1-0-14-0, ಪಠಾಣ್ 1-0-6-0, ಭಾಟಿಯಾ 2-0-14-0
ಕೋಲ್ಕತಾ ನೈಟ್‌ರೈಡರ್ಸ್ 116/5 (19.2 ಓವರ್)
ಬಿಸ್ಲಾ ಸಿ ಹೆನ್ರಿಕೇಸ್ ಬಿ ರಾಮ್‌ಪಾಲ್ 0(2), ಗಂಭೀರ್ ಸಿ ಗೇಯ್ಲ್ ಬಿ ವಿನಯ್ 14(15), ಕಾಲಿಸ್ ಸಿ ಹೆನ್ರಿಕೇಸ್ ಬಿ ಮಿಥುನ್ 41(45), ಪಠಾಣ್ ಎಲ್‌ಬಿಡಬ್ಲ್ಯೂ ಬಿ ಕಾರ್ತಿಕ್ 18(16), ತಿವಾರಿ ಸಿ ಕೊಹ್ಲಿ ಬಿ ವಿನಯ್ 24(27), ಡಸ್ಕೆಟ್ ಅಜೇಯ 11(7), ಭಾಟಿಯಾ ಅಜೇಯ 3(4), ಇತರೆ 5.
ವಿಕೆಟ್ ಪತನ: 1-0, 2-31, 3-61, 4-96, 5-103
ಬೌಲಿಂಗ್: ರಾಮ್‌ಪಾಲ್ 4-1-17-1, ಮಿಥುನ್ 4-0-37-1, ಉನಾದ್ಕತ್ 4-0-27-0, ವಿನಯ್ 3.2-0-17-2, ಕಾರ್ತಿಕ್ 4-0-17-1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.