ಏಷ್ಯನ್ ಅಥ್ಲೆಟಿಕ್ಸ್ಗೆ ದೆಹಲಿ ಸರ್ಕಾರ ರೆಡ್ ಸಿಗ್ನಲ್
ನವದೆಹಲಿ: ಇದೇ ವರ್ಷ ಜುಲೈನಲ್ಲಿ ನಡೆಯಬೇಕಿರುವ 20ನೇ ಏಷ್ಯನ್ ಅಥ್ಲೆಟಿಕ್ಸ್ ಕ್ರೀಡಾಕೂಟ ನೆನೆಗುದಿಗೆ ಬಿದ್ದಿದೆ. ಕ್ರೀಡಾಕೂಟದ ಆಯೋಜನೆ ಹೊಣೆ ಹೊತ್ತಿದ್ದ ದೆಹಲಿ ಸರ್ಕಾರ, ಈಗ ಹಿಂದೆ ಸರಿದಿರುವುದು ಇದಕ್ಕೆ ಪ್ರಮುಖ ಕಾರಣ.
ಆದರೆ, ಈ ಬಗ್ಗೆ ಗಮನ ಹರಿಸಿರುವ ದೆಹಲಿ ಲೆಫ್ಟನೆಂಟ್ ಗವರ್ನರ್ ತೇಜೇಂದ್ರ ಖನ್ನಾ ಅವರು, ದೆಹಲಿ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಆದರೆ, ಅತ್ತ, ದೆಹಲಿ ಸರ್ಕಾರ ಮಾತ್ರ ಗವರ್ನರ್ ಸೂಚನೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮುಗುಮ್ಮಾಗಿ ಕುಳಿತಿದೆ.
ಕಾರಣವೇನು?: ಜುಲೈ ತಿಂಗಳಿನಲ್ಲಿ ಮುಂಗಾರು ಮಳೆ ಆರಂಭವಾಗುವುದರಿಂದ ಪಂದ್ಯಾವಳಿಗೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ, ಪಂದ್ಯಾವಳಿ ಸುಗಮವಾಗಿ ನಡೆಯಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಷ್ಟವಾಗುತ್ತದೆಂಬ ಕಾರಣದಿಂದ ತಾನು ಪಂದ್ಯಾವಳಿ ಆಯೋಜನೆಯಿಂದ ಹಿಂದೆ ಸರಿದಿರುವುದಾಗಿ ಅದು ಹೇಳಿದೆ. ಆದರೆ, ಮೂಲಗಳ ಪ್ರಕಾರ, ಕಾಮನ್ವೆಲ್ತ್ ಹಗರಣದ ಹಿನ್ನೆಲೆಯಲ್ಲಿ ಕೆಟ್ಟ ಹೆಸರು ಬಂದಿದ್ದರಿಂದ ಈ ಬಾರಿ ಪಂದ್ಯಾವಳಿ ಆಯೋಜನೆಗೆ ದೆಹಲಿ ಸರ್ಕಾರ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
ಹಿಂದೆಯೂ ಸ್ಥಳಾಂತರಗೊಂಡಿತ್ತು: ಹಾಗೆ ನೋಡಿದರೆ, ಈ ಪಂದ್ಯಾವಳಿಯು ಚೆನ್ನೈನಲ್ಲೇ ನಡೆಯಬೇಕಿತ್ತು. ಆದರೆ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಪಂದ್ಯಾವಳಿಯಲ್ಲಿ ಲಂಕಾ ಆಟಗಾರರಿಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲವೆಂಬ ಧೋರಣೆ ತೆಗೆದುಕೊಂಡ ಹಿನ್ನೆಲೆಯಲ್ಲಿ, ಪಂದ್ಯಾವಳಿಯು ದೆಹಲಿಗೆ ಸ್ಥಳಾಂತರಗೊಂಡಿತ್ತು.ಆದರೆ, ಇದೀಗ, ಪೂರ್ವ ನಿಗದಿಯಂತೆ ಪಂದ್ಯಾವಳಿ ಆರಂಭಕ್ಕೆ ಕೇವಲ 1 ತಿಂಗಳಿರುವಾಗ, ಇದೀಗ ದೆಹಲಿ ಸರ್ಕಾರವೂ ಆಯೋಜನೆ ಸಾಧ್ಯವಿಲ್ಲವೆಂದಿದೆ. ಹಾಗಾಗಿ, ಇದೀಗ ಪಂದ್ಯಾವಳಿಯ ಆಯೋಜನೆ ಮತ್ತೆ ನೆನೆಗುದಿಗೆ ಬಿದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

