ಅಂತಿಮ ಸುತ್ತಿಗೆ ಕರ್ನಾಟಕ
ಬೆಂಗಳೂರು: ಆತಿಥೇಯ ಕರ್ನಾಟಕ ತಂಡ, ಈ ಬಾರಿಯ ರಂಗಸ್ವಾಮಿ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದೆ. ಮಂಗಳವಾರ ನಡೆದ ಸೆಮಿಫೈನಲ್ ಹಂತದ ಪಂದ್ಯದಲ್ಲಿ ಕರ್ನಾಟಕ ತಂಡ, ಪಂಜಾಬ್ ತಂಡವನ್ನು 2-1 ಅಂತರದಲ್ಲಿ ಸೋಲಿಸಿ, ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿತು. ಈ ಜಯದಿಂದಾಗಿ, ಕರ್ನಾಟಕ ತಂಡ ಒಟ್ಟು 11 ಅಂಕಗಳನ್ನು ಗಳಿಸಿ, ಪ್ರಶಸ್ತಿ ಸುತ್ತನ್ನು ಪ್ರವೇಶಿಸಿದೆ. 1968ರ ನಂತರ ಕರ್ನಾಟಕ ತಂಡ, ಹೀಗೆ ಫೈನಲ್ ಪ್ರವೇಶಿಸುತ್ತಿರುವುದು ಇದೇ ಮೊದಲ ಬಾರಿ. 1968ರಲ್ಲಿ ಆಗಿನ ಮೈಸೂರು ಹಾಕಿ ತಂಡ, ಫೈನಲ್ ಪ್ರವೇಶಿಸಿತ್ತಲ್ಲದೇ, ರನ್ನರ್-ಅಪ್ ಪ್ರಶಸ್ತಿಗೆ ಭಾಜನವಾಗಿತ್ತು.
ಕರ್ನಾಟಕ ಹಾಗೂ ಪಂಜಾಬ್ ನಡುವಿನ ಪಂದ್ಯ ತೀವ್ರ ಹಣಾಹಣಿಯಿಂದ ಕೂಡಿತ್ತು. ಪಂದ್ಯದ 9ನೇ ನಿಮಿಷದಲ್ಲಿ ಗೋಲು ಗಳಿಸಿದ ಕರ್ನಾಟಕದ ನವೀನ್ ಕುಮಾರ್, ತಮ್ಮ ತಂಡಕ್ಕೆ 1-0 ಅಂತರದ ಮುನ್ನಡೆಯನ್ನು ತಂದುಕೊಟ್ಟಿತು. ಇದಾದ ಮೇಲೆ ಕರ್ನಾಟಕದ ವಿನಾಯಕ ಬೆಜವಾಡ್ ಅವರು ಪಂದ್ಯದ 57ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ, ತಂಡಕ್ಕೆ 2-0 ಮುನ್ನಡೆಯನ್ನು ತಂದುಕೊಟ್ಟರು.
ಆದರೆ, ಕರ್ನಾಟಕ ತಂಡದ ಆಟಗಾರರ ಅಚಾತುರ್ಯದಿಂದಾದ ಸ್ವಯಂ ಗೋಲ್ನಿಂದಾಗಿ ಪಂಜಾಬ್ ತಂಡ ಒಂದು ಗೋಲು ಪಡೆಯಿತು. ಇದರಿಂದ ಪಂಜಾಬ್, ಪಂದ್ಯವನ್ನು ಶೂನ್ಯದಿಂದ ಸೋಲುವುದು ತಪ್ಪಿತು. ಅಂತಿಮವಾಗಿ, ಕರ್ನಾಟಕ ತಂಡ 2-1 ಅಂತರದಿಂದ ಪಂದ್ಯದಲ್ಲಿ ಜಯಶಾಲಿಯಾಯಿತು.
ಫೈನಲ್ ಎದುರಾಳಿ ಯಾರು?: ಫೈನಲ್ ಪಂದ್ಯದಲ್ಲಿ ಕರ್ನಾಟಕದ ಎದುರಾಳಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಬುಧವಾರ ನಡೆಯಲಿರುವ ಉತ್ತರ ಪ್ರದೇಶ ಹಾಗೂ ಮಣಿಪುರ ತಂಡಗಳ ನಡುವಿನ ಪಂದ್ಯ ಇದನ್ನು ನಿರ್ಧರಿಸಲಿದೆ. ಈ ಪಂದ್ಯದಲ್ಲಿ ಉತ್ತರ ಪ್ರದೇಶ 13-0ಅಂತರದಿಂದ ಮಣಿಪುರವನ್ನು ಸೋಲಿಸಿದರೆ, ಅದು ಫೈನಲ್ ಪ್ರವೇಶಿಸಲಿದೆ. ಅದು ಸಾಧ್ಯವಾಗದೇ ಇದ್ದಲ್ಲಿ, ಮುಂಬೈ ತಂಡ, ಫೈನಲ್ ಪ್ರವೇಶಿಸಲಿದೆ.
ಉತ್ತರ ಪ್ರದೇಶಕ್ಕೆ ಗೆಲವು
ಬೆಂಗಳೂರು: ರಂಗಸ್ವಾಮಿ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಅಂಗವಾಗಿ, ಮಂಗಳವಾರ ನಡೆದ ಮತ್ತೊಂದು ಪಂದ್ಯದಲ್ಲಿ, ಉತ್ತರ ಪ್ರದೇಶ ತಂಡ, ಜಾರ್ಖಂಡ್ ತಂಡವನ್ನು 11-0 ಗೋಲುಗಳ ಅಂತರದಿಂದ ಸೋಲಿಸಿತು. ಉತ್ತರ ಪ್ರದೇಶ ತಂಡದ ಪರವಾಗಿ, ಪ್ರೇಮ್ ಕುಮಾರ್ (5, 13, 38ನೇ ನಿಮಿಷ), ರವಿ ಭಾತಿ (18, 60ನೇ ನಿಮಿಷ), ಇಮ್ರಾನ್ ಖಾನ್ (37, 64ನೇ ನಿಮಿಷ), ದಿವಾಕರ್ ರಾಮ್ (47, 51, 59, 70ನೇ ನಿಮಿಷ) ಗೋಲು ಗಳಿಸಿದರು. ಎದುರಾಳಿ ತಂಡದಿಂದ ಯಾವುದೇ ಗೋಲು ದಾಖಲಾಗಲಿಲ್ಲ.
ಮುಂಬೈಗೆ ಜಯ
ಬೆಂಗಳೂರು: ಮಂಗಳವಾರ ನಡೆದ ಮತ್ತೊಂದು ಪಂದ್ಯದಲ್ಲಿ ಮುಂಬೈ ತಂಡ, ಮಣಿಪುರ ತಂಡವನ್ನು 21-3 ಗೋಲುಗಳ ಬಾರೀ ಅಂತರದಿಂದ ಸೋಲಿಸಿತು. ಮುಂಬೈ ತಂಡದ ಪರವಾಗಿ ಲಕ್ಷ್ಮಣ್ ರಾವ್ (2ನೇ ನಿಮಿಷ), ಜಯಂತ್ ಮೈಟಿ (3ನೇ, 16ನೇ ನಿಮಿಷ), ವಿಕ್ಟೋ ಸಿಂಗ್ (4ನೇ, 20, 23, 24, 26, 40, 55, 64, 67ನೇ ನಿಮಿಷ), ರವಿ ಪರೀಕ್ (5, 37, 57ನೇ ನಿಮಿಷ), ವಿಕ್ರಮ್ ಸಿಂಗ್ (21, 25ನೇ ನಿಮಿಷ), ರಜತ್ ಶರ್ಮಾ (31ನೇ ನಿಮಿಷ), ಉಪೇಂದ್ರ ಪಿಳ್ಳೈ (45, 48ನೇ ನಿಮಿಷ), ಜ್ಞಾನೇಂದ್ರಜಿತ್ ನಿಂಗೊಬಮ್ (69ನೇ ನಿಮಿಷ) ಗೋಲು ಗಳಿಸಿದರು. ಮಣಿಪುರ ಪರವಾಗಿ, ಪ್ರಿಯೊಂಕ್ಕುಮಾರ್ (10ನೇ ನಿಮಿಷ), ಪುಣಾಚಂದ್ರ (27, 41ನೇ ನಿಮಿಷ) ಗೋಲು ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

