ಹರ್ಯಾಣಕ್ಕೆ ಚಾಂಪಿಯನ್ ಪಟ್ಟ
ನವದೆಹಲಿ: ಹರ್ಯಾಣದಲ್ಲಿ ನಡೆಯುತ್ತಿದ್ದ ಮೂರನೇ ರಾಷ್ಟ್ರೀಯ ಸಬ್ ಜೂನಿಯರ್ ಮಹಿಳಾ ಹಾಕಿ ಚಾಂಪಿಯನ್ಷಿಪ್ನಲ್ಲಿ ಹರ್ಯಾಣ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ, ಹರ್ಯಾಣ ತಂಡ, ಮಧ್ಯಪ್ರದೇಶ ತಂಡದ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯಗಳಿಸಿತು. ಹರ್ಯಾಣ ಪರವಾಗಿ, ಸೋನಿಕಾ (3ನೇ ನಿಮಿಷ), ರಿತೂ (35ನೇ ನಿಮಿಷ) ಹಾಗೂ ನವನೀತ್ ಕೌರ್ (49ನೇ ನಿಮಿಷ) ಗೋಲು ಗಳಿಸಿದರೆ, ಮಧ್ಯಪ್ರದೇಶದ ಪರವಾಗಿ, ಕರಿಷ್ಮಾ (4ನೇ ನಿಮಿಷ) ಹಾಗೂ ನೀಲೂ (24ನೇ ನಿಮಿಷ) ಗೋಲು ದಾಖಲಿಸಿದರು. ಹಾಲಿ ಚಾಂಪಿಯನ್ ಆಗಿದ್ದ ಮಧ್ಯಪ್ರದೇಶ ತಂಡ ಈ ಬಾರಿಯೂ ಚಾಂಪಿಯನ್ ಆಗುವ ಕನಸನ್ನು ಹೊತ್ತಿತ್ತು. ಆದರೆ, ಇದು ಸಾಧ್ಯವಾಗಲಿಲ್ಲ.
ಜಾರ್ಖಂಡ್ಗೆ ಮೂರನೇ ಸ್ಥಾನ: ಈ ಪಂದ್ಯಕ್ಕೂ ಮುನ್ನ, ಪಂದ್ಯಾವಳಿಯ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಾರ್ಖಂಡ್ ತಂಡ, ಚಂಡೀಗಢ ತಂಡವನ್ನು 2-1 ಅಂತರದಲ್ಲಿ ಸೋಲಿಸಿತು. ಜಾರ್ಖಂಡ್ ತಂಡದ ಪರವಾಗಿ ರೇಷ್ಮಾ (28ನೇ ನಿಮಿಷ), ದಿವ್ಯಾ (46ನೇ ನಿಮಿಷ) ಗೋಲು ಗಳಿಸಿದರೆ, ಚಂಡೀಗಢದ ಪರವಾಗಿ ಬಂದ ಏಕೈಕ ಗೋಲನ್ನು ಸರೋಜ್ ಅವರು ಪಂದ್ಯದ 64ನೇ ನಿಮಿಷದಲ್ಲಿ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

