ಚಿನ್ನಸ್ವಾಮಿಯಲ್ಲಿ ಇಂದು ಚಾಲೆಂಜರ್ಸ್ಗೆ ಅಗ್ನಿ ಪರೀಕ್ಷೆ

ಬೆಂಗಳೂರು: ಪ್ಲೇ ಆಫ್ ಹಂತದ ಹೊಸ್ತಿಲಲ್ಲಿ ನಿಂತು ಪಂದ್ಯಾವಳಿಯ ಪ್ರಮುಖ ಸುತ್ತಿಗೆ ಪ್ರವೇಶಿಸಲು ಹವಣಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಂಗಳವಾರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ. ಹಾಗಾಗಿ ಈ ಪಂದ್ಯ ಆರ್ಸಿಬಿಗೆ ಅಗ್ನಿ ಪರೀಕ್ಷೆಯಾಗಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ಲೇ ಆಫ್ ಸುತ್ತಿನ ಆಸೆಯನ್ನು ಕೈಬಿಟ್ಟಿದ್ದು, ಯಾವುದೇ ಒತ್ತಡವಿಲ್ಲದೆ ಆತಿಥೇಯ ತಂಡವನ್ನು ಎದುರಿಸಲಿದೆ. ಇನ್ನು ಆರ್ಸಿಬಿ ವಿರುದ್ಧ ಆಡಿದ ಕಳೆದ ಪಂದ್ಯದಲ್ಲಿ ಪಂಜಾಬ್ ತಂಡ 191 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿ ಜಯಸಾಧಿಸಿದ್ದು, ಮತ್ತೇ ಗೆಲವಿನ ನಗೆ ಬೀರುವ ವಿಶ್ವಾಸದಲ್ಲಿದೆ.
ಬೆಂಗಳೂರು ತಂಡದಲ್ಲಿ ಕ್ರಿಸ್ ಗೇಯ್ಲ್, ವಿರಾಟ್ ಕೊಹ್ಲಿ, ಹೆನ್ರಿಕೇಸ್, ಡಿವಿಲಿಯರ್ಸ್ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ಆರ್ಸಿಬಿ ಪ್ಲಸ್ ಪಾಯಿಂಟ್. ಇನ್ನು ಬೌಲಿಂಗ್ ವಿಭಾಗದಲ್ಲೂ ಆರ್ಸಿಬಿ ತಂಡ ವಿನಯ್, ರಾಮ್ಪಾಲ್, ಉನಾದ್ಕತ್, ಹೆನ್ರಿಕೇಸ್ ಉತ್ತಮ ಪ್ರದರ್ಶನ ನೀಡುತಿದ್ದಾರೆ. ಆದರೆ ಕಳೆದ ಕೆಲವು ಪಂದ್ಯಗಳಲ್ಲಿ ತಂಡದ ಕ್ಷೇತ್ರರಕ್ಷಣೆ ತಂಡದ ಸೋಲಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ.
ಇನ್ನು ಪಂಜಾಬ್ ತಂಡದಲ್ಲಿ ಶಾನ್ ಮಾರ್ಷ್, ಗಿಲ್ಕ್ರಿಸ್ಟ್, ಡೇವಿಡ್ ಹಸ್ಸಿ, ಡೇವಿಡ್ ಮಿಲ್ಲರ್, ಗುರುಕೀರ್ತ್ ಬ್ಯಾಟಿಂಗ್ ವಿಭಾಗದ ಬಲವಾಗಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಪ್ರವೀಣ್, ಅಜರ್, ಪಿಯೂಶ್, ಅವಾನ, ಹರ್ಮಿತ್ ಸಿಂಗ್, ಸಂದೀಪ್ ಶರ್ಮಾ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಆಡಿರುವ 14 ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿ 6 ಪಂದ್ಯಗಳಲ್ಲಿ ಸೋಲನುಭವಿಸಿ, 16 ಅಂಕಪಡೆದಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇನ್ನು ಸನ್ರೈಸರ್ಸ್ ಹೈದರಾಬಾದ್ 13 ಪಂದ್ಯಗಳಲ್ಲಿ 8 ಜಯದೊಂದಿಗೆ 16 ಅಂಕಪಡೆದಿದ್ದು 5ನೇ ಸ್ಥಾನದಲ್ಲಿದೆ. ಹಾಗಾಗಿ ಆರ್ಸಿಬಿ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಬೇಕಾದರೆ ಉಳಿದಿರುವ ಪಂದ್ಯಗಳಲ್ಲಿ ಜಯಗಳಿಸಬೇಕಾದ ಅನಿವಾರ್ಯತೆ ಇದೆ.
ಮಳೆ ಭೀತಿ: ಆರ್ಸಿಬಿ ತಂಡ ಉಳಿದ ಎರಡೂ ಪಂದ್ಯಗಳನ್ನು ತವರಿನಲ್ಲೇ ಆಡುತ್ತಿರುವುದು ತಂಡಕ್ಕೆ ನೆಮ್ಮದಿಯ ವಿಷಯವಾದರೆ, ಮಂಗಳವಾರದ ಪಂಜಾಬ್ ವಿರುದ್ಧದ ಹಾಗೂ ಮೇ 18ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಗಳಿಗೆ ಮಳೆಯ ಭೀತಿ ಇರುವುದು ತಂಡಕ್ಕೆ ಆತಂಕ ತಂದಿದೆ. ಒಂದು ವೇಳೆ ಈ ಎರಡೂ ಪಂದ್ಯಗಳು ಮಳೆಗೆ ಬಲಿಯಾದರೆ ಆರ್ಸಿಬಿ ಎರಡೂ ಪಂದ್ಯಗಳಿಂದ ಕೇವಲ 2 ಅಂಕಗಳನ್ನು ಪಡೆಯಲಿದೆ. ಪಂದ್ಯಾವಳಿಯಲ್ಲಿ ಇನ್ನು 3 ಪಂದ್ಯಗಳನ್ನಾಡಿರುವ ಸನ್ರೈಸರ್ಸ್ ತಂಡ ಕನಿಷ್ಠ 2 ಪಂದ್ಯಗಳಲ್ಲಿ ಸೋತರೆ ಮಾತ್ರ ಆರ್ಸಿಬಿ ಪ್ಲೇ ಆಫ್ ಕನಸು ನನಸಾಗಲಿದೆ. ಸನ್ರೈಸರ್ಸ್ ತಂಡ ತನ್ನ ಮೂರು ಪಂದ್ಯದಲ್ಲಿ ಕ್ರಮವಾಗಿ ಮುಂಬೈ ವಿರುದ್ಧ ಹೊರತು ಪಡಿಸಿದರೆ ಉಳಿದಂತೆ ರಾಜಸ್ಥಾನ್ ಹಾಗೂ ಕೆಕೆಆರ್ ವಿರುದ್ಧದ ಪಂದ್ಯವನ್ನು ತವರಿನಲ್ಲಿ ಆಡುತ್ತಿದ್ದು ಪ್ಲೇ ಆಫ್ ಸುತ್ತಿಗೆ ಪ್ರವೇಶಿಸುವ ಉತ್ತಮ ಅವಕಾಶ ಹೊಂದಿದೆ.
ಒಂದು ವೇಳೆ ಮುಂದಿನ ಪಂದ್ಯಗಳಲ್ಲಿ ಆರ್ಸಿಬಿ ಹಾಗೂ ಹೈದರಾಬಾದ್ ತಂಡಗಳು ತಲಾ 2 ಪಂದ್ಯಗಳಲ್ಲಿ ಜಯ ಸಾಧಿಸಿ ಸಮನಾದ ಅಂಕಗಳನ್ನು ಪಡೆದರೆ, ರನ್ರೇಟ್ನಲ್ಲಿ ಮೇಲುಗೈ ಸಾಧಿಸಿರುವ ಆರ್ಸಿಬಿ ಪ್ರಮುಖ ಸುತ್ತಿಗೆ ಪ್ರವೇಶ ಪಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


