ಕ್ರೀಡೆ

ರಾಜ್ಯಮಟ್ಟದ ಬಾಕ್ಸಿಂಗ್

Published On :

ಬೆಂಗಳೂರು: ಕರ್ನಾಟಕ ಅಮೆಚುರ್ ಬಾಕ್ಸಿಂಗ್ ಸಂಸ್ಥೆ (ಕೆಎಬಿಎ)ಜೂನ್ 27 ರಿಂದ 29ರವರೆಗೆ ಕಿರಿಯ ಹಾಗೂ ಹಿರಿಯರಬಾಕ್ಸಿಂಗ್ ಚಾಂಪಿಯನ್‌ಷಿಪ್ ಆಯೋಜಿಸಿದೆ. ಪುರುಷ ಹಾಗೂ ಮಹಿಳಾ ವಿಭಾಗದಈ ಪಂದ್ಯಾವಳಿ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ಸಂಸ್ಥೆಯ ಕ್ಲಬ್‌ಗಳು ನೊಂದಾಯಿಸಿಕೊಳ್ಳಲು ಜೂನ್ 15ರಂದು ಕೊನೆಯ ದಿನಾಂಕವಾಗಿದೆ ಎಂದು ಕೆಎಬಿಎ ತಿಳಿಸಿದೆ.

ಮಿನರ್ವಗೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಯ ಬುಧವಾರದ ಪಂದ್ಯದಲ್ಲಿ ಮಿನರ್ವ ತಂಡವು ರಾಯಲ್ಸ್ ತಂಡದ ವಿರುದ್ಧ 6-0 ಅಂತರದ ಭರ್ಜರಿ ಜಯ ಸಾಧಿಸಿದೆ. ಮಿನರ್ವ ತಂಡದ ಪರ ಶ್ರೀಧರ್ 16, 33, 53ನೇ, ರಾಜನ್ 27ನೇ, ಅಮಿತ್ 59ನೇ, ಮುಕುಲ್ 68ನೇ  ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನು ದಿನದ ಮತ್ತೊಂದು ಪಂದ್ಯದಲ್ಲಿ ಜ್ಯುಪಿಟರ್ ತಂಡವು ತಿಲಕ್ ಮೆಮೊರಿಯಲ್ ತಂಡದ ವಿರುದ್ಧ 0-2 ಅಂತರದಲ್ಲಿ ಸೋಲನುಭವಿಸಿದ್ದಾರೆ. ತಿಲಕ್ ಮೆಮೊರಿಯಲ್ ತಂಡದ ಪರ ಅಖಿಲೇಶ್ 27ನೇ ಹಾಗೂ ಮಿಲ್ಟನ್ 53ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಬೆಂಗಳೂರಿನಲ್ಲಿ ಬೋಕಾ ಕ್ಲಬ್
ಬೆಂಗಳೂರು: ವಿಶ್ವ ಫುಟ್ಬಾಲ್‌ಗೆ ಡಿಗೊ ಮರಡೋನಾರಂತಹ ಅದ್ಭುತ ಆಟಗಾರನನ್ನು ಕೊಡುಗೆಯಾಗಿ ನೀಡಿದ್ದ ಬೋಕಾ ಜೂನಿಯರ್ಸ್ ಫುಟ್ಬಾಲ್ ಕ್ಲಬ್ ಮೊದಲ ಭಾರಿಗೆ ಭಾರತಕ್ಕೆ ಕಾಲಿಟ್ಟಿದೆ.   ಈ ಕ್ಲಬ್ ತನ್ನ ಅಕಾಡೆಮಿಯನ್ನು ಬೆಂಗಳೂರಿನಲ್ಲಿ ಆರಂಭಿಸುವ ಮೂಲಕ ಭಾರತಕ್ಕೆ ಕಾಲಿಟ್ಟಿದೆ. ಅರ್ಜೆಂಟೀನಾ ಮೂಲದ ಈ ಕ್ಲಬ್ ವಿಶ್ವದಲ್ಲಿ ಯಶಸ್ವಿಯಾದ ಕ್ಲಬ್‌ಗಳಲ್ಲಿ ಒಂದಾಗಿದೆ. ಅಲ್ಲದೆ ಈ ಕ್ಲಬ್‌ನಲ್ಲಿ ಮರಡೋನಾ, ಗಬ್ರಿಯಲ್ ಬಟಸ್ಟುಟ ಮತ್ತು ಕಾರ್ಲೊಸ್ ಟೆವೆಜ್ ತರಬೇತಿ ಪಡೆದಿದ್ದರು. ಇದೇ ಮೊದಲ ಬಾರಿಗೆ ಬೋಕಾ ಕ್ಲಬ್ ವರ್ಷಪೂರ್ತಿ ನಿರಂತರವಾಗಿ ಕಾರ್ಯನಿರ್ವಯಿಸುವ ಪುಟ್ಬಾಲ್ ಅಕಾಡೆಮಿಯನ್ನು ಭಾರತದಲ್ಲಿ ಆರಂಭಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.