ಸೂಪರ್ ಕಿಂಗ್ಸ್‌ಗೆ ದುರ್ಬಲ ಡೇರ್ ಡೆವಿಲ್ಸ್ ಎದುರಾಳಿ
ಚೆನ್ನೈ: ಈ ಬಾರಿಯ ಐಪಿಎಲ್‌ನ ಪ್ಲೇ ಆಫ್ ಹಂತಕ್ಕೆ ಅತ್ಯಂತ ಸನಿಹವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ, ಕಳಪೆ ಪ್ರದರ್ಶನದಿಂದಾಗಿ ಪ್ಲೇ-ಆಫ್ ಕನಸನ್ನು 'ಆಫ್' ಮಾಡಿಕೊಂಡಿರುವ ಡೆಲ್ಲಿ ಡೇರ್‌ಡೇವಿಲ್ಸ್ ತಂಡ ಈ ಪಂದ್ಯದಲ್ಲಿ ಬಲಿಷ್ಠ ತಂಡವೊಂದನ್ನು ಮಣಿಸುವ ಸವಾಲಿಗೆ ಸಜ್ಜಾಗಿದೆ.
ಇದುರೆಗೂ ಚೆನ್ನೈ ತಂಡ ತಾನು ಆಡಿರುವ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದುಕೊಂಡಿದೆ. ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿರುವ ಅದು, ಪ್ಲೇ ಆಫ್ ಹಂತಕ್ಕೆ ಕಾಲಿಡುವ ಉತ್ಸಾಹದಲ್ಲಿದೆ.
ಕಳೆದ ಪಂದ್ಯದಲ್ಲಿ ಅದು ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತಿದ್ದರೂ, ಈ ಬಾರಿ ಮತ್ತೆ ಗೆಲವಿನ ಹಾದಿಗೆ ಮರಳುವ ಸನ್ನಾಹದಲ್ಲಿದೆ. ಅದರ ಬ್ಯಾಟಿಂಗ್ ಲೈನ್-ಅಪ್ ಉತ್ತಮವಾಗಿರುವುದೇ ಆ ತಂಡದ ಸಕಾರಾತ್ಮಕ ಅಂಶ. ಮೈಕಲ್ ಹಸ್ಸಿ, ಸುರೇಶ್ ರೈನಾ, ನಾಯಕ ಮಹೇಂದ್ರಸಿಂಗ್ ಧೋನಿ ಅವರಂಥಾ ಆಟಗಾರರು ಪ್ರತೀ ಪಂದ್ಯದಲ್ಲೂ ಎದುರಾಳಿಗಳಿಗೆ ಸಿಂಹಸ್ವಪ್ನದಂತೆ ಕಾಡಿದ್ದಾರೆ. ಇನ್ನು, ಬೌಲಿಂಗ್ ವಿಭಾಗದಲ್ಲಿ ತಂಡಕ್ಕೆ ಅಲ್ಬಿ ಮಾರ್ಕೆಲ್, ಮೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್, ಕ್ರಿಸ್ ಮೋರಿಸ್ ಹಾಗೂ ಡ್ವೈನ್ ಬ್ರಾವೊ ಅವರಂಥಾ ಘಟಾನುಘಟಿ ಬೌಲರ್‌ಗಳು ತಂಡದ ಹಲವಾರು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಹಾಗಾಗಿ, ಮಂಗಳವಾರದ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡವೇ ಗೆಲ್ಲುವ ಫೇವರಿಟ್ ತಂಡವಾಗಿದೆ.
ಅತ್ತ, ಡೇರ್ ಡೆವಿಲ್ಸ್‌ನದ್ದು ಕೇವಲ ಔಪಚಾರಿಕ ಕಾದಾಟ. ಐಪಿಎಲ್ ಅಂಕಪಟ್ಟಿಯಲ್ಲಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿರುವ ಅದು, ಇದುವರೆಗೆ ತಾನು ಆಡಿರುವ 13 ಪಂದ್ಯಗಳಲ್ಲಿ 10ರಲ್ಲಿ ಸೋತಿದೆ.
ಈಗಾಗಲೇ, ಪ್ಲೇ-ಆಫ್ ಕನಸನ್ನು ಅದು ಬಿಟ್ಟಿರುವುದರಿಂದ 'ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲವಿವಾಗಿ ಹೋರಾಡಬೇಕಿಲ್ಲ. ಆದರೂ, ಗೆಲವು, ಡೆಲ್ಲಿ ತಂಡವನ್ನೇ ಹುಡುಕಿಕೊಂಡು ಬಂದಲ್ಲಿ ತೊಂದರೆಯೇನಿಲ್ಲ' - ಎನ್ನುವ ಪರಿಸ್ಥಿತಿಯಲ್ಲಿದೆ.
ಇನ್ನು, ಡೆಲ್ಲಿ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇವರೆಗಿನ ಪಂದ್ಯಾವಳಿಯುದ್ದಕ್ಕೂ ವೈಫಲ್ಯವನ್ನೇ ಅನುಭವಿಸಿದ್ದಾರೆ. ಆಸೀಸ್‌ನ ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಬಿಟ್ಟರೆ, ನಾಯಕ ಮಹೇಲಾ ಜಯವರ್ಧನೆ, ವೀರೇಂದ್ರ ಸೆಹ್ವಾಗ್ ಅವರಂಥಾ ಘಟನುಘಟಿಗಳು ವಿಫಲರಾಗಿದ್ದರು.
ಅಲ್ಲದೇ, ಉನ್ಮುಕ್ತ್ ಚಾಂದ್ ಹಾಗೂ ಬೆನ್ ರೊಹ್ರರ್ ಕೂಡಾ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮಾರ್ನೆ ಮಾರ್ಕೆಲ್, ಇರ್ಫಾನ್ ಪಠಾಣ್, ಉಮೇಶ್ ಯಾದವ್ ಹಾಗೂ ಶಾಬಾಜ್ ನದೀಂ ಅವರು ಮಂಗಳವಾರದ ಪಂದ್ಯದಲ್ಲಿ ಸಿಡಿದರೆ, ಚೆನ್ನೈ ವಿರುದ್ಧ ಉತ್ತಮ ಹೋರಾಟ ನಿರೀಕ್ಷಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

