ಪಾಕಿಸ್ತಾನಕ್ಕೆ ಏಕದಿನ ಸರಣಿ ಜಯ
ಡುಬ್ಲಿನ್: ಆರಂಭಿಕ ಕುಸಿತದ ನಡುವೆಯೂ ಕಮ್ರಾನ್ ಅಕ್ಮಲ್ ಹಾಗೂ ವಹಾಬ್ ರಿಯಾಜ್ ಅವರ ಜವಾಬ್ದಾರಿಯುತ ಜತೆಯಾಟದ ನೆರವಿನಿಂದ ಪಾಕಿಸ್ತಾನ ತಂಡವು ಐರ್ಲೆಂಡ್ ತಂಡದ ವಿರುದ್ಧದ 2ನೇ ಪಂದ್ಯದಲ್ಲಿ ಜಯ ಸಾಧಿಸಿದ್ದು, ಸರಣಿಯನ್ನು 1-0 ಅಂತರದಲ್ಲಿ ಜಯಗಳಿಸಿದೆ.
ಐರ್ಲೆಂಡ್ ತಂಡ ನೀಡಿದ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ 17 ರನ್ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ ಕಳೆದುಕೊಳ್ಳುವ ಮೂಲಕ ಆರಂಭಿಕ ಕುಸಿತ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಇಮ್ರಾನ್ ಫರಾತ್ (5), ನಾಸಿರ್ ಜೆಮ್ಷೆಡ್ (0), ಮಹಮದ್ ಹಫೀಜ್ (2) ಹಾಗೂ ಅಸಾದ್ ಶಫೀಕ್ (4) ಸತತವಾಗಿ ತಮ್ಮ ವಿಕೆಟ್ ಒಪ್ಪಿಸಿದರು.
ನಂತರ ಬಂದ ಮಿಸ್ಬಾ 24 ಹಾಗೂ ಶೊಹೆಬ್ ಮಲ್ಲಿಕ್ 43 ರನ್ಗಳಿಸಿ ತಂಡದ ಮೊತ್ತವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ನಂತರ ಕಮ್ರಾನ್ ಅಕ್ಮಲ್ ಹಾಗೂ ಬಾಲಂಗೋಚಿ ವಹಾಬ್ ರಿಯಾಜ್ 93 ರನ್ಗಳ ಜತೆಯಾಟ ನೀಡುವ ಮೂಲಕ ತಂಡವನ್ನು ಗೆಲವಿನ ದಡಕ್ಕೆ ತಂದು ಸೇರಿಸಿದರು. 85 ಎಸೆತಗಳನ್ನು ಎದುರಿಸಿದ ಅಕ್ಮಲ್ 11 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 81 ರನ್ಗಳಿಸಿದರು. ಇನ್ನು ರಿಯಾಜ್ 35 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸುವ ಮೂಲಕ ಅಜೇಯ 47 ರನ್ಗಳಿಸಿ ತಂಡಕ್ಕೆ ಜಯ ತಂದರು.
ಜೋಸ್ ಶತಕ ವ್ಯರ್ಥ: ಇದಕ್ಕು ಮೊದಲು ಟಾಸ್ ಸೋತರ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಐರ್ಲೆಂಡ್ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 229 ರನ್ಗಳನ್ನು ಕಲೆ ಹಾಕಿತು. ತಂಡದ ಪರ ಉತ್ತಮ ಬ್ಯಾಟಿಂಗ್ ನಡೆಸಿದ ಜೋಸ್ ಶತಕ ಸಿಡಿಸಿದರು.
132 ಎಸೆತಗಳನ್ನು ಎದುರಿಸಿದ ಜೋಸ್ 12 ಬೌಂಡರಿಗಳು ಹಾಗೂ 1 ಸಿಕ್ಸರ್ ಸೇರಿದಂತೆ ಅಜೇಯ 116 ರನ್ಗಳಿಸಿದರು. ಇವರಿಗೆ ತಕ್ಕ ಮಟ್ಟಿಗೆ ಸಾಥ್ ನೀಡಿದ ಕೆವಿನ್ ಒಬ್ರಿಯಾನ್ 38 ರನ್ಗಳಿಸಿದರು. ಇವರನ್ನು ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ ರನ್ ಕಲೆಹಾಕಲು ಯಶಸ್ವಿಯಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

