ಕ್ರೀಡೆ

ವಿಶ್ವ ಹಾಕಿ ಲೀಗ್: ಜೂ. 4ರಿಂದ ಅಭ್ಯಾಸ ಶಿಬಿರ

Published On :

ಬೆಂಗಳೂರು: ಎಫ್‌ಐಎಚ್ ವಿಶ್ವ ಹಾಕಿ ಲೀಗ್ - ರೌಂಡ್ 3 (ಸೆಮಿಫೈನಲ್) ಹಿನ್ನೆಲೆಯಲ್ಲಿ ಭಾರತೀಯ ಹಾಕಿ ತಂಡದ ಅಭ್ಯಾಸ ಶಿಬಿರ ಮೇ 16ರಿಂದ ಬೆಂಗಳೂರಿನ ನೇತಾಜಿ ಸುಭಾಷ್ ಸದರನ್ ಸೆಂಟರ್‌ನಲ್ಲಿ ಆರಂಭಗೊಳ್ಳಲಿದೆ. ಜೂ. 4ರಂದು ಕ್ಯಾಂಪ್ ಮುಕ್ತಾಯಗೊಳ್ಳಲಿದೆ. ವಿಶ್ವ ಹಾಕಿ ಲೀಗ್ ರೌಂಡ್ 3 ಪಂದ್ಯಾವಳಿಯು ರಾಟರ್‌ಡ್ಯಾಂನಲ್ಲಿ ಜೂ. 13ರಿಂದ 23ರವರೆಗೆ ನಡೆಯಲಿದೆ.
ಇತ್ತೀಚೆಗೆ, ಹಾಲೆಂಡ್‌ಗೆ ತೆರಳಿದ್ದ ಭಾರತ ತಂಡ, ಅಲ್ಲಿಯೂ ಅಭ್ಯಾಸ ಪಂದ್ಯಗಳನ್ನು ಆಡಿತ್ತು. ಅಲ್ಲಿನ ರಾಷ್ಟ್ರೀಯ ತಂಡವನ್ನು ಎರಡು ಬಾರಿ ಸೋಲಿಸಿದ್ದ ಭಾರತ ತಂಡ, ಅಲ್ಲಿನ ಕ್ಲಬ್ ತಂಡಗಳ ವಿರುದ್ಧವೂ ಉತ್ತಮ ಪ್ರದರ್ಶನ ತೋರಿತ್ತು.
ಇದೇ ವರ್ಷ ಫೆಬ್ರವರಿಯಲ್ಲಿ ದೆಹಲಿಯ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ನಡೆದಿದ್ದ ವಿಶ್ವ ಹಾಕಿ ಲೀಗ್ - ರೌಂಡ್ 2ರ ಪಂದ್ಯಾವಳಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ, 'ವಿಶ್ವ ಹಾಕಿ ಲೀಗ್- ರೌಂಡ್ 3ರ ಪಂದ್ಯಾವಳಿಯಲ್ಲಿ ಆಡುವ ಅರ್ಹತೆಯನ್ನು ಭಾರತ ತಂಡ ಪಡೆದುಕೊಂಡಿತ್ತು.
2014ರಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ ಪಂದ್ಯಾವಳಿಗೆ, ವಿಶ್ವ ಹಾಕಿ ಲೀಗ್ - ರೌಂಡ್ 3 ಪಂದ್ಯಾವಳಿಯು ಅರ್ಹತಾ ಸುತ್ತಿನ ಪಂದ್ಯಾವಳಿಯಾಗಿದೆ. ಹಾಕಿ ವಿಶ್ವಕಪ್ ಪಂದ್ಯಾವಳಿ ಹಾಲೆಂಡ್‌ನ ಹೇಗ್ಸ್‌ನಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ತಂಡದಲ್ಲಿ ಒಟ್ಟು 33 ಕ್ರೀಡಾಳುಗಳು ಭಾಗವಹಿಸಲಿದ್ದಾರೆ.
ತಂಡ: ಪಿ.ಆರ್. ಶ್ರೀಜೇಶ್, ಪಿ.ಟಿ. ರಾವ್, ಶ್ರೀನಿವಾಸ ರಾವ್ ಕಠಾರು, ನಾನಕ್ ಸಿಂಗ್, ವಿ.ಆರ್. ರಘುನಾಥ್, ಸಂದೀಪ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಹರ್ಬಿಬ್ ಸಿಂಗ್ ಸಂಧು, ಸರ್ದಾರ್ ಸಿಂಗ್, ಕೊಠಾಜಿತ್ ಸಿಂಗ್, ಮನ್‌ಪ್ರೀತ್ ಸಿಂಗ್, ಎಂ.ಬಿ. ಅಯ್ಯಪ್ಪ, ಗುರ್‌ಮೇಯ್ಲ್ ಸಿಂಗ್, ವಿವೇಕ್ ಧಾರ್, ಎಸ್.ವಿ. ಸುನಿಲ್, ಶಿವೇಂದ್ರ ಸಿಂಗ್, ಡ್ಯಾನಿಶ್ ಮುಜ್ತಾಬಾ, ಎಸ್.ಕೆ. ಉತ್ತಪ್ಪ, ಪ್ರಧಾನ್ ಸೋಮಣ್ಣ, ನಿತಿನ್ ತಿಮ್ಮಯ್ಯ, ಯುವರಾಜ್ ವಾಲ್ಮೀಕಿ, ಧರ್ಮವೀರ್ ಸಿಂಗ್, ಆಕಾಶ್‌ದೀಪ್ ಸಿಂಗ್, ಎಂ.ಜಿ. ಪೂಣಚ್ಚ, ಅಮಿತ್ ರೋಹಿದಾಸ್, ಸಂಪತ್ ಕುಮಾರ್, ಮೇಲಾರಾಮ್, ಪರ್ದೀಪ್ ಮೊರ್, ಪ್ರಭದೀಪ್ ಸಿಂಗ್, ಪಿ.ಎಲ್. ತಿಮ್ಮಣ್ಣ, ಸುಖ್‌ದೇವ್ ಸಿಂಗ್, ಗುರ್‌ಪ್ರೀತ್ ಸಿಂಗ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.