ಉತ್ತರ ಪ್ರದೇಶ, ಪಂಜಾಬ್ ತಂಡಗಳಿಗೆ ಜಯ
ಬೆಂಗಳೂರು: 64ನೇ ರಂಗಸ್ವಾಮಿ ರಾಷ್ಟ್ರೀಯ ಹಾಕಿ ಪಂದ್ಯಾವಳಿ ಹಿನ್ನೆಲೆಯಲ್ಲಿ ಬುಧವಾರ ನಡೆದ ಪಂದ್ಯಗಳಲ್ಲಿ ಉತ್ತರ ಪ್ರದೇಶ ಹಾಗೂ ಪಂಜಾಬ್ ತಂಡಗಳು ಜಯಗಳಿಸಿವೆ.
ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ, ಮಣಿಪುರ ತಂಡವನ್ನು 19-2ರ ದೊಡ್ಡ ಅಂತರದಿಂದ ಸೋಲಿಸಿತು. ಇದಾದ ನಂತರ ನಡೆದ ಎರಡನೇ ಪಂದ್ಯದಲ್ಲಿ, ಪಂಜಾಬ್ ತಂಡ, ಜಾರ್ಖಂಡ್ ತಂಡವನ್ನು 6-0 ಅಂತರದಲ್ಲಿ ಪರಾಭವಗೊಳಿಸಿತು.
ಭಾರೀ ಗೆಲವು: ಪ್ರಸಕ್ತ ಪಂದ್ಯಾವಳಿಯಲ್ಲಿ ದುರ್ಬಲ ತಂಡವೆನಿಸಿಕೊಂಡಿರುವ ಮಣಿಪುರ ಹಾಗೂ ಬಲಿಷ್ಠ ಉತ್ತರ ಪ್ರದೇಶ ತಂಡದ ನಡುವಿನ ಕದನ, ಕುತೂಹಲವಾಗಿತ್ತು. ನಿರೀಕ್ಷೆಯಂತೆ, ಉತ್ತರ ಪ್ರದೇಶ ತಂಡ ಮಣಿಪುರ ತಂಡವನ್ನು 19-2ರ ಭಾರೀ ಅಂತರದಲ್ಲಿ ಸೋಲಿಸಿತು.
ಉತ್ತರ ಪ್ರದೇಶದ ಪರವಾಗಿ, ಪಂದ್ಯದ ಮೊದಲ ನಿಮಿಷದಲ್ಲೇ ಗೋಲು ಗಳಿಸಿದ್ದ ದಿವಾಕರ್ ರಾಮ್, ನಂತರ, 21ನೇ ಹಾಗೂ 46ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಅವರ ನಂತರ, ಪ್ರೇಮ್ ಕುಮಾರ್ ಅವರು 10, 16, 23, 26, 52ನೇ ನಿಮಿಷಗಳಲ್ಲಿ ಗೋಲು ಗಳಿಸಿಕೊಟ್ಟರು.
ಇವರಿಬ್ಬರ ನಂತರ, ಫಾರೂಕ್ ಅಲ್ವಿ ಅವರು 34ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಪ್ರಮೋದ್ ಕುಮಾರ್ ಅವರು, 40, 42ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಆನಂತರ, ಅಭಿಶೇಕ್ ಸಿಂಗ್ ಅವರು 12, 17, 18ನೇ ನಿಮಿಷಗಳಲ್ಲಿ ಹಾಗೂ ಇಮ್ರಾನ್ ಖಾನ್ 25, 28, 30, 32 ಹಾಗೂ 54ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು.
ಮಣಿಪುರ ಪರವಾಗಿ, ಪೂರ್ಣಚಂದ್ರ ಅವರು ಪಂದ್ಯದ 11ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಬಿಂದ್ಯಾ ಕುಮಾರ್ ಅವರು 46ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಪಂಜಾಬ್ಗೂ ಸುಲಭ ಜಯ: ಇನ್ನು, ಪಂಜಾಬ್ ಹಾಗೂ ಜಾರ್ಖಂಡ್ ನಡುವೆ ನಡೆದ ಪಂದ್ಯದಲ್ಲಿ, ಪಂಜಾಬ್ ಪಂದ್ಯದ ಆರಂಭದಿಂದಲೂ ಎದುರಾಳಿಗಳ ಮೇಲೆ ಹಿಡಿತ ಸಾಧಿಸಿತು. ಪಂಜಾಬ್ ಪರವಾಗಿ ಬಲ್ವಿಂದರ್ ಸಿಂಗ್ 20ನೇ ನಿಮಿಷ ಹಾಗೂ 41ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಸತ್ವಿಂದರ್ ಸಿಂಗ್ ಅವರು 36ನೇ ಹಾಗೂ 56ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಆನಂತರ, ಸಂಜೀವ್ ಕುಮಾರ್ ಅವರು 44ನೇ ಹಾಗೂ 57ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.
ಅತ್ತ, ಎದುರಾಳಿಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲದ ಕಾರಣ, ಪಂದ್ಯದಲ್ಲಿ ಪಂಜಾಬ್ ತಂಡ 6-0 ಅಂತರದಲ್ಲಿ ಗೆಲವು ಸಾಧಿಸಿತು.
ಅಂಕಪಟ್ಟಿ
ಸ್ಥಾನ ತಂಡ ಪಂದ್ಯ ಗೆಲವು ಸೋಲು ಡಾ ಅಂಕ
1. ಕರ್ನಾಟಕ 5 3 0 2 11
2. ಉ. ಪ್ರದೇಶ 5 3 1 1 10
3. ಮುಂಬೈ 5 3 2 0 10
4. ಪಂಜಾಬ್ 5 3 2 0 9
5. ಜಾರ್ಖಂಡ್ 5 1 4 0 3
6. ಮಣಿಪುರ 5 0 5 0 0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

