ಕ್ರೀಡೆ

ಫುಟ್ಬಾಲ್: ಸದರ್ನ್ ಬ್ಲೂಸ್‌ಗೆ ಜಯ

Published On :

ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಪಂದ್ಯಾವಳಿಯ ಮಂಗಳವಾರದ ಪಂದ್ಯದಲ್ಲಿ ಸದರ್ನ್ ಬ್ಲೂ ತಂಡವು ಶ್ರೀ ಗಜಾನನ ತಂಡದ ವಿರುದ್ಧ 4-1 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಟ ಪ್ರದರ್ಶಿಸಿದ ಸದರ್ನ್ ಬ್ಲೂ ತಂಡದ ಪರ ಚಂದ್ರಶೇಖರ (8, 11ನೇ),  ಆದಿತ್ಯ (49,52ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನು ಗಜಾನನ ತಂಡದ ಪರ ಮಂಜ 26ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ದಿನದ ಮತ್ತೊಂದು ಪಂದ್ಯದಲ್ಲಿ ಧರ್ಮರಾಜ ಯೂನಿಯನ್ ತಂಡ 4-2 ಅಂತರದಲ್ಲಿ ಓರಿಯೆಂಟಲ್ ತಂಡವನ್ನು ಮಣಿಸಿತು. ಧರ್ಮರಾಜ ಯೂನಿಯನ್ ತಂಡದ ಪರ ಸೆಲ್ವಾ (15, 32ನೇ), ಲೆಯಾನ್ (52ನೇ), ಸುರೇಶ್ (19ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು. ಓರಿಯೆಂಟಲ್ ತಂಡದ ಪರ ಮುರಳಿ (50ನೇ), ರಘು (55ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.