ಪೊಲಾರ್ಡ್ ಪರಾಕ್ರಮ
ಮುಂಬೈ: ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೀರನ್ ಪೊಲಾರ್ಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಕೇವಲ 27 ಎಸೆತಗಳನ್ನು ಎದುರಿಸಿದ ಪೊಲಾರ್ಡ್ 8 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದಾಗಿ ಅಜೇಯ 66ರನ್ಗಳಿಸಿದ್ದು, ತಂಡವನ್ನು ಸೋಲಿನ ದವಡೆಯಿಂದ ಪಾರುಮಾಡಿ, ಗೆಲವಿನ ನಗೆ ಬೀರುವಂತೆ ಮಾಡಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಿತು.
ಆರಂಭಿಕರಾಗಿ ಕಣಕ್ಕಿಳಿದ ಪಾರ್ಥೀವ್ ಪಟೇಲ್ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಕೇವಲ 14 ಎಸೆತಗಳನ್ನು ಎದುರಿಸಿದ ಪಾರ್ಥೀವ್ 26 ರನ್ಗಳಿಸಿದರು. ಈ ವೇಳೆ ಮಾಲಿಂಗಾ ಎಸೆತದಲ್ಲಿ ರಾಯುಡುಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ ಧವನ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಕೇವಲ 41 ಎಸೆತಗಳಲ್ಲಿ 59 ರನ್ ಕಲೆ ಹಾಕಿದರು. ಎರಡನೇ ವಿಕೆಟ್ಗೆ ವಿಹಾರಿ ಜತೆಗೆ 73 ರನ್ಗಳ ಜತೆಯಾಟ ವಾಡಿದ ಧವನ್, ಜಾನ್ಸನ್ ಎಸೆತದಲ್ಲಿ ಕಾರ್ತಿಕ್ಗೆ ನೀಡಿದರು. ನಂತರ ಜತೆಯಾದ ವಿಹಾರಿ ಹಾಗೂ ನಾಯಕ ವೈಟ್ 3ನೇ ವಿಕೆಟ್ಗೆ 55 ರನ್ ಜತೆಯಾಟವಾಡಿದರು. ಈ ವೇಳೆ 41 ರನ್ಗಳಿಸಿದ್ದ ವಿಹಾರಿ ಮಾಲಿಂಗಾ ಎಸೆತದಲ್ಲಿ ಜಾನ್ಸನ್ಗೆ ಕ್ಯಾಚ್ ನೀಡಿ ಔಟಾದರು. ಅಂತಿಮವಾಗಿ ಅಜೇಯರಾಗುಳಿದ ವೈಟ್ 43 ಹಾಗೂ ಪೆರೇರಾ 2 ರನ್ಗಳಿಸಿದರು.
ರೈಸರ್ಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡ 19.3 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 184 ರನ್ಗಳಿಸುವ ಮೂಲಕ ಗೆಲವಿನ ನಗೆ ಬೀರಿದರು.
ಆರಂಭಿಕರಾಗಿ ಕಣಕ್ಕಿಳಿದ ಸ್ಮಿತ್ ಹಾಗೂ ತೆಂಡೂಲ್ಕರ್ ತಂಡಕ್ಕೆ ಕೇವಲ 26ರನ್ಗಳ ಜತೆಯಾಟವಾಡಿದರು. ನಂತರ ಈ ವೇಳೆ ಇಶಾಂತ್ ಎಸೆತದಲ್ಲಿ ಬೌಲ್ಡ್ ಆದ ಸ್ಮಿತ್ 21ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು.
ನಂತರ ಸಚಿನ್ ಜತೆ ಸೇರಿದ ದಿನೇಶ್ ಕಾರ್ತಿಕ್ 88 ರನ್ಗಳ ಜತೆಯಾಟ ನೀಡಿದರು. ಈ ವೇಳೆ ಗಾಯಗೊಂಡ ಸಚಿನ್ ರಿಟೈರ್ಡ್ ಹರ್ಟ್ ಆಗುವ ಮೂಲಕ ಈ ಜೋಡಿ ಮುರಿಯಿತು.
ನಂತರ 30 ರನ್ಗಳಿಸಿದ್ದ ದಿನೇಶ್ ಕಾರ್ತಿಕ್, ಕರಣ್ ಶರ್ಮಾಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದಾದ ಕೆಲವೇ ಹೊತ್ತಿನಲ್ಲಿ ರಾಯುಡು 2 ರನ್ಗಳಿಸಿ ಸ್ಟಂಪ್ ಔಟಾದರು.
ಈ ವೇಳೆ 40 ಎಸೆತಗಳಲ್ಲಿ 80 ರನ್ಗಳ ಅಗತ್ಯವಿದ್ದಾಗ ಕ್ರೀಸ್ನಲ್ಲಿ ಜತೆಯಾದ ರೋಹಿತ್ ಶರ್ಮಾ ಹಾಗೂ ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡವನ್ನು ಜಯದ ದಡ ಸೇರಿಸಿದರು.
ಸ್ಕೋರ್ ಬೋರ್ಡ್
ಸನ್ರೈಸರ್ಸ್ ಹೈದರಾಬಾದ್ 178/3 (20 ಓವರ್)
ಪಟೇಲ್ ಸಿ ರಾಯುಡು ಬಿ ಮಾಲಿಂಗಾ 26(14), ಧವನ್ ಸಿ ಕಾರ್ತಿಕ್ ಬಿ ಜಾನ್ಸನ್ 59(41), ವಿಹಾರಿ ಸಿ ಜಾನ್ಸನ್ ಬಿ ವಿಹಾರಿ 41(37), ವೈಟ್ ಅಜೇಯ 43(23), ಪೆರೇರಾ ಅಜೇಯ 2(5), ಇತರೆ 7
ವಿಕೆಟ್ ಪತನ: 1-38, 2-111, 3-166
ಬೌಲಿಂಗ್: ಜಾನ್ಸನ್ 4-0-43-1, ಕುಲ್ಕರ್ಣಿ 4-0-42-0, ಹರ್ಭಜನ್ 3-0-19-0, ಮಾಲಿಂಗಾ 4-0-26-2, ಓಜಾ 4-0-37-0, ಪೊಲಾರ್ಡ್ 1-0-10-0
ಮುಂಬೈ ಇಂಡಿಯನ್ಸ್ 184/3 (19.3 ಓವರ್)
ಸ್ಮಿತ್ ಬಿ ಇಶಾಂತ್ 21(17), ತೆಂಡೂಲ್ಕರ್ (ರಿಟೈರ್ಡ್ ಹರ್ಟ್) 38(31), ಕಾರ್ತಿಕ್ ಸಿ ವೈಟ್ ಬಿ ಕರಣ್ 30(23), ಶರ್ಮಾ ಅಜೇಯ 20(15), ರಾಯುಡು ಸ್ಟಂಪ್ ಪಟೇಲ್ ಬಿ ಕರಣ್ 2(5), ಪೊಲಾರ್ಡ್ ಅಜೇಯ 66(27), ಇತರೆ 7
ವಿಕೆಟ್ ಪತನ: 1-26, 1-94 (ಸಚಿನ್ ರಿಟೈರ್ಡ್ ಹರ್ಟ್), 2-95, 3-99
ಬೌಲಿಂಗ್: ಸ್ಟೇಯ್ನ್ 4-0-23-0, ಇಶಾಂತ್ 4-0-32-1, ಪೆರೇರಾ 3.3-0-55-0, ಸಾಮಿ 2-0-15-0, ಮಿಶ್ರಾ 3-0-36-0, ಕರಣ್ 3-0-22-2
ಪಂದ್ಯ ಶ್ರೇಷ್ಠ ಕೀರನ್ ಪೊಲಾರ್ಡ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

