ಕ್ರೀಡೆ

ಪಾರ್ಥೀವ್ ಪ್ರದರ್ಶನ ಮೆಚ್ಚಿದ ಮೂಡಿ

Published On :

ಮೊಹಾಲಿ: ಪಂಜಾಬ್ ವಿರುದ್ಧ ಪ್ರಬುದ್ಧ ಬ್ಯಾಟಿಂಗ್ ನಡೆಸಿದ ಪಾರ್ಥೀವ್ ಪಟೇಲ್ ಅವರ ಪ್ರದರ್ಶನಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಟಾಮ್ ಮೂಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪಾರ್ಥೀವ್ ಈ ಪಂದ್ಯದಲ್ಲಿ ಉತ್ತಮ ಇನಿಂಗ್ಸ್ ಕಟ್ಟಿದ್ದು ಅವರ ಪ್ರದರ್ಶನ ತಂಡಕ್ಕೆ ನೆರವಾಗಿದೆ. ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದಾಗಿ ನಾವು ನಮ್ಮ ಗುರಿ ಮುಟ್ಟಿದೆವು ಎಂದು ಮೂಡಿ ತಿಳಿಸಿದರು.
ನಮ್ಮ ತಂಡ ಪಂದ್ಯಾವಳಿಯಲ್ಲಿ ಪ್ಲೇ ಆಫ್ ಹಂತವನ್ನು ತಲುಪಲು ಕಡಿಮೆ ಅವಕಾಶಗಳಿದ್ದು, ಈ ವೇಳೆ ಈ ರೀತಿಯಾದಂತಹ ಜವಾಬ್ದಾರಿಯುತ ಪ್ರದರ್ಶನ ತಂಡಕ್ಕೆ ನೆರವಾಗಲಿದೆ ಎಂದು ಮೂಡಿ ತಿಳಿಸಿದರು.
ನಾವು ನಮ್ಮ ಜಯದ ಲಯವನ್ನು ಮುಂದುವರಿಸಲು ಅಗತ್ಯವಾದ ಪ್ರದಶಂನ ನೀಡುತ್ತೇವೆ ಎಂದು ತಿಳಿಸಿದರು.
ಪಂದ್ಯಾವಳಿಯ ಈ ಹಂತದಲ್ಲಿ ನಮ್ಮ ತಂಡದ ಬ್ಯಾಟಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ಧನಾತ್ಮಕ ವಿಷಯವಾಗಿದೆ. ಅಲ್ಲದೇ ನಮ್ಮ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಫೀಲ್ಡಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದೆವು. ಇದೇ ರೀತಿಯ ಪ್ರದರ್ಶನವನ್ನು ಮುಂದಿನ ದಿನಗಳಲ್ಲೂ ಮುಂದುವರಿಸುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.